ಮೈಕಾ ಇಲ್ಲದೆ ಕೂಗಿದರೆ ಆಜಾನ್ ಕೇಳದೇ? ಅಲ್ಲಾನೇನು ಕಿವುಡನೇ ?  ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ನಾಲಗೆ ಹರಿಯಬಿಟ್ಟ ಈಶ್ವರಪ್ಪ 

12-03-23 10:41 pm       Mangalore Correspondent   ಕರಾವಳಿ

ಕಾವೂರಿನಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಸ್ಲಿಮರ ಆಜಾನ್ ಕರೆಯ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರು, ಮಾ.12 : ಕಾವೂರಿನಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಸ್ಲಿಮರ ಆಜಾನ್ ಕರೆಯ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಕಾ ಇಲ್ಲದೆ ಆಜಾನ್ ಕೂಗಿದರೆ ಅಲ್ಲಾನಿಗೆ ಕೇಳದೇ, ಆತ ಕಿವುಡನೇ ಎಂದು ಪ್ರಶ್ನೆ ಮಾಡಿದ್ದಾರೆ. 

ಈಶ್ವರಪ್ಪ ಭಾಷಣ ಆರಂಭಿಸುತ್ತಿದ್ದಂತೆ ಪಕ್ಕದ ಮಸೀದಿಯಲ್ಲಿ ಆಜಾನ್ ಮೊಳಗಿತ್ತು. ಈ ವೇಳೆ, ಆಜಾನ್ ಹೆಸರು ಉಲ್ಲೇಖ ಮಾಡದೆ ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಕಡಿವಾಣ ಬೀಳಲಿದೆ. ಮೈಕಾದಲ್ಲಿ ಆಜಾನ್ ಕೂಗಿದರೆ ಮಾತ್ರವೇ ನಿಮ್ಮ ಅಲ್ಲಾನಿಗೆ ಕೇಳುವುದಾ.. ನಿಮ್ಮ ಅಲ್ಲಾನೇನು ಕಿವುಡನಾ.. ಮೈಕಾ ಇಲ್ಲದೆ ಆಜಾನ್ ಕೂಗಿದರೆ ಅಲ್ಲಾನಿಗೆ ಕೇಳದೇ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ. 

2024ರ ವೇಳೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ತಿಯಾಗುತ್ತದೆ. ಬಳಿಕ ಕಾಶಿ ವಿಶ್ವನಾಥ, ಮಥುರೆಯಲ್ಲಿಯೂ ಗುಲಾಮಗಿರಿಯ ಸಂಕೇತವಾದ ಅನ್ಯರ ಕಟ್ಟಡಗಳನ್ನು ದೇವಸ್ಥಾನ ಆವರಣದಿಂದ ತೆರವುಗೊಳಿಸುತ್ತೇವೆ. ಅಲ್ಲಿ ಅಯೋಧ್ಯೆ ಮಾದರಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ದೇವರ ಹೆಸರೇಳಿ ಆಣೆ ಮಾಡಿದರು. 

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಶಾಸಕ ಡಾ.ಭರತ್ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಮೇಯರ್ ಜಯಾನಂದ ಅಂಚನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಸೇರಿದಂತೆ ಹಲವರು ಇದ್ದರು.

Without Mic and speakers will Azaan not be heard, BJP leader Eshwarappa sparks another controversy in Mangalore. In the coming days we will stop all this practises he added. Is your God deaf that your prayers cant be heard without azan he questioned speaking at vijay sankalp rally.