ಬ್ರೇಕಿಂಗ್ ನ್ಯೂಸ್
08-05-23 09:17 pm Mangalore Correspondent ಕರಾವಳಿ
ಪುತ್ತೂರು, ಮೇ 8 : ಪಕ್ಷೇತರ ಅಭ್ಯರ್ಥಿ ಅರುಣ ಕುಮಾರ್ ಪುತ್ತಿಲ ಪುತ್ತೂರಿನಲ್ಲಿ ಹವಾ ಎಬ್ಬಿಸಿದ್ದಾರೆ. ಪುತ್ತೂರು ಪೇಟೆಯಲ್ಲಿ ಭಾರೀ ರೋಡ್ ಶೋ ನಡೆಸಿದ್ದು, ಕೇಸರಿ ಕಾರ್ಯಕರ್ತರು ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಬೊಳುವಾರಿನಿಂದ ದರ್ಬೆ ವೃತ್ತದ ವರೆಗೆ ಎರಡು ಕಿಮೀ ಉದ್ದಕ್ಕೆ ನಡೆದ ರ್ಯಾಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಕೇಸರಿ ಕಾರ್ಯಕರ್ತರು ಸೇರಿದ್ದರು. ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಪುತ್ತಿಲ ಪರವಾಗಿ ನಿಂತು ಕೇಸರಿ ಶಾಲನ್ನು ಬೀಸುತ್ತಲೇ ಸಾಗಿದ್ದಾರೆ. ಹಿಂದು ಸಮಾಜೋತ್ಸವ ರೀತಿಯಲ್ಲಿ ಕೇಸರಿ ಶಾಲು ಹಾಕಿದ ಕಾರ್ಯಕರ್ತರು ಸೇರಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಶಕ್ತಿಪ್ರದರ್ಶನ ಮಾಡಿದ್ದಾರೆ.
ಭಾನುವಾರ ಉಪ್ಪಿನಂಗಡಿಯಲ್ಲಿ ಇದೇ ರೀತಿ ಪುತ್ತಿಲ ಪರವಾಗಿ ರೋಡ್ ಶೋ ನಡೆದಿತ್ತು. 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು, ಉಪ್ಪಿನಂಗಡಿಯಲ್ಲಿ ಮಹಾ ಸಂಗಮ ಎನ್ನುವಂತೆ ಸುದ್ದಿಯಾಗಿತ್ತು. ಇದೀಗ ಪುತ್ತೂರಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಎರಡು ಗಂಟೆಗಳ ಕಾಲ ಬಿಸಿಲನ್ನೂ ಲೆಕ್ಕಿಸದೆ ಪುತ್ತಿಲರ ಬಗ್ಗೆ ಅಭಿಮಾನ ಮೆರೆದಿದ್ದಾರೆ. ಅರುಣ್ ಪುತ್ತಿಲ ಮತ್ತು ಪ್ರಖರ ಭಾಷಣಕಾರ ಆದರ್ಶ ಗೋಖಲೆ ಬಿಟ್ಟರೆ ಬೇರೆ ಯಾರೂ ಸ್ಟಾರ್ ಪ್ರಚಾರಕರಿಲ್ಲದಿದ್ದರೂ, ಈ ಪರಿ ಕಾರ್ಯಕರ್ತರು ಸೇರಿದ್ದು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿಯಿಂದ ಪುತ್ತೂರಿನ ವ್ಯಕ್ತಿ ಬಿಟ್ಟು ಸುಳ್ಯದ ಆಶಾ ತಿಮ್ಮಪ್ಪ ಗೌಡರಿಗೆ ಟಿಕೆಟ್ ನೀಡಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂದು ಸಂಘಟನೆಗಳಲ್ಲಿ ಸುದೀರ್ಘ ಕಾಲ ಗುರುತಿಸಿಕೊಂಡಿರುವ ಅರುಣ್ ಪುತ್ತಿಲ ಅವರನ್ನು ಕಾರ್ಯಕರ್ತರೇ ಒತ್ತಾಯದಿಂದ ಪಕ್ಷೇತರ ಅಭ್ಯರ್ಥಿಯಾಗಿಸಿದ್ದರು. ಪುತ್ತಿಲ ಹೋದ ಗ್ರಾಮ ಗ್ರಾಮಗಳಲ್ಲಿ ಭಾರೀ ಸಂಖ್ಯೆಯ ಕಾರ್ಯಕರ್ತರು ಸೇರಿದ್ದು ಇವರ ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಇದೇ ವೇಳೆ, ಪುತ್ತೂರು ಬಿಜೆಪಿಯ ಪ್ರಬಲ ನೆಲೆಯಾಗಿದ್ದರೂ, ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಸ್ಥಳೀಯ ಕಾರ್ಯಕರ್ತರು ಸಿಗದೆ ಹೊರಭಾಗದಿಂದ ಕರೆಸಿಕೊಂಡಿದ್ದು ಜಾಲತಾಣದಲ್ಲಿ ಚರ್ಚೆಗೀಡಾಗಿತ್ತು. ಕಾಸರಗೋಡು ಭಾಗದ ಕಾರ್ಯಕರ್ತರು ಪ್ರಚಾರಕ್ಕೆ ಹೋಗಿದ್ದಾಗ ಕೆಲವು ಕಡೆ ಆಕ್ಷೇಪ ವ್ಯಕ್ತವಾಗಿ ಕಿರಿಕ್ ಆಗಿದ್ದೂ ಇದೆ.
ಬ್ರಾಹ್ಮಣ ಸಮುದಾಯದ ಶಿವಳ್ಳಿ ಪಂಗಡಕ್ಕೆ ಸೇರಿದ ಅರುಣ್ ಪುತ್ತಿಲ ಪರವಾಗಿ ಕ್ಷೇತ್ರದಲ್ಲಿ ಹವ್ಯಕ ಮತ್ತು ಶಿವಳ್ಳಿ ಸಮುದಾಯದ ನಾಯಕರು ಕೂಡ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ, ಆರೆಸ್ಸೆಸ್ ಪ್ರಮುಖ ನಾಯಕರೆಂದು ಗುರುತಿಸಲ್ಪಟ್ಟವರೂ ಆಂತರಿಕವಾಗಿ ಪುತ್ತಿಲ ಪರ ನಿಂತಿದ್ದಾರೆ. ವಿಟ್ಲ ಬಳಿಯ ಪುಣಚ ಎನ್ನುವ ಗ್ರಾಮದಲ್ಲಿ ಇಡೀ ಊರಿನ ಜನ ಪುತ್ತಿಲ ಪರ ನಿಂತಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ವಿಟ್ಲ, ಉಪ್ಪಿನಂಗಡಿ ಮತ್ತು ಪುತ್ತೂರು ಪ್ರಮುಖ ಪೇಟೆಗಳಾಗಿದ್ದು, ಪುತ್ತಿಲ ಮೂರೂ ಕಡೆಗಳಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ದಾಖಲೆಗೆ ಸೇರಿತ್ತು. ಸದ್ಯದ ಮಟ್ಟಿಗೆ ಪುತ್ತಿಲ ಪರವಾಗಿ ಭಾರೀ ಜನಬೆಂಬಲ ವ್ಯಕ್ತವಾಗಿದ್ದು ಕಾಂಗ್ರೆಸಿನಲ್ಲಿರುವ ಹಿಂದುಗಳ ಮತಗಳೂ ಪುತ್ತಿಲ ಪರವಾಗಿ ಬಿದ್ದರೆ, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
Puttur Arun Puthila and members show power in road show, thousnads gather in Puttur.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm