ಬ್ರೇಕಿಂಗ್ ನ್ಯೂಸ್
20-04-23 10:43 pm Mangalore Correspondent ಕರಾವಳಿ
ಪುತ್ತೂರು, ಎ.20: ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರವಾಗಿ ಕಾರ್ಯಕರ್ತರೇ ಇಲ್ಲ ಎನ್ನುವ ಸ್ಥಿತಿ ಎದುರಾಗಿದೆ. ಹೀಗಾಗಿ ಇಂದು ನಾಮಪತ್ರ ಸಲ್ಲಿಕೆ ದಿನ ಮರ್ಯಾದೆ ಹೋಗಬಾರದು ಎಂದು ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಬಸ್ ಮಾಡಿ ಕಾರ್ಯಕರ್ತರನ್ನು ತರಿಸಿಕೊಳ್ಳುವ ಪ್ರಮೇಯ ಎದುರಾಗಿತ್ತು. ಅಲ್ಲದೆ, ಸ್ಟಾರ್ ಪ್ರಚಾರಕರಾದ ಚಿತ್ರನಟಿ ಶೃತಿ ಮತ್ತು ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಆಗಮಿಸಿದ್ದರು.
ಇದಕ್ಕೆ ಪ್ರತಿಯಾಗಿ ಪುತ್ತೂರಿನ ಬಿಜೆಪಿ ಕಾರ್ಯಕರ್ತರು ಹಳೆಯ ತುಳು ಹಾಡಿನ ತುಣುಕೊಂದನ್ನು ಪುತ್ತೂರು ಬಿಜೆಪಿ ಅಂತ ಹೇಳಿ ಅಣಕಿಸುವ ರೀತಿ ಹರಿಯಬಿಟ್ಟಿದ್ದಾರೆ. ಮದಿಮೆ ಒಂಜಿ ಆಂಡ್ ಗೆತ್ತಾ (ಮದುವೆಯೊಂದು ಆಯ್ತಲ್ಲಾ) ಎನ್ನುವ ತುಳು ಹಾಡಿನಲ್ಲಿ ಮದುವೆಗೆ ಬಂದವರನ್ನೆಲ್ಲ ಹೇಳಿ ಹಾಡುವ ರೀತಿಯಿದೆ. ಬೇಲೂರಿಂದ ನೂರು ಜನ, ಕಾರ್ಕಳದಿಂದ ಸಾವಿರ ಜನ, ಮಲ್ಪೆಯಿಂದ 200 ಜನ, ಕುಡ್ಲದಿಂದ ಸಾರ ಜನ ಹೀಗೆ ಹಾಡು ಸಾಗುತ್ತದೆ.
ಪುತ್ತೂರು ಬಿಜೆಪಿಯಲ್ಲಿ ಕಾರ್ಯಕರ್ತರೆಲ್ಲ ಬಂಡಾಯ ಅಭ್ಯರ್ಥಿ ಅರುಣ್ ಪುತ್ತಿಲ ಪರವಾಗಿ ನಿಂತಿದ್ದರಿಂದ ಅಧಿಕೃತ ಅಭ್ಯರ್ಥಿ ಪರವಾಗಿ ಕಾರ್ಯಕರ್ತರೇ ಇಲ್ಲದಂತಹ ಸನ್ನಿವೇಶ ಎದುರಾಗಿದೆ. ಇಂಥ ಸ್ಥಿತಿಯನ್ನು ಚೆನ್ನಾಗಿ ಅಣಕಿಸುವ ರೀತಿ ಈ ಹಾಡನ್ನು ಬಳಸಿಕೊಳ್ಳಲಾಗಿದ್ದು, ಇವತ್ತಿನ ಪ್ರಚಾರ ಯಾತ್ರೆಗೆ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಜನರು ಬಂದು ಮರ್ಯಾದೆ ಉಳಿಸಿಕೊಂಡಿದ್ದಾರೆ ಎಂಬುದನ್ನು ಸಾರಿ ಹೇಳುತ್ತಿದೆ. ಮಾಹಿತಿ ಪ್ರಕಾರ, ಮಂಗಳೂರು, ಉಳ್ಳಾಲ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದ್ರೆಯಿಂದ ಬಸ್ ಮಾಡಿ ಜನರನ್ನು ಪುತ್ತೂರಿಗೆ ಒಯ್ಯಲಾಗಿತ್ತು. ಇದರ ನಡುವೆ, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಇಂದಿನ ಸಮಾವೇಶದಲ್ಲಿ ಬರೆದು ಕೊಟ್ಟ ಭಾಷಣವನ್ನು ಓದುವಾಗಲೇ ಎಡವಿದ್ದು, ತೊದಲಿದ್ದರ ವಿಡಿಯೋ ಕೂಡ ವೈರಲ್ ಆಗಿದೆ.
ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಭಾವ ಇರುವ ಸಂಘ ಪರಿವಾರದ ಶಕ್ತಿಕೇಂದ್ರ ಪುತ್ತೂರಿನಲ್ಲೇ ಈ ಪರಿ ನಾಯಕರ ವಿರುದ್ಧ ಬಂಡಾಯ ಎದ್ದಿರುವುದು ಇದೇ ಮೊದಲಾಗಿದ್ದು, ಬ್ರಾಹ್ಮಣರು, ಬಂಟರು, ಕುಲಾಲರು, ಗೌಡರು ಆದಿಯಾಗಿ ಪರಿವಾರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಬಹುತೇಕರು ಅರುಣ್ ಪುತ್ತಿಲ ಪರ ನಿಂತಿದ್ದಾರೆ. ಅರುಣ್ ಪುತ್ತಿಲ ನಾಮಪತ್ರ ಹಿಂತೆಗೆಯದೆ, ಬಿಜೆಪಿ ನಾಯಕರ ವಿರುದ್ಧ ತೊಡೆ ತಟ್ಟಿ ನಿಂತಿದ್ದೇ ಆದರೆ, ಈಗಾಗಲೇ ಪರಿವಾರ ಸಂಘಟನೆಯಲ್ಲಿ ಸೈಡ್ ಲೈನ್ ಆಗಿರುವ ಸತ್ಯಜಿತ್ ಸುರತ್ಕಲ್, ಫ್ರಾಂಕ್ಲಿನ್ ಮೊಂತೇರೊ ಸೇರಿದಂತೆ ಹಿಂದು ನಾಯಕರೆಲ್ಲ ಪುತ್ತೂರಿನಲ್ಲಿ ಪ್ರಚಾರಕ್ಕೆ ಸೇರಿಕೊಳ್ಳಲಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸರ್ವಾಧಿಕಾರಿ ಧೋರಣೆ ವಿರುದ್ಧ ತೊಡೆ ತಟ್ಟಲಿದ್ದಾರೆ.
Puttur Asha Thimmappa Gowda files nomination, Mp Tejasvi Surya Actress Shruthi join hands in huge rally. As Arun Puthila has divided puttur kesari votes, Asha had to call for BJP members from otber various parts of Dakshina Kannada.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 07:31 pm
HK News Desk
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm