ಬ್ರೇಕಿಂಗ್ ನ್ಯೂಸ್
08-05-23 08:10 pm Mangalore Correspondent ಕರಾವಳಿ
ಮಂಗಳೂರು, ಮೇ 9 : ಜನರ ನೋವು ಶಮನ ಗೊಳಿಸೋದೇ ಕಾಂಗ್ರೆಸ್ ನ ಗ್ಯಾರಂಟಿ ಸ್ಕೀಮ್. ಈ ಬಾರಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ. ನಮ್ಮ ಗ್ಯಾರಂಟಿ ಭರವಸೆಯನ್ನು ಆರು ತಿಂಗಳ ಒಳಗೆ ಅನುಷ್ಠಾನ ಮಾಡದೇ ಇದ್ರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತೇನೆ ಎಂದು ಮಾಜಿ ಸಚಿವ, ಉಳ್ಳಾಲದ ಕಾಂಗ್ರೆಸ್ ಅಭ್ಯರ್ಥಿ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಐದೂ ಗ್ಯಾರಂಟಿ ಸ್ಕೀಮ್ ಅಧಿಕಾರಕ್ಕೆ ಬಂದ ತಕ್ಷಣ ಅನುಷ್ಠಾನ ಆಗಲಿದೆ. ಬಿಜೆಪಿ ಈಗ ಬಂದು ಜಾತಿ ಧರ್ಮದ ಹೆಸರಲ್ಲಿ ಅಧಿಕಾರದ ಕನಸು ಕಾಣ್ತಿದೆ. ಆದರೆ ಈ ಬಾರಿ ಜನ ಇದಕ್ಕೆ ಅವಕಾಶ ಕೊಡಲ್ಲ ಎನ್ಮುವುದು ಸ್ಪಷ್ಟ. ನನ್ನ ಕ್ಷೇತ್ರದಲ್ಲಿ ಸೌಹಾರ್ದತೆಯ ಜೊತೆಗೆ ಅಭಿವೃದ್ಧಿಯಾಗಿದೆ.
ನಳಿನ್, ಸುನೀಲ್, ಕೋಟಾ ಶ್ರೀನಿವಾಸ ಪೂಜಾರಿ ಜನರಿಗೆ ಮೋಸ ಮಾಡಿದ್ದಾರೆ. ಬಜೆಟ್‌ನಲ್ಲಿ ಹಣ ಮೀಸಲಿಡದೇ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. 2ಬಿ ಮೀಸಲಾತಿ ಹಿಂತೆಗೆದು ಸಣ್ಣ ಸಣ್ಣ ಸಮುದಾಯಕ್ಕೆ ಕೊಡದೇ ಬೇರೆಯವರಿಗೆ ಕೊಟ್ಟಿದ್ದಾರೆ. ಅವರಿಗೂ ಗೊತ್ತಿದೆ, ಇದನ್ನ ಕೋರ್ಟ್ ಒಪ್ಪಲ್ಲ ಅಂತ. ಬಿಜೆಪಿ ಗಲಭೆ ಪ್ರಿಯ, ತಾರತಮ್ಯದ ಮತ್ತು ಕೋಮು ಬೆಂಬಲಿತ ಸರ್ಕಾರ ಅಂತ ಇತಿಹಾಸದ ಪುಟದಲ್ಲಿ ಬರಲಿದೆ. ಮತದಾರರು ಮತ್ತೆ ಬಿಜೆಪಿಗೆ ಯಾವುದೇ ಕಾರಣಕ್ಕೆ ಅವಕಾಶ ಕೊಡಬಾರದು. ನಾವು ಮೇ ಯಲ್ಲಿ ಅಧಿಕಾರಕ್ಕೆ ಬಂದು ತಕ್ಷಣ ಗ್ಯಾರಂಟಿ ಸ್ಕೀಮ್ ಜಾರಿಗೆ ತರ್ತೇವೆ. ಏನಾದ್ರೂ ಆಗಿಲ್ಲ ಅಂದ್ರೆ ಆರು ತಿಂಗಳ ಒಳಗೆ ಜಾರಿಗೆ ತರ್ತೇವೆ. ಪ್ರಜ್ಞಾವಂತ ಮತದಾರರು ಅರ್ಥ ಮಾಡಿಕೊಳ್ಳಬೇಕು. ಸ್ವಾಭಿಮಾನದ ಬದುಕು, ಉದ್ಯೋಗ, ಸಾಮರಸ್ಯದ ಜೀವನ ಅಗತ್ಯದ ವಿಷಯ. ಉಳಿದದ್ದು ಸೆಕೆಂಡರಿ, ಆ ಬಗ್ಗೆ ಮತ್ತೆ ಚರ್ಚಿಸಲಿ.
ಕಾಂಗ್ರೆಸ್ ಪಕ್ಷದ ಸರ್ಕಾರ ರಾಜ್ಯದಲ್ಲಿರುವ ಸಮಾಜಕ್ಕೆ ಪೂರಕವಾದ ಸಂಘಟನೆಗಳಿಗೆ ಪ್ರೋತ್ಸಾಹ ನೀಡಲಿದೆ. ಸಂವಿಧಾನಕ್ಕೆ ವಿರುದ್ದವಾಗಿ ಇರೋರ ವಿರುದ್ಧ ಮಾತ್ರ ಕ್ರಮ ಆಗುತ್ತದೆ. ಸಮಾಜ ವಿರೋಧಿ, ಸಮಾಜಘಾತುಕ ಸಂಘಟನೆಗಳ ಮೇಲೆ ಕ್ರಮ ಆಗಲಿದೆ. ಪ್ರಣಾಳಿಕೆಯಲ್ಲಿ ಬೇರೆ ಬೇರೆ ವಿಷಯ ಇದೆ, ಆದರೆ ಸಂಘಟನೆ ವಿಚಾರ ಚರ್ಚೆ ಆಗ್ತಿದೆ. ಮುಸ್ಲಿಂ ಮೀಸಲಾತಿ ವಿಚಾರ ಸದ್ಯ ಕೋರ್ಟ್ ನಲ್ಲಿದೆ. ನಾವು ಸಮಾಜದ ಎಲ್ಲಾ ವರ್ಗಕ್ಕೆ ತಾರತಮ್ಯ ಇಲ್ಲದೇ ಮೀಸಲಾತಿ ಕೊಡ್ತೇವೆ. ಮೀಸಲಾತಿ ಕಿತ್ತು ಕೊಡೋದಲ್ಲ, ಎಲ್ಲರಿಗೂ ಸಮಾನವಾಗಿ ಕೊಡ್ತೇವೆ.
ರಾಜಕೀಯವಾಗಿ ಅಲೋಚನೆ ಮಾಡಲ್ಲ, ಬಿಜೆಪಿಯದ್ದು ಓಟ್ ಬ್ಯಾಂಕ್ ಲೆಕ್ಕಾಚಾರ. ಕೇಂದ್ರದ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಬಹಿರಂಗ ಹೇಳಿಕೆ ಕೊಡಲಿ. ಎಸ್ಸಿ ಎಸ್ಟಿಯನ್ನ 9th ಶೆಡ್ಯೂಲ್ ಸೇರಿಸ್ತೀವಿ ಅಂತ ಹೇಳಲಿ. ಮೇ 13ಕ್ಕೆ ಬಿಜೆಪಿ ಭವಿಷ್ಯ ಮುಗಿಯುತ್ತದೆ, ವಿನಾಶೇ ಕಾಲೇ ವಿಪರೀತ ಬುದ್ದಿ. ಜೆಡಿಎಸ್ ನವರಿಗೆ ಇಡೀ ಜಿಲ್ಲೆಯಲ್ಲಿ ಎರಡು ಸಾವಿರ ಓಟ್ ಕೂಡ ಇಲ್ಲ. ಅವರಿಗೆ ಆದ ವೈಫಲ್ಯ, ಮುಖಭಂಗ ತಪ್ಪಿಸಲು ನಮ್ಮ ಮೇಲೆ ಆರೋಪ ಮಾಡ್ತಾ ಇದಾರೆ.
ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಅವರ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿಲ್ಲ. ಬದಲಿಗೆ ಕಾಂಗ್ರೆಸ್ ಹಿತೈಷಿಗೆ ಟಿಕೆಟ್ ಕೊಟ್ಟಿದ್ದಾರೆ. ಇದೊಂದು ರಾಜಕೀಯ ಆಟ ಅಷ್ಟೇ, ಇದರ ಬಗ್ಗೆ ಚಿಂತೆ ಮಾಡಲ್ಲ ಎಂದರು ಖಾದರ್. ಈ ಚುನಾವಣೆ ಸತ್ಯ ಮತ್ತು ಅಸತ್ಯದ ಚುನಾವಣೆ, ಪ್ರಚಾರ ಮತ್ತು ಅಪಪ್ರಚಾರದ ಚುನಾವಣೆ. ಪ್ರತಿ ಪಕ್ಷಗಳಿಗೆ ಸುಳ್ಳೇ ಅವರ ಬಂಡವಾಳ, ಅವರಲ್ಲಿ ಸತ್ಯ ಇಲ್ಲ. ಬಿಜೆಪಿಯ ಭ್ರಷ್ಟಾಚಾರ, ತಾರತಮ್ಯ, ಬೆಲೆಯೇರಿಕೆ ವಿಷಯ ಇದೆ. ಬಿಜೆಪಿ ಆಡಳಿತದ ಜನರ ನೋವು ಮತದಾನದ ಮೂಲಕ ಜನ ತೋರಿಸ್ತಾರೆ ಎಂದರು.
Mangaluru sitting MLA U T Khader said, “The upcoming election is between truth and lies, right information and misinformation.” Addressing media on Monday May 8, he said, “Lies are the capital of BJP as they are not in favour of truth. The BJP spread misinformation to divert the minds of people from their corruption, administration failure, and rise in prices of commodities.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm