ಚುನಾವಣೆ ; ಮಂಗಳೂರು ದಕ್ಷಿಣದಲ್ಲಿ ಮತದಾನ ಕುಸಿತ, ಬಂಟ್ವಾಳ, ಪುತ್ತೂರಿನಲ್ಲಿ ಅಬ್ಬರ, ನಗರ ಭಾಗದಲ್ಲಿ ನಿರಾಸಕ್ತಿ ! 

10-05-23 03:41 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಸಿನ ಮತದಾನ ನಡೆದಿದೆ. ಮತ ಚಲಾಯಿಸಲು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದು ಒಂದು ಗಂಟೆ ವರೆಗಿನ ಮಾಹಿತಿ ಪ್ರಕಾರ 44.17 ಶೇಕಡಾ ಮತದಾನ ಆಗಿದೆ. 

ಮಂಗಳೂರು, ಮೇ 10 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಸಿನ ಮತದಾನ ನಡೆದಿದೆ. ಮತ ಚಲಾಯಿಸಲು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದು ಒಂದು ಗಂಟೆ ವರೆಗಿನ ಮಾಹಿತಿ ಪ್ರಕಾರ 44.17 ಶೇಕಡಾ ಮತದಾನ ಆಗಿದೆ. 

ಪುತ್ತೂರಿನಲ್ಲಿ ಅತಿ ಹೆಚ್ಚು 44.47 ಪರ್ಸೆಂಟ್ ಮತದಾನ ಆಗಿದ್ದರೆ, ಬಂಟ್ವಾಳ ಮತ ಕ್ಷೇತ್ರದಲ್ಲಿ 44, ಬೆಳ್ತಂಗಡಿ 44.82, ಮೂಡುಬಿದ್ರೆ 44.45, ಮಂಗಳೂರು ನಗರ ಉತ್ತರದಲ್ಲಿ 43.43, ಉಳ್ಳಾಲದಲ್ಲಿ 43 ಪರ್ಸೆಂಟ್ ಮತದಾನ ಆಗಿದೆ. 

ಆದರೆ ಮಂಗಳೂರು ದಕ್ಷಿಣದಲ್ಲಿ ಒಂದು ಗಂಟೆ ವರೆಗಿನ ಒಟ್ಟು ಶೇಕಡವಾರು ಮತದಾನದಲ್ಲಿ ಕುಸಿತ ಕಂಡಿದ್ದು 38.45 ಮತದಾನ ಆಗಿದೆ.‌ ಸುಳ್ಯದಲ್ಲಿ 45 ಪರ್ಸೆಂಟ್ ಮತದಾನ ನಡೆದಿದೆ. ಮಂಗಳೂರು ನಗರ ಭಾಗದ ಜನರು ಈ ಬಾರಿ ಮತದಾನಕ್ಕೆ ನಿರಾಸಕ್ತಿ ತೋರಿದ್ದಾರೆಯೇ ಎಂಬ ಅನುಮಾನ ಉಂಟಾಗಿದೆ.

Dakshina Kannada records 56.35 pc polling till 3 pm, Puttur highest 61.45, Mangaluru south is the lowest with 49.29 percent.