ಬ್ರೇಕಿಂಗ್ ನ್ಯೂಸ್
08-05-23 03:28 pm Mangalore Correspondent ಕರಾವಳಿ
ಮಂಗಳೂರು, ಮೇ 8: ಬಿಜೆಪಿ ನೂರಕ್ಕೆ ನೂರರಷ್ಟು ಬಹುಮತದ ಸರ್ಕಾರ ನಡೆಸಲಿದೆ. ಹಾಗಂತ, ನಾನೇನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಅಪೇಕ್ಷಿತನೂ ಅಲ್ಲ, ರೇಸ್ ನಲ್ಲೂ ಇಲ್ಲ. ಪಕ್ಷ ಕೊಟ್ಟ ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನ ಒಳ್ಳೆಯ ರೀತಿಯಲ್ಲಿ ಮುಗಿಸ್ತೇನೆ ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರಬೇಕೆಂಬ ಯಾವುದೇ ಇಚ್ಚೆಯಿಲ್ಲ. ನಾನು ಸಂಘದ ಸ್ವಯಂಸೇವಕ, ಪಕ್ಷದ ಹಿರಿಯರು ಕೊಟ್ಟ ಜವಾಬ್ದಾರಿ ಮಾಡ್ತೇನೆ. ತತ್ವ ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡ್ತೇನೆ, ಜವಾಬ್ದಾರಿ ನಿಭಾಯಿಸ್ತೇನೆ. ಪಕ್ಷ ಪೂರ್ಣಾವಧಿ ಪಕ್ಷದಲ್ಲೇ ಇರಲು ಸೂಚಿಸಿದ್ರೆ ಇರ್ತೇನೆ ಎಂದು ಹೇಳಿದ್ದಾರೆ. ಹತ್ತು ದಿನಗಳ ಹಿಂದೆ ರಾಜ್ಯದಲ್ಲಿ ಅತಂತ್ರ ಸರ್ಕಾರದ ಸಮೀಕ್ಷೆ ಇತ್ತು. ಆದರೆ ಈಗಿನ ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದೆ. ಪುತ್ತೂರಿನಲ್ಲೂ ಬಿಜೆಪಿ ಗೆಲ್ಲಲಿದೆ, ರಾಜ್ಯದಲ್ಲೂ ಗೆಲ್ಲಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದ.ಕ ಜಿಲ್ಲೆಯಲ್ಲಿ ಎಂಟಕ್ಕೆ ಎಂಟು ಕ್ಷೇತ್ರವನ್ನೂ ಗೆಲ್ಲಲಿದೆ. ಜನಬೆಂಬಲ ಮತ್ತು ಬಿಜೆಪಿ ಬಿಡೋದಕ್ಕೆ ವ್ಯತ್ಯಾಸ ಇದೆ. ಕೆಲವರು ಅಧಿಕಾರ ಸಿಗದೇ ಇದ್ದಾಗ ಬಿಟ್ಟು ಹೋಗ್ತಾರೆ, ಆದರೆ ಜನರು ನಮ್ಮ ಜೊತೆಗೆ ಇದ್ದಾರೆ ಎಂದರು.
ಒಂದು ಕಾಲಘಟ್ಟದಲ್ಲಿ ಹಳೇ ಮೈಸೂರು ಜೆಡಿಎಸ್ ಭದ್ರಕೋಟೆ ಅಂತ ಇತ್ತು. ಆದರೆ ಈ ಬಾರಿ ಮೋದಿ ಮತ್ತು ಅಮಿತ್ ಶಾ ಪ್ರವಾಸದ ಕಾರಣಕ್ಕೆ ಅಲ್ಲಿಯೂ ನಮಗೆ ಜನ ಬೆಂಬಲ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಅಲ್ಲಿ ನಮಗೆ ಸ್ಥಾನಗಳು ಸಿಗಲಿವೆ. ಇವತ್ತು ಕಾಂಗ್ರೆಸ್ ವಿರೋಧಿ ಅಲೆ ಇದೆ, ಮೋದಿ ಸರ್ಕಾರದ ಯೋಜನೆಗಳ ಫಲಾನುಭವಿಗಳು ಖುಷಿಯಿಂದ ಇದ್ದಾರೆ. ಇವತ್ತು ಜನರಿಗೆ ಬಿಜೆಪಿ ಬಗ್ಗೆ ಭರವಸೆ ಜಾಸ್ತಿಯಾಗಿದೆ. ಇಡೀ ರಾಜ್ಯದಲ್ಲಿ 10-15 ದಿನಗಳಲ್ಲಿ ನಮ್ಮ ಪ್ರಚಾರ ವೇಗವಾಗಿತ್ತು. ಬೇರೆ ರಾಜ್ಯದ ಮುಖ್ಯಮಂತ್ರಿಗಳೂ ಬಂದು ಪ್ರಚಾರ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಪ್ರಧಾನಿ ಪ್ರವಾಸ, ರೋಡ್ ಶೋಗಳ ಬಗ್ಗೆ ಚರ್ಚೆಯಾಗಿದೆ.
ಕಾಂಗ್ರೆಸನ್ನು ಜನ ತಿರಸ್ಕರಿಸ್ತಾ ಇದ್ದಾರೆ, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲ್ತಾರೆ. ಡಿಕೆಶಿ ತಾನು ಗೆಲ್ತೀನಾ ಎಂಬ ಚಿಂತೆಯಲ್ಲಿ ಇದ್ದಾರೆ, ಕಾಂಗ್ರೆಸ್ ನಲ್ಲಿ ಯಾರನ್ನ ಯಾರು ಸೋಲಿಸೋದು ಅಂತ ಇದಾರೆ. ಕನಕಪುರದಲ್ಲಿ ಡಿಕೆಶಿ ಸೋಲಿಸೋದು ಹೇಗೆ ಅಂತ ಕಾಯ್ತಾ ಇದಾರೆ. ಸಿಎಂ ಸೀಟ್ ವಿಚಾರ ಅವರಲ್ಲಿ ಜಗಳ ದೊಡ್ಡದಾಗಿದೆ. ವರುಣಾದಲ್ಲಿ ಕಾಂಗ್ರೆಸ್ ನ ಇಡೀ ಟೀಂ ಬಂದರೂ ಸಿದ್ದರಾಮಯ್ಯ ಸೋಲ್ತಾರೆ. ಮೋದಿ ಪ್ರಚಾರದಿಂದಾಗಿ ರಾಜ್ಯದಲ್ಲಿ 10-15 ಕ್ಷೇತ್ರಗಳು ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.
BJP will have major victory in Puttur, party win all eight constituencies in district says Nalin Kumar Kateel in Mangalore. “I have visited 224 constituencies in the state. The BJP has prepared from the past one-and-half year. Prime Minister Narendra Modi visited the state 16 times before the announcement of elections and 20 times later,” said BJP president Nalin Kumar Kateel.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm