ಬ್ರೇಕಿಂಗ್ ನ್ಯೂಸ್
25-04-23 12:15 pm Mangalore Correspondent ಕರಾವಳಿ
ಮಂಗಳೂರು, ಎ.25 : ಮುಂಬೈನಿಂದ ಮಂಗಳೂರಿಗೆ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರು ರೈಲಿನ ಶೌಚಾಲಯದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರೂ ರೈಲಿನ ಸಿಬಂದಿಯ ನಿರ್ಲಕ್ಷ್ಯದಿಂದಾಗಿ ಮೃತದೇಹ ಮತ್ತೆ ಅದೇ ರೈಲಿನಲ್ಲಿ ಮುಂಬೈಗೆ ಹೋಗಿ ಕೊಳೆತು ನಾರುವ ಸ್ಥಿತಿಗೆ ತಲುಪಿದ ಘಟನೆ ಬೆಳಕಿಗೆ ಬಂದಿದೆ.
ಕಿನ್ನಿಗೋಳಿಯ ಮೆನ್ನಬೆಟ್ಟು ನಿವಾಸಿ ಮೋಹನ್ ಬಂಗೇರ (56) ಮುಂಬೈನಲ್ಲಿ ಹಾಲಿನ ಪಾರ್ಲರ್ ಇಟ್ಟುಕೊಂಡಿದ್ದರು. ಇತ್ತೀಚೆಗೆ ಮುಂಬೈನಿಂದ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಷಯ ತಿಳಿಯದ ಕುಟುಂಬಿಕರು ಇವರನ್ನು ರೈಲಿನಲ್ಲಿ ಬಂದವರು ಎಲ್ಲಿ ಹೋದರೆಂದು ಮುಂಬೈನಿಂದ ಮಂಗಳೂರಿನ ವರೆಗೂ ಪ್ರತಿ ರೈಲ್ವೇ ಸ್ಟೇಷನ್ನಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಅವರಿದ್ದ ರೈಲಿನ ಬೋಗಿಯ ಶೌಚಾಲಯದಲ್ಲೇ ಮೋಹನ್ ಬಂಗೇರ ಶವ ಇದ್ದರೂ, ರೈಲು ಸಿಬಂದಿ ಪರಿಶೀಲನೆ ನಡೆಸದಿರುವುದು ಕುಟುಂಬಸ್ಥರನ್ನು ಅಲೆಯುವಂತೆ ಮಾಡಿದೆ.
ಎಪ್ರಿಲ್ 18ರಂದು ರೈಲಿನಲ್ಲಿ ಮೋಹನ್ ಬಂಗೇರ ಬರುತ್ತಿರುವ ವಿಷಯ ತಿಳಿದು ಸೋದರ ಸಂಬಂಧಿಗಳು ಸುರತ್ಕಲ್ ರೈಲು ನಿಲ್ದಾಣಕ್ಕೆ ಬಂದಿದ್ದರು. ಆದರೆ ಮೋಹನ್ ಕುಳಿತಿದ್ದ ಎಸಿ ಬೋಗಿಯಲ್ಲಿ ಅವರು ಇರಲಿಲ್ಲ. ಇವರ ಬ್ಯಾಗ್, ಮೊಬೈಲ್, ಪರ್ಸ್ ಅಷ್ಟೇ ಇದ್ದವು. ಹೀಗಾಗಿ ಸಂಬಂಧಿಕರು ಮಂಗಳೂರಿಗೆ ಬಂದು ರೈಲು ಬೋಗಿಯಲ್ಲಿ ಕರ್ತವ್ಯದಲ್ಲಿದ್ದ ಟಿಟಿಇ ಬಳಿ ಮಾತನಾಡಿದ್ದರು. ಅವರೇನೋ ಗೋವಾ, ಮಡಗಾಂವ್ ನಲ್ಲಿ ರೈಲಿನಿಂದ ಇಳಿದಿರಬೇಕೆಂದು ಶಂಕೆ ವ್ಯಕ್ತಪಡಿಸಿದ್ದರಿಂದ ಅಲ್ಲಿನ ಸಿಸಿಟಿವಿಯಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೆ ಅಲ್ಲಿಯೂ ಸಿಕ್ಕಿರಲಿಲ್ಲ. ರೈಲು ಸಿಬಂದಿ ಟಾಯ್ಲೆಟ್ ಇನ್ನಿತರ ಎಲ್ಲ ಕಡೆ ಕ್ಲೀನಿಂಗ್ ಮಾಡುವುದರಿಂದ ಸಂಬಂಧಿಕರು ಮತ್ತೆ ಬೋಗಿಯಲ್ಲಿ ಚೆಕ್ ಮಾಡಲು ಹೋಗಿರಲಿಲ್ಲ.
ಎರಡು ದಿನ ಕಳೆದಾಗ, ಮುಂಬೈನಲ್ಲಿ ರೈಲಿನ ಟಾಯ್ಲೆಟ್ ಚೆಕ್ ಮಾಡಿದಾಗ ಸಿಬಂದಿಗೆ ಶವ ಕಂಡುಬಂದಿದೆ. ಬಳಿಕ ಮೋಹನ್ ಬಂಗೇರ ಶವ ಅನ್ನುವುದು ತಿಳಿದು ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು. ಆನಂತರ ಅಲ್ಲಿನ ಏಜೆನ್ಸಿ ಒಂದಕ್ಕೆ ತಿಳಿಸಿ, ರೈಲಿನಲ್ಲೇ ಮತ್ತೆ ಮೃತದೇಹವನ್ನು ಕಳುಹಿಸಿಕೊಡಲು ರೈಲು ಸಿಬಂದಿ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ಏಜೆನ್ಸಿಗೆ 10 ಸಾವಿರ ರೂ. ಪಾವತಿಸಿದ್ದರು. ಹಾಗಿದ್ದರೂ, ಮೃತದೇಹ ಮಂಗಳೂರಿಗೆ ತಲುಪಿದ್ದಾಗ ಪೂರ್ತಿ ಕೊಳೆತು ದುರ್ವಾಸನೆ ಬೀರುತ್ತಿತ್ತು. ಎಸಿ ಬೋಗಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೇ ಇಂತಹ ದುಃಸ್ಥಿತಿಯಾದರೆ ಹೇಗೆ? ರೈಲು ಸಿಬಂದಿ ನಿರ್ಲಕ್ಷ್ಯದಿಂದ ಇಂಥ ಸ್ಥಿತಿಯಾಗಿದೆ ಎಂದು ಕುಟುಂಬಸ್ಥರು ರೈಲ್ವೇ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Mangalore Railway employees negligence, Kinnigoli Mans body Found in train toilet for 24 hours. In an incident of utter negligence by the railway employees, the mortal remains of a passenger, who was arriving to Mangalorefrom Mumbai, went back to Mumbai as he died in the toilet of the train on the journey. Mohan Bangera (56), a native of Mennabettu of Kinnigoli who was coming to native place from Mumbai.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm