ಚುನಾವಣೆ 5 ಗಂಟೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಭಾರೀ ಕುಸಿತ, ವ್ಯತಿರಿಕ್ತ ಫಲಿತಾಂಶ ಸಾಧ್ಯತೆ !

10-05-23 06:36 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಕುಸಿತ ಆಗಿರುವುದು ಕಂಡುಬಂದಿದೆ. ಐದು ಗಂಟೆ ವರೆಗಿನ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 68.93 ಶೇ. ಮತದಾನ ದಾಖಲಾಗಿದೆ.

ಮಂಗಳೂರು, ಮೇ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಕುಸಿತ ಆಗಿರುವುದು ಕಂಡುಬಂದಿದೆ. ಐದು ಗಂಟೆ ವರೆಗಿನ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 68.93 ಶೇ. ಮತದಾನ ದಾಖಲಾಗಿದೆ. 

ಬಿಜೆಪಿ ಬಂಡಾಯ ಎದುರಿಸುತ್ತಿರುವ ಪುತ್ತೂರಿನಲ್ಲಿ 75 ಶೇ. ಮತದಾನ ಆಗಿದೆ. ಬಂಟ್ವಾಳದಲ್ಲಿಯೂ ಶೇ. 75ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾರರು ನಿರಾಸಕ್ತಿ ವಹಿಸಿದ್ದು ಕಂಡುಬಂದಿದೆ. 3 ಗಂಟೆಯ ವರೆಗೆ ಶೇ. 49 ರಷ್ಟು ಮತದಾನ ಆಗಿದ್ದರೆ, ಐದು ಗಂಟೆಯ ವೇಳೆಗೆ 59ಕ್ಕೆ ಬಂದು ನಿಂತಿದೆ.

ಉಳಿದಂತೆ, ಬೆಳ್ತಂಗಡಿ 73, ಉಳ್ಳಾಲದಲ್ಲಿ 69, ಸುಳ್ಯ 62 , ಮಂಗಳೂರು ಉತ್ತರದಲ್ಲಿ 67ರಷ್ಟು ಮತದಾನ ಆಗಿದೆ. ಮೂಡುಬಿದ್ರೆ ಕ್ಷೇತ್ರದಲ್ಲಿ 70 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಮತದಾನ ಕುಸಿತ ನೋಡಿದರೆ ಫಲಿತಾಂಶದಲ್ಲಿ ಭಾರೀ ಬದಲಾವಣೆ ಕಾಣುವ ಸಾಧ್ಯತೆಯಿದೆ.

Mangalore, Karnataka assembly 2023, Dakshina Kannara voting goes dull only 68 percent as of 5pm.