ಬ್ರೇಕಿಂಗ್ ನ್ಯೂಸ್
31-03-23 10:34 pm Mangalore Correspondent ಕರಾವಳಿ
ಮಂಗಳೂರು, ಮಾ.31: ಎಸ್ಸಿ- ಎಸ್ಟಿ ಸೇರಿ ಎಲ್ಲ ಮೀಸಲಾತಿಯನ್ನು ತೆಗೆದುಹಾಕಲು ಬಿಜೆಪಿ ಸರ್ಕಾರ ಹೊರಟಿದೆ. ಸಾಮಾಜಿಕ ನ್ಯಾಯ ಗಾಳಿಗೆ ತೂರಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವುದು ಇವರ ಗುರಿ. ನಾಲ್ಕು ವರ್ಷದ ಆಡಳಿತ ಅವಧಿಯ ಕೊನೆಯಲ್ಲಿ ಈ ರೀತಿ ಒಬ್ಬರ ಮೀಸಲಾತಿ ತೆಗೆದು ಇನ್ನೊಬ್ಬರಿಗೆ ಕೊಟ್ಟು ಗೊಂದಲ ಸೃಷ್ಟಿಸುವುದರ ಹಿಂದಿನ ಉದ್ದೇಶ ಏನು ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಮೀಸಲಾತಿ ವಿರೋಧಿ ನೀತಿಯೇ ಬಿಜೆಪಿಯದ್ದು. ಎರಡು ಬಿಗೆ ಸಂಬಂಧಿಸಿ ಮುಸ್ಲಿಮರ ಮೀಸಲಾತಿ ತೆಗೆದು ಇನ್ನೊಬ್ಬರಿಗೆ ಕೊಟ್ಟಿದ್ದಾರೆ. ಆಮೂಲಕ ಜನರನ್ನು ಮೋಸ ಮಾಡಿದ್ದಾರೆ. ಲಾಲಿಪಾಪ್, ಚಾಕ್ಲೆಟ್ ಕೊಟ್ಟ ರೀತಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಇದರಿಂದ ಯಾರಿಗಾದರೂ ಪ್ರಯೋಜನ ಇದೆಯೇ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, 50 ಪರ್ಸೆಂಟ್ ಗಿಂತ ಹೆಚ್ಚು ಮೀಸಲು ಕೊಡುವಂತಿಲ್ಲ. ಇದನ್ನು ಕಳೆದ ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿಯೂ ನಿರ್ಧರಿಸಲಾಗಿತ್ತು. ಈಗ ರಾಜ್ಯ ಸರಕಾರ ಎಸ್ಸಿ ಎಸ್ಟಿಗೆ ಮೀಸಲಾತಿ ಹೆಚ್ಚಿಸಿ ಮಾಡಿರುವ ಆದೇಶವೂ ಸಂಸತ್ತಿನಲ್ಲಿ ಊರ್ಜಿತಗೊಂಡು ಒಂಬತ್ತನೇ ಶೆಡ್ಯೂಲ್ ನಲ್ಲಿ ಸೇರ್ಪಡೆ ಮಾಡಬೇಕು. ಅದನ್ನು ಮಾಡಲು ಸಾಧ್ಯವಿಲ್ಲ. ಇದು ಗೊತ್ತಿದ್ದರೂ ಬಿಜೆಪಿ ನಾಟಕ ಮಾಡುತ್ತಿದೆ ಎಂದು ಖಾದರ್ ದೂರಿದರು. ಮೀಸಲಾತಿ ಬಗ್ಗೆ ಗೊಂದಲ ಸೃಷ್ಟಿಸಿ ಇದನ್ನು ಪ್ರಶ್ನಿಸಿ ಯಾರಾದ್ರೂ ಕೋರ್ಟಿಗೆ ಹೋದಲ್ಲಿ ಎಲ್ಲರಿಗೂ ಮೀಸಲಾತಿ ಇಲ್ಲದಂತೆ ಮಾಡುವ ಹಿಡನ್ ಅಜೆಂಡಾ ಇದರ ಹಿಂದಿದೆ ಎಂದರು ಖಾದರ್.
ಬಹಳಷ್ಟು ಕಡೆ ನೀರಿನ ಸಮಸ್ಯೆ ಆಗಿದೆ. ಚುನಾವಣೆ ನೀತಿಸಂಹಿತೆ ಜನಸಾಮಾನ್ಯರಿಗೆ ತೊಂದರೆ ಆಗುವಂತೆ ಇರಬಾರದು. ಚುನಾವಣೆ ಸಂದರ್ಭದಲ್ಲಿ ಶಾಸಕರಾಗಲೀ, ರಾಜಕೀಯ ನಾಯಕರು ಅಧಿಕಾರಿಗಳನ್ನು ಕರೆಸಿ ಕೆಲಸ ಮಾಡಿಸಲು ಸಾಧ್ಯವಾಗಲ್ಲ. ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಕ್ತ ಅನುದಾನ ನೀಡಬೇಕು. ಅಲ್ಲದೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಯಾದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಡಳಿತ ಮಾಹಿತಿ ನೀಡಬೇಕು ಎಂದು ಖಾದರ್ ಒತ್ತಾಯಿಸಿದರು.
ಧಾರ್ಮಿಕ ಕೇಂದ್ರಗಳ ಆಚರಣೆ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಬೇಕು. ರಾಜಕೀಯ ನಾಯಕರು ಧಾರ್ಮಿಕ ಕೇಂದ್ರಗಳಲ್ಲಿ ಪಾಲ್ಗೊಳ್ಳುವಿಕೆಗೆ ಸಮಸ್ಯೆ ಇಲ್ಲ. ಅಲ್ಲಿ ಚುನಾವಣೆ ಪ್ರಚಾರ ಮಾಡಬಾರದು ಅಷ್ಟೆ. ಆದರೆ ಕೆಲವು ಅಧಿಕಾರಿಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡದೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗೊಂದಲ ನಿವಾರಿಸಬೇಕು ಎಂದು ಹೇಳಿದರು.
People are unaware of the model code of conduct. Officials should come forward and create awareness about it and to prevent its violation. Officials should provide a helpline number to the public," said MLA UT Khader. Addressing press persons at the DCC office here on Friday, March 31, he said officials have imposed restrictions on holding religious programmes. The officials should create awareness about this to the public, he added. MLA UT Khader condemns cancellation of the 2B reservation, saying the BJP has always against reservation
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm