ಮಾನಹಾನಿ ವರದಿ ಹಾಕಬೇಡಿ ; ಶಾಸಕ ವೇದವ್ಯಾಸ ಕಾಮತ್ ಸರದಿ, ಕೋರ್ಟಿನಿಂದ ತಡೆಯಾಜ್ಞೆ  

22-04-23 04:53 pm       Mangalore Correspondent   ಕರಾವಳಿ

ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕಾರಣಿಗಳು, ಚುನಾವಣೆ ಕಣಕ್ಕೆ ನಿಂತ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಕೋರ್ಟಿನಿಂದ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಮಾಡದಂತೆ ತಡೆಯಾಜ್ಞೆ ತಂದಿದ್ದರು.

ಮಂಗಳೂರು, ಎ.22 : ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕಾರಣಿಗಳು, ಚುನಾವಣೆ ಕಣಕ್ಕೆ ನಿಂತ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಕೋರ್ಟಿನಿಂದ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಮಾಡದಂತೆ ತಡೆಯಾಜ್ಞೆ ತಂದಿದ್ದರು. ಇದೀಗ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ವೇದವ್ಯಾಸ್ ಕಾಮತ್ ಸರದಿ. 

ಬೇರೆ ಶಾಸಕರ ರೀತಿಯಲ್ಲೇ ವೇದವ್ಯಾಸ ಕಾಮತ್, ಮಂಗಳೂರು ಜೆಎಂಎಫ್ ಕೋರ್ಟಿನಿಂದ ತನ್ನ ವಿರುದ್ಧ ಮಾನಹಾನಿಕರ ವರದಿ, ಚಿತ್ರ, ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದು ಸುದ್ದಿಗೆ ಆಹಾರವಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೆಲವು ಶಾಸಕರನ್ನು ಮಾನಹಾನಿ ಸುದ್ದಿ, ಎಡಿಟೆಡ್ ವಿಡಿಯೋ ಪ್ರಕಟಿಸುವ ಮೂಲಕ ಕೆಲವರು ಬ್ಲಾಕ್ಮೇಲ್ ಮಾಡುತ್ತಾರೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಈ ರೀತಿಯ ತಡೆಯಾಜ್ಞೆ ತಂದಿರುವುದಾಗಿ ಬಿಜೆಪಿ ಮೂಲಗಳ ಮಾಹಿತಿ. 

ಆದರೆ ಚುನಾವಣೆ ಸಂದರ್ಭದಲ್ಲಿ ಈ ರೀತಿ ತಡೆಯಾಜ್ಞೆ ತರುವುದು ಜನರಲ್ಲಿ ಜಿಜ್ಞಾಸೆ ಹುಟ್ಟಿಸುತ್ತದೆ. ಏನೇ ವಿಚಾರ ಇದ್ದರೂ, ಚರ್ಚೆಗೆ ಕಾರಣವಾಗುತ್ತದೆ. ಶಾಸಕ ವೇದವ್ಯಾಸ ಕಾಮತ್ ಆಪ್ತರ ಬಳಿ ಈ ಬಗ್ಗೆ ಕೇಳಿದಾಗ, ಅವರನ್ನು ಕೊಲೆ ಆರೋಪಿಯೆಂದು ಬಿಂಬಿಸಿ ಜಾಲತಾಣದಲ್ಲಿ ಮಾನಹಾನಿ ಆಗುವ ರೀತಿ ಕೆಲವರು ಬಿಂಬಿಸುತ್ತಿದ್ದಾರಂತೆ.‌ ಅದಕ್ಕಾಗಿ ತಡೆಯಾಜ್ಞೆ ತಂದಿದ್ದಾಗಿ ತಿಳಿಸಿದ್ದಾರೆ.

Mangalore BJP south MLA Vedavyas kamath brings Restraining Order against Media Houses after MLA Umanatha Kotian.The BJP Mangaluru South MLA should reveal the reason for bringing a restraining order against 67 media houses from publishing defamatory statements, photos, videos and articles.