ಪುತ್ತೂರಿನ ಅಭ್ಯರ್ಥಿ ಆಯ್ಕೆ ಯಾರೋ ಒಬ್ಬರು ಕುಳಿತು ಮಾಡಿದ್ದಲ್ಲ ; ಮೋದಿಯೇ ಫೈನಲ್ ಮಾಡಿದ್ದು - ಅಣ್ಣಾಮಲೈ ಬ್ಯಾಟಿಂಗ್

29-04-23 02:58 pm       Mangaluru Correspondent   ಕರಾವಳಿ

ಪುತ್ತೂರಿನಲ್ಲಿ ಅಭ್ಯರ್ಥಿ ಆಯ್ಕೆಯನ್ನು ಯಾರೋ ಇಬ್ಬರು ಕುಳಿತು ಮಾಡಿದ್ದಲ್ಲ. ಪಕ್ಷದ ಶಕ್ತಿಕೇಂದ್ರದಿಂದ ಹಿಡಿದು ಚುನಾವಣಾ ಸಮಿತಿ, ಸಂಸದೀಯ ವರೆಗೂ ವಿಶ್ಲೇಷಣೆ ಮಾಡುತ್ತದೆ. ಕೊನೆಯದಾಗಿ ಪ್ರಧಾನಿ ಮೋದಿಯೇ ಅಭ್ಯರ್ಥಿ ಆಯ್ಕೆ ಮಾಡೋದು.

ಪುತ್ತೂರು, ಎ.29: ಪುತ್ತೂರಿನಲ್ಲಿ ಅಭ್ಯರ್ಥಿ ಆಯ್ಕೆಯನ್ನು ಯಾರೋ ಇಬ್ಬರು ಕುಳಿತು ಮಾಡಿದ್ದಲ್ಲ. ಪಕ್ಷದ ಶಕ್ತಿಕೇಂದ್ರದಿಂದ ಹಿಡಿದು ಚುನಾವಣಾ ಸಮಿತಿ, ಸಂಸದೀಯ ವರೆಗೂ ವಿಶ್ಲೇಷಣೆ ಮಾಡುತ್ತದೆ. ಕೊನೆಯದಾಗಿ ಪ್ರಧಾನಿ ಮೋದಿಯೇ ಅಭ್ಯರ್ಥಿ ಆಯ್ಕೆ ಮಾಡೋದು. ಕಾಂಗ್ರೆಸಿನ ಹಾಗೆ ಒಂದಿಬ್ಬರು ಕುಳಿತು ಮಾಡುವ ಪ್ರಕ್ರಿಯೆ ಅಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷ 1960 ರ ಕಾಲದ ಹಳೆ ಟೇಪ್ ರೆಕಾರ್ಡಿಂಗ್ ಇದ್ದಹಾಗೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈ ಕಾನೂನು ವಾಪಾಸು ಪಡೀತೆನೆ, ಆ ಕಾನೂನು ಮಾಡಲು ಬಿಡೋದಿಲ್ಲ ಎನ್ನುತ್ತಿದೆ. ಇದೇ ಕಾರಣಕ್ಕೆ ಗೃಹಮಂತ್ರಿ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ರಿವರ್ಸ್ ಗೇರ್ ಗೆ ಹೋಲಿಸಿದ್ದು, ಕಾಂಗ್ರೆಸ್ ರಿವರ್ಸ್ ಗೇರ್ ಹಾಕಿ ಓಡುತ್ತಿದೆ.

ಆದರೆ ಬಿಜೆಪಿ ಡಬಲ್ ಇಂಜಿನ್ ಮೂಲಕ ಮುಂದಕ್ಕೆ ಓಡುತ್ತಿದೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ. ರಾಜ್ಯಕ್ಕೆ ಪ್ರಿಯಾಂಕ ಗಾಂಧಿಯವರನ್ನು ಕರೆಸಿ ದೋಸೆ ಮಾಡಿಸಿದ ಮಾತ್ರಕ್ಕೆ ಇಲ್ಲಿನ ಜನ ಮತ ಹಾಕಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಗೆಲುವು ನಿಶ್ಚಿತ. ಸಂಘಟನೆಯಲ್ಲಿ ಕೆಲಸ ಮಾಡಿದ ಆಧಾರದಲ್ಲಿ ಆಶಾ ತಿಮ್ಮಪ್ಪ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಬಿಜೆಪಿಯಲ್ಲಿ ಕಾಂಗ್ರೆಸ್ ಪಕ್ಷದಂತೆ ಕೇವಲ ಇಬ್ಬರು ಕುಳಿತು ಅಭ್ಯರ್ಥಿಯನ್ನು ಆಯ್ಕೆ ಮಾಡುವ ವ್ಯವಸ್ಥೆಯಿಲ್ಲ.

ತಳಮಟ್ಟದ ಶಕ್ತಿಕೇಂದ್ರ, ಜಿಲ್ಲಾ ಕೇಂದ್ರ, ರಾಜ್ಯ ಚುನಾವಣಾ ಸಮಿತಿ, ಕೇಂದ್ರ ಚುನಾವಣಾ ಸಮಿತಿ, ಪಾರ್ಲಿಮೆಂಟರಿ ಸಮಿತಿ ಚರ್ಚೆ ನಡೆಸಿದ ಬಳಿಕ ಪ್ರಧಾನಿ ಮೋದಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತಗೊಳಿಸುತ್ತಾರೆ ಎಂದರು. ಗೆಲ್ಲುವ ಪಕ್ಷದಲ್ಲಿ ಆಕಾಂಕ್ಷಿಗಳು ಇರೋದು ಸಾಮಾನ್ಯವಾಗಿದ್ದು, ಪುತ್ತೂರಿನಲ್ಲೂ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಪಕ್ಷ ಎಲ್ಲರಿಗೂ ಸ್ಥಾನಮಾನವನ್ನು ಕೊಡುತ್ತೆ, ಆದರೆ ಸ್ವಲ್ಪ ಸಮಾಧಾನದಲ್ಲಿ ಕಾಯಬೇಕು ಎಂದ ಅವರು ಯುವಜನತೆಗೆ ಬಿಜೆಪಿ ಖಂಡಿತವಾಗಿಯೂ ಅವಕಾಶ ನೀಡುತ್ತದೆ ಎಂದರು

BJP President of Tamil Nadu K Annamalai in Puttur, Candidate Asha Thimmappa Gowda is selected by PM Modi to contest not like congress that selects its candidates by some state leaders he slammed.