ಬ್ರೇಕಿಂಗ್ ನ್ಯೂಸ್
22-04-23 06:17 pm Mangalore Correspondent ಕರಾವಳಿ
ಬೆಳ್ತಂಗಡಿ, ಎ.22 : ದಕ್ಷಿಣ ಕನ್ನಡ ಜಿಲ್ಲೆಯವರು ಸಂಭಾವಿತರು, ಸಚ್ಚಾರಿತ್ರ್ಯವಂತರು ಅಂತಾರೆ. ಆದರೆ ಇಲ್ಲಿನ ಕೆಲವು ಶಾಸಕರು ತಮ್ಮ ಚಿತ್ರ ತೋರಿಸಬೇಡಿ ಎಂದು ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಬಿಜೆಪಿ ಗರ್ಭಗುಡಿಯಲ್ಲಿ ಎಂಥ ಹುಳುಕು ಇದೆಯೆಂದು ತಿಳಿಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಉಜಿರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಬಾಂಬೆ ಬಾಯ್ಸ್ ಸಿಡಿ ವಿಚಾರದಲ್ಲಿ ಸ್ಟೇ ತಂದಿರೋದು ಎಲ್ಲರಿಗು ಗೊತ್ತಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಬಿಜೆಪಿ ಶಾಸಕರು ಕೋರ್ಟ್ ಸ್ಟೇ ತಂದಿದ್ದು ಯಾಕೆ ? ರಾಜ್ಯದಲ್ಲಿ ಯಾರಾದ್ರೂ ಮಹಿಳೆಯರು, ಬಿಜೆಪಿ ಆಡಳಿತ ಉತ್ತಮವಾಗಿತ್ತು ಎಂದು ಹೇಳಿಕೊಂಡರೆ ಅದನ್ನು ನಾನು ಒಪ್ಪುತ್ತೇನೆ. ಇವರ ಸಿಡಿ ಬರುತ್ತೆ, ತಮ್ಮ ವಿಡಿಯೋ ಹೊರಬಾರದು ಅಂತ ಇವರು ಕೋರ್ಟಿನಿಂದ ತಡೆ ತರೋದು ಅಂದ್ರೆ ಇವರನ್ನು ಯಾರು ಒಪ್ಪುತ್ತಾರೆ ಎಂದು ಪ್ರಶ್ನಿಸಿದರು.
ನಳಿನ್ ಬಗ್ಗೆ ಬೇರೇನು ಹೇಳಲ್ಲ, ಹತ್ತು ಲಕ್ಷ ಕೋಟಿ ಹೂಡಿಕೆ ಮಾಡಿದ್ದೇವೆಂದು ಬಿಜೆಪಿ ಸರ್ಕಾರದವರು ಹೇಳುತ್ತಾರೆ. ಕರಾವಳಿಯಲ್ಲಿ ಈ ಪೈಕಿ ಕನಿಷ್ಠ 5 ಸಾವಿರ ಕೋಟಿ ಬಂಡವಾಳ ಹೂಡಿಕೆಯಾದ್ರೂ ಮಾಡಿಲ್ಲ ಏಕೆಂದು ಕೇಳಬಯಸುತ್ತೇನೆ. ಇಲ್ಲಿನ ಕೋಮು ವೈಷಮ್ಯಕ್ಕೆ ಕಂಪನಿಗಳು ದೊಡ್ಡ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇದಕ್ಕಾಗಿ ಪ್ರತ್ಯೇಕ ಪಾಲಿಸಿ ಮಾಡುತ್ತೇವೆ. ಇಲ್ಲಿನ ಜನರು ದುಬೈ, ಮುಂಬೈಗೆ ಹೋಗುವ ಸ್ಥಿತಿ ಬರಬಾರದು. ಆ ನಿಟ್ಟಿನಲ್ಲಿ ಇಲ್ಲಿಯೇ ಉದ್ಯೋಗ ಸೃಷ್ಟಿಗೆ ಪ್ರಯತ್ನ ಮಾಡುತ್ತೇವೆ ಎಂದರು.
300 ಕೋಟಿ ಬೋರ್ಡ್ ಕಿತ್ತು ಹಾಕಿದ್ದು ಯಾಕೆ ?
ನಾನು ಇಲ್ಲಿಗೆ ಬರೋದಕ್ಕೂ ಮುನ್ನ ಭೇಟಿಯಾದ ಒಂದು ಪೀಠದ ಶ್ರೇಷ್ಠ ನಾಯಕರು, ದೊಡ್ಡ ಜವಾಬ್ದಾರಿಯಲ್ಲಿ ಇದ್ದವರು ಒಂದು ವಿಷಯ ಪ್ರಸ್ತಾಪಿಸಿದರು. ಈ ಜಿಲ್ಲೆಯಲ್ಲಿ 200- 300 ಕೋಟಿ ತಂದಿದ್ದೇನೆ ಎಂದು ಕೆಲವರು ಬೋರ್ಡ್ ಹಾಕಿದ್ದರು. 300 ಕೋಟಿ ಬೋರ್ಡ್ ಹಾಕಿದ್ದನ್ನು ಈಗ ತೆಗೆದು ಹಾಕಿದ್ದಾರೆ. ಇದನ್ನು ನೋಡಿ ಜನ 300 ಕೋಟಿಯಲ್ಲಿ ನಲ್ವತ್ತು ಪರ್ಸೆಂಟ್ ಅಂತ ಲೆಕ್ಕ ಹಾಕುತ್ತಾರೆ ಎಂದು ಬೋರ್ಡನ್ನೇ ತೆಗೆದು ಹಾಕಿದ್ದಾರೆ. ನೀವು ನಲ್ವತ್ತು ಪರ್ಸೆಂಟ್ ಹೋರಾಟ ಮಾಡಿದ ಬಳಿಕ ಬೋರ್ಡ್ ಕಿತ್ಕೊಂಡು ಹೋಯ್ತು ಅಂತ ಆ ವ್ಯಕ್ತಿ ಹೇಳಿದ್ದಾರೆ. ಆದರೆ ಅವರು ಯಾರು ಅಂತ ಹೆಸರು ಹೇಳುವುದಿಲ್ಲ. ಆದರೆ ಇಲ್ಲಿನವರ ಭ್ರಷ್ಟಾಚಾರದ ಬಗ್ಗೆ, ಪರ್ಸೆಂಟ್ ಲೆಕ್ಕದ ಬಗ್ಗೆ ತಿಳಿದು ಬರುತ್ತದೆ ಎನ್ನುವ ಮೂಲಕ ಸ್ಥಳೀಯ ಬಿಜೆಪಿ ಶಾಸಕರ ಹೆಸರೆತ್ತದೆ ಡಿಕೆಶಿ ಟೀಕಿಸಿದರು.
ಬಿಜೆಪಿ ಡ್ಯಾಮ್ ಒಡೆದು ಹೋಗಿದೆ, ಇನ್ನು ಈ ಡ್ಯಾಮಲ್ಲಿ ನೀರು ನಿಲ್ಲಲ್ಲ. 30 ವರ್ಷ ಕಾಲ ಪಕ್ಷಕ್ಕೆ ಜೀವನ ಮುಡಿಪಾಗಿಟ್ಟ ಶೆಟ್ಟರ್ ಬಿಜೆಪಿ ಬಿಟ್ಟು ಬಂದಿದ್ದಾರೆ. ಸವದಿ, ಪುಟ್ಟಣ್ಣ ಹೀಗೆ ಸಾಲು ಸಾಲು ಮಂದಿ ಕಾಂಗ್ರೆಸಿಗೆ ಬಂದಿದ್ದಾರೆ. ಡಜನ್ ಗಟ್ಟಲೆ ಹಾಲಿ ಶಾಸಕರು ಕಾಂಗ್ರೆಸ್ ಬರಲು ರೆಡಿಯಾಗಿದ್ದರು, ನಮ್ಮಲ್ಲಿ ಜಾಗ ಇರಲಿಲ್ಲ. ಬಿಜೆಪಿ ಕೆರೆಯಲ್ಲ, ಇಡೀ ಡ್ಯಾಮ್ ಒಡೆದು ಹೋಗಿದೆ, ಇನ್ನು ನೀರು ನಿಲ್ಸೋಕೆ ಆಗಲ್ಲ. ಯಾವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬರುತ್ತೋ ಆಗ ರಾಜ್ಯದಲ್ಲಿ ಅಧಿಕಾರ ಬರುತ್ತದೆ. ಅದು ಇತಿಹಾಸ, ಪ್ರಬುದ್ಧ ಮತದಾರರ ತೀರ್ಪು ಕಾಂಗ್ರೆಸಿಗೆ ಅಧಿಕಾರ ಕೊಡುತ್ತದೆ. ಖಂಡಿತವಾಗಿ ಕಾಂಗ್ರೆಸ್ 140 ಸೀಟು ಗೆಲ್ಲುತ್ತೇವೆ ಎಂದು ಡಿಕೆಶಿ ಹೇಳಿದರು.
ಸಮಾವೇಶದಲ್ಲಿ ಎಂಎಲ್ಸಿ ಮಂಜುನಾಥ ಭಂಡಾರಿ, ಜಿಲ್ಲಾಧ್ಯಕ್ಷ ಹರೀಶ ಕುಮಾರ್, ಮಾಜಿ ಸಚಿವ ವಸಂತ ಬಂಗೇರ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಒಂದಷ್ಟು ಮಂದಿ ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.
DK Shivakumar in Belthangady, Three BJP MLAS from Mangalore have brought restraining order not to telecast their CD against Media houses. This shows how BJP party is. It is so shameful to know how MLAS are getting orders against media houses not to telecast Private photos and their videos he added.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm