ಸಿದ್ಧಕಟ್ಟೆ ; ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮಹಡಿ ಮೇಲಿನಿಂದ ಬಿದ್ದು ಯುವಕ ಸಾವು 

21-04-23 10:21 am       Mangalore Correspondent   ಕರಾವಳಿ

ಯುವಕನೋರ್ವ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ಮಾಡಮೆ ಎಂಬಲ್ಲಿ ನಡೆದಿದೆ.

ಬಂಟ್ವಾಳ,  ಎ.21: ಯುವಕನೋರ್ವ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ಮಾಡಮೆ ಎಂಬಲ್ಲಿ ನಡೆದಿದೆ.

ಸಿದ್ದಕಟ್ಟೆ ದೇವಸ್ಯ ನಿವಾಸಿ ದುರ್ಗಾ ಪ್ರಸಾದ್ ಮೃತರು. 

ದುರ್ಗಾ ಪ್ರಸಾದ್ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಮನೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಾಗಿದೆ.

Mangalore Youth falls to death during plumbing work at Siddakatte in Bantwal. The deceased has been identified as Durga Prasad.