ಬ್ರೇಕಿಂಗ್ ನ್ಯೂಸ್
08-05-23 07:41 pm Mangalore Correspondent ಕರಾವಳಿ
ಉಳ್ಳಾಲ, ಮೇ 8 : ಜಿಲ್ಲೆಯ ಪ್ರಸಿದ್ಧ ಕಾರಣಿಕ ಕ್ಷೇತ್ರವಾಗಿರುವ ಕೋಟೆಕಾರಿನ ಕೊಂಡಾಣ ದೈವಸ್ಥಾನದಲ್ಲಿ ಮೇ 9ರಿಂದ 12 ರ ತನಕ ಪಿಲಿಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಹೇಳಿದರು.
ಶ್ರೀಕ್ಷೇತ್ರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರದ ತಂತ್ರಿ ಉಚ್ಚಿಲತ್ತಾಯ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ವಾಸ್ತುಶಿಲ್ಪಿ ಬೆದ್ರಡ್ಕ ಶ್ರೀ ರಮೇಶ ಕಾರಂತರವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮವು ಮೇ 9ರಿಂದ 12ರ ತನಕ ವಿಜೃಂಭಣೆಯಿಂದ ನಡೆಯಲಿದೆ. ಹಾಗೂ ಗರಡಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ತಂತ್ರಿ ಬಿ. ಗಂಗಾಧರ ಶಾಂತಿಯವರ ನೇತೃತ್ವದಲ್ಲಿ ಹಾಗೂ ಶ್ರೀ ಚರಣ್ ಬೇಬಿ ನಾರಾಯಣ ಪಂಡಿತ್ ಕುಂಪಲ ಅವರ ಉಪಸ್ಥಿತಿಯೊಂದಿಗೆ ನಡೆಯಲಿರುವುದು.
ಮೇ 9ರಂದು ಮಧ್ಯಾಹ್ನ ಗಂಟೆ 12.00ಕ್ಕೆ ಉಗ್ರಾಣ ಮುಹೂರ್ತ, ಸಂಜೆ ಗಂಟೆ 4ಕ್ಕೆ ಕೋಟೆಕಾರು ಬೀರಿಯ ಶ್ರೀ ಗಣೇಶ ಮಂದಿರದ ವಠಾರದಲ್ಲಿ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಶ್ರೀಧಾಮ ಮಾಣಿಲದ ಶ್ರೀ ಕೌಸ್ತುಭ ಕರ್ಮಯೋಗಿ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡಲಿದ್ದು ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೇ 10ರಂದು ಬುಧವಾರ ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6.00ಕ್ಕೆ ತಂತ್ರಿಗಳ ಆಗಮನ, ಬಳಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಭಾ ವೇದಿಕೆ ಉದ್ಘಾಟನೆ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕೊಂಡಾಣ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಡಾರು ವಿಜಯ ಕುಮಾರ್ ಶೆಟ್ಟಿ ವಹಿಸಲಿದ್ದು ಚೈತ್ರಾ ಕುಂದಾಪುರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8.30ಕ್ಕೆ ಹಿನ್ನೆಲೆ ಗಾಯಕಿ ತೃಪ್ತಿ ಉಚ್ಚಿಲ್ ಹಾಗೂ ರಿದಂ ಮ್ಯೂಸಿಕ್ ಬ್ಯಾಂಡ್ ತಂಡದವರಿಂದ ಭಕ್ತಿ ಗಾನ ಸುಧೆ ನಡೆಯಲಿದೆ. ಮೇ 11ರಂದು ಗುರುವಾರ ಬೆಳಗ್ಗೆ ಗರಡಿಯಲ್ಲಿ ಗಣಹೋಮ, ವಿವಿಧ ಧಾರ್ಮಿಕ ವಿಧಾನಗಳು, 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಭಂಡಾರ ಮನೆಯಿಂದ ಪಿಲಿಚಾಮುಂಡಿ ದೈವದ ಭಂಡಾರವು ಶಾಸ್ತ್ರೋಕ್ತವಾಗಿ ಮೆರವಣಿಗೆಯಲ್ಲಿ ಬರಲಿದೆ.
ಮೇ 12ರಂದು ಶುಕ್ರವಾರ ಬೆಳಗ್ಗೆ ಗಂಟೆ 7ರಿಂದ ಗಣಹೋಮ, 8.15ರಿಂದ 9.38ರ ಮಿಥುನ ಲಗ್ನದಲ್ಲಿ ಗುಳಿಗ, ಕೊರತಿ, ಸಾನಿಧ್ಯ ಪುನಃ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಕಲಶಾಭಿಷೇಕ, ಪರಿಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಆಕಾಶವಾಣಿ ಕಲಾವಿದೆ ಮಂಜುಳಾ ಜಿ.ರಾವ್ ಇರಾ ಅವರಿಂದ ಶ್ರೀ ಕೃಷ್ಣ ಕಾರುಣ್ಯ ಹರಿಕಥೆ ನಡೆಯಲಿದೆ. ಸಂಜೆ 6.30ರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಜ್ರದೇಹಿ ಮಠ ಗುರುಪುರದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರ ಕೊಂಡಾಣದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣ ಶೆಟ್ಟಿ ತಾಮಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ರಾಮಣ್ಣ ಶೆಟ್ಟಿ ಮುಂಬೈ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಶೆಟ್ಟಿ ಅಡ್ಕಗುತ್ತು, ರಾಘವೇಂದ್ರ ಭಟ್, ಬಾಬು ಶೆಟ್ಟಿ, ಸುಂದರ ಆಚಾರ್ಯ, ಲೋಕಯ್ಯ ಪಾನೀರ್, ದಿನಮಣಿ ರಾವ್ ಹಾಗೂ ಸುಜಿತ್ ಮಾಡೂರು ಉಪಸ್ಥಿತರಿದ್ದರು.
Mangalore Annual Pilichamundi Nemotsava from May 9th to 12th at Kotekar in Ullal.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm