ಬ್ರೇಕಿಂಗ್ ನ್ಯೂಸ್
18-04-23 11:12 pm Giridhar Shetty, Mangaluru ಕರಾವಳಿ
ಮಂಗಳೂರು, ಎ.18: ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಏಳು ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದ್ದು, ಮಂಗಳೂರು ಉತ್ತರ ಸೇರಿ ಎಂಟು ಕ್ಷೇತ್ರಗಳ ಅಭ್ಯರ್ಥಿ ಕಗ್ಗಂಟು ಮುಂದುವರಿದಿದೆ. ಇಬ್ಬರ ಟಿಕೆಟ್ ಜಗಳದಿಂದ ಮೂರನೇ ವ್ಯಕ್ತಿಗೆ ನಷ್ಟವಾಗುವ ಅಪರೂಪದ ಪ್ರಮೇಯ ಮಂಗಳೂರಿನಲ್ಲಿ ಎದುರಾಗಿರುವುದು ಟಿಕೆಟ್ ಹಗ್ಗ ಜಗ್ಗಾಟಕ್ಕೆ ಕಾರಣ ಎನ್ನಲಾಗುತ್ತಿದೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಇನಾಯತ್ ಆಲಿ ಮತ್ತು ಮಾಜಿ ಶಾಸಕ ಮೊಯ್ದೀನ್ ಬಾವ ಟಿಕೆಟ್ ಪಡೆಯಲು ತೀವ್ರ ಕಸರತ್ತು ನಡೆಸಿದ್ದಾರೆ. ಆದರೆ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಎಡವಿದ್ದಾರೆ. ಇನಾಯತ್ ಆಲಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಹಿಡಿದುಕೊಂಡಿದ್ದರೆ, ಮೊಯ್ದೀನ್ ಬಾವ ಸಿದ್ದರಾಮಯ್ಯ ಬಣದಲ್ಲಿ ಗುರುತಿಸ್ಕೊಂಡು ಟಿಕೆಟ್ ಪಡೆದೇ ತೀರುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಈ ನಡುವೆ, ಡಿಕೆಶಿ ಆರು ತಿಂಗಳ ಹಿಂದೆಯೇ ಇನಾಯತ್ ಆಲಿಗೆ ಟಿಕೆಟ್ ಖಾತ್ರಿ ಪಡಿಸಿ ಕೆಲಸ ಶುರು ಹಚ್ಚಿಕೊಳ್ಳುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಇದನ್ನರಿತ ಮೊಯ್ದೀನ್ ಬಾವ, ಸಿದ್ದರಾಮಯ್ಯ ಮುಂದಿಟ್ಟು ನಾಯಕರನ್ನೇ ಬ್ಲಾಕ್ಮೇಲ್ ಮಾಡುತ್ತಾ ಬಂದಿದ್ದರು.

ಕೆಲವರ ಮಾಹಿತಿ ಪ್ರಕಾರ, ಮೊಯ್ದೀನ್ ಬಾವ ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ದರೆ ಬಂಡಾಯ ಏಳುತ್ತಾರೆ. ಅಷ್ಟೇ ಅಲ್ಲ, ಬಂಡಾಯ ಎದ್ದು ಯು.ಟಿ.ಖಾದರ್ ವಿರುದ್ಧ ಉಳ್ಳಾಲದಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಲಿದ್ದಾರೆ. ಆಮೂಲಕ ಯುಟಿ ಖಾದರ್ ಸೋಲುವಂತೆ ಮಾಡಲಿದ್ದಾರೆ ಎನ್ನುವ ಭೀತಿ ಕಾಂಗ್ರೆಸ್ ರಾಜ್ಯ ನಾಯಕರಲ್ಲಿದೆ. ಈ ರೀತಿಯ ಭಯ ಸ್ವತಃ ಯುಟಿ ಖಾದರ್ ಅವರನ್ನೂ ಕಾಡುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಉಳ್ಳಾಲದಲ್ಲಿ ಎಸ್ಡಿಪಿಐ ಸ್ಪರ್ಧಿಸಿ ಖಾದರ್ ಬಗಲಲ್ಲಿರುವ ಮುಸ್ಲಿಂ ಮತಗಳನ್ನು ಕಿತ್ತುಕೊಳ್ಳಲು ಹೊರಟಿದೆ. ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ರಿಯಾಜ್ ಪರಂಗಿಪೇಟೆ ಉಳ್ಳಾಲದಲ್ಲಿ ಮತಬ್ಯಾಂಕ್ ಸೃಷ್ಟಿಸಲು ದಾಳ ಉರುಳಿಸಿದ್ದಾರೆ. ಇದರ ನಡುವೆ, ಮೊಯ್ದೀನ್ ಬಾವ ಸ್ಪರ್ಧಿಸಿದರೆ ಮುಸ್ಲಿಂ ಮತಗಳು ಚದುರಿ ಹೋಗಿ ಖಾದರ್ ಸೋಲಬಹುದು ಎನ್ನುವ ಭಯ ಕಾಂಗ್ರೆಸ್ ನಾಯಕರಲ್ಲಿದೆ.

ಉಳ್ಳಾಲದಲ್ಲಿ ಫಾರೂಕ್ ಇದಿರೇಟಿನ ಭಯ
ಇಂಥ ಭೀತಿ ಸೃಷ್ಟಿಯಾಗಲು ಕಾರಣವಾಗಿದ್ದು ಮೊಯ್ದೀನ್ ಬಾವ ಸೋದರ, ಜೆಡಿಎಸ್ ನಲ್ಲಿರುವ ಬಿಎಂ ಫಾರೂಕ್ ಹೇಳಿದ್ದ ಆ ಮಾತು. ಆರು ತಿಂಗಳ ಹಿಂದೆಯೇ ಡಿಕೆ ಶಿವಕುಮಾರ್, ಜೆಡಿಎಸ್ ನಲ್ಲಿರುವ ಫಾರೂಕ್ ಅವರನ್ನು ಕಾಂಗ್ರೆಸಿಗೆ ಕರೆತರಲು ಮಾತುಕತೆ ನಡೆಸಿದ್ದರಂತೆ. ಆ ಸಂದರ್ಭದಲ್ಲಿ ಫಾರೂಕ್, ನಿಮ್ಮ ಪಕ್ಷದಲ್ಲಿಯೇ ಅಲ್ಪಸಂಖ್ಯಾತರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಮೊಯ್ದೀನ್ ಬಾವಾಗೆ ಟಿಕೆಟ್ ತಪ್ಪಿಸಲು ಹೊರಟಿದ್ದೀರಿ. ನೀವು ಮುಸ್ಲಿಂ ಮುಖಂಡರನ್ನು ಹೇಗೆ ನಡೆಸಿಕೊಂಡಿದ್ದೀರಿ ಅನ್ನೋದು ಚೆನ್ನಾಗಿ ತಿಳಿದಿದೆ ಎಂದು ಸಿಡುಕಿನ ಮಾತನಾಡಿದ್ದರು. ಅಷ್ಟೇ ಅಲ್ಲ, ನಿಮ್ಮ ಕಳ್ಳಾಟಕ್ಕೆ ಮದ್ದರೆಯಲು ನನಗೂ ಗೊತ್ತಿದೆ ಎಂದೂ ತಿರುಗೇಟು ನೀಡಿದ್ದರು. ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಮೊಯ್ದೀನ್ ಬಾವಾಗೂ ಡಿಕೆಶಿಗೂ ವ್ಯವಹಾರದ ವಿಷಯದಲ್ಲಿ ಹಿಡಿದು ಬಂದಿತ್ತು. ಅದೇ ಕಾರಣಕ್ಕೆ ಡಿಕೆಶಿ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ವಾರ್ನ್ ಮಾಡಿದ್ದರಂತೆ. ಈಗ ಬಾವ ಕ್ಷೇತ್ರದಲ್ಲಿಯೇ ಮತ್ತೊಬ್ಬ ಪ್ರಬಲ ಮುಸ್ಲಿಂ ನಾಯಕನನ್ನು ಮೊಯ್ದೀನ್ ಬಾವ ವಿರುದ್ಧ ನಿಲ್ಲುವಂತೆ ಮಾಡಲು ಡಿಕೆಶಿ ಯಶಸ್ವಿಯಾಗಿದ್ದಾರೆ. ಇದಕ್ಕೆಲ್ಲ ಯುಟಿ ಖಾದರ್ ಹಿಂದಿನಿಂದ ಕೆಲಸ ಮಾಡಿದ್ದಾರೆ ಅನ್ನೋ ಭಾವನೆ ಮೊಯ್ದೀನ್ ಬಾವ ಮತ್ತು ಇತರ ಸೋದರರಲ್ಲಿದೆ. ಹೀಗಾಗಿ ಫಾರೂಕ್ ತನ್ನ ಸೋದರ ಮೊಯ್ದೀನ್ ಬಾವನಿಗೆ ಟಿಕೆಟ್ ತಪ್ಪಿಸಿದರೆ ಆತ ಅಥವಾ ತಾನೇ ಉಳ್ಳಾಲದಲ್ಲಿ ಸ್ಪರ್ಧಿಸಿ ಖಾದರ್ ಸೋಲಿಸಲು ಪಣ ತೊಟ್ಟಿದ್ದಾರೆ ಎನ್ನುವ ಮಾಹಿತಿಗಳಿವೆ.

ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭ
ಮೊಯ್ದೀನ್ ಬಾವ ಮತ್ತು ಇನಾಯತ್ ಆಲಿ ನಡುವಿನ ಹೊಯ್ದಾಟದಿಂದ ಬೇಸತ್ತು ಹೋಗಿರುವ ರಾಜ್ಯ ನಾಯಕರು, ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಇದ್ದರೂ, ಟಿಕೆಟ್ ಫೈನಲ್ ಮಾಡುವಲ್ಲಿ ಎಡವಿದ್ದಾರೆ. ಮೊಯ್ದೀನ್ ಬಾವ ಪರ ಬ್ಯಾಟಿಂಗ್ ಮಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ಮನವೊಲಿಸಲು ಇತ್ತೀಚೆಗೆ ಡಿಕೆಶಿ ಯಶಸ್ವಿಯಾಗಿದ್ದರು ಎನ್ನಲಾಗಿತ್ತು. ಆದರೆ, ಖಾದರ್ ಸೋಲಿಗೆ ಗುನ್ನಾ ಇಟ್ಟಿರುವ ಹೊಸ ದಾಳ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನೇ ಅಲುಗಾಡಿಸಿದೆ. ವಿಧಾನಸಭೆ ವಿಪಕ್ಷ ಉಪ ನಾಯಕ ಮತ್ತು ಕರಾವಳಿ ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಯುಟಿ ಖಾದರ್ ಸೋಲಿಗೆ ತಮ್ಮ ನಡೆಯೇ ಕಾರಣವಾಗುತ್ತದೆ ಎನ್ನುವ ಭೀತಿ ರಾಜ್ಯ ನಾಯಕರಲ್ಲಿದೆ. ಹೀಗಾಗಿ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸಿದರೆ ಹೇಗೆ ಎನ್ನುವ ಚಿಂತನೆಯೂ ಇವರಲ್ಲಿದೆಯಂತೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಈಗಾಗಲೇ ಇಬ್ಬರು ಮಹಿಳೆಯರಿಗೆ ಸೀಟು ಕೊಡಲಾಗಿದೆ. ಅಲ್ಲದೆ, ಇಬ್ಬರು ಬಿಲ್ಲವರಿಗೂ ಟಿಕೆಟ್ ನೀಡಿ ಜಾತಿ ಸಮೀಕರಣ ಮಾಡಲಾಗಿದೆ. ಕಾಂಗ್ರೆಸಿನಿಂದ ಒಬ್ಬ ವ್ಯಕ್ತಿಗಷ್ಟೇ ಸೀಟು ಕೊಟ್ಟಿರುವುದು ಬಿಲ್ಲವರಿಗೆ ಹಿನ್ನಡೆ ಎನ್ನುವ ಆರೋಪವೂ ಕೇಳಿಬರುತ್ತಿದೆ. ಇದೇ ಆಧಾರದಲ್ಲಿ ಬಿಲ್ಲವ ಮಹಿಳೆಗೆ ಟಿಕೆಟ್ ಕೊಟ್ಟರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೀಬಹುದಾ ಅನ್ನುವ ಲೆಕ್ಕಾಚಾರ ಆಗ್ತಾ ಇದೆ. ಇನಾಯತ್ ಆಲಿಯನ್ನು ಪರಿಷತ್ತಿಗೆ ಕಳಿಸುವ ಮಾತುಕತೆಯಾದಲ್ಲಿ ಮಂಗಳೂರು ಉತ್ತರದಲ್ಲಿ ಮೊಯ್ದೀನ್ ಬಾವ ಬಣದಲ್ಲಿ ಗುರುತಿಸಿರುವ ಪ್ರತಿಭಾ ಕುಳಾಯಿ ಸೀಟು ಗಿಟ್ಟಿಸಬಹುದು. ಹಾಗಾದಲ್ಲಿ ಬಿಜೆಪಿಯ ಭರತ್ ಶೆಟ್ಟಿ ವಿರುದ್ಧ ಪ್ರಬಲ ಸ್ಪರ್ಧೆ ಆಗೋದಂತೂ ಖಚಿತ.
Congress north ticket fight between Mohiuddin Bava and Inayat Ali, Bava threatens of joining JDS and will contest against UT Khader in Ullal whcih has gripped fear in Khader as votes will divide between SDPI and Congress.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm