ಮಂಗಳೂರಿನಲ್ಲಿ ಪಬ್ಬಾಸ್ ಐಸ್ ಕ್ರೀಮ್ ಸವಿದ ರಾಹುಲ್ ಗಾಂಧಿ ; ಸೆಲ್ಫಿಗೆ ಮುಗಿಬಿದ್ದ ಸಾರ್ವಜನಿಕರು ! 

27-04-23 11:11 pm       Mangalore Correspondent   ಕರಾವಳಿ

ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ನಗರದಲ್ಲಿ ಐಸ್ ಕ್ರೀಂ ಕಾರಣಕ್ಕೆ ಖ್ಯಾತಿ ಹೊಂದಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ಸವಿದಿದ್ದಾರೆ. 

ಮಂಗಳೂರು, ಎ. 27 : ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ನಗರದಲ್ಲಿ ಐಸ್ ಕ್ರೀಂ ಕಾರಣಕ್ಕೆ ಖ್ಯಾತಿ ಹೊಂದಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ಸವಿದಿದ್ದಾರೆ. 

ಮಂಗಳೂರಿನ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ಕಾಂಗ್ರೆಸ್ ಮುಖಂಡರ ಜೊತೆಗೆ ಆಗಮಿಸಿದ ರಾಹುಲ್, ಐಸ್ ಕ್ರೀಂ ಸವಿದು ಕರಾವಳಿಯ ಬೇಸಗೆಯ ಬೇಗೆ ಆರಿಸಿಕೊಂಡಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಎಐಸಿಸಿ ಸೆಕ್ರಟರಿ ಕೆಸಿ ವೇಣುಗೋಪಾಲ್, ಮೊಹಮ್ಮದ್ ನಲ್ಪಾಡ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು. ಬಿಗಿ ಭದ್ರತೆಯೊಂದಿಗೆ ಐಸ್ ಕ್ರೀಮ್ ಪಾರ್ಲರ್ ಗೆ ರಾಹುಲ್ ಆಗಮಿಸಿದ್ದರು.‌ ಈ ವೇಳೆ, ಪಾರ್ಲರ್ ನಲ್ಲಿದ್ದ ಇತರೇ ಸಾರ್ವಜನಿಕರು ರಾಹುಲ್ ಗಾಂಧಿಯೊಂದಿಗೆ ಸೆಲ್ಫಿ ತೆಗೆಯಲು ಮುಗಿಬಿದ್ದರು. ಸಾಮಾನ್ಯ ಜನರೊಂದಿಗೆ ರಾಹುಲ್ ಬೆರೆತರಲ್ಲದೆ ಸೆಲ್ಫಿಗೆ ಸಹಕರಿಸಿದ್ದಾರೆ.

Congress Rahul Gandhi visits Pabbas Ice Cream Parlour in Mangalore with Congress leaders, tastes different icecreams. Rahul Gandhi was in Mangalore Addressing a massive rally in Adyar Mangalore.