ರಾಜ್ಯದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ, ಸಾಮರಸ್ಯಕ್ಕೆ ಮತ ನೀಡಿದ್ದಾರೆ ; ಯಾವುದೇ ಅನುದಾನ ಕೇಂದ್ರದ ಭಿಕ್ಷೆಯಲ್ಲ, ಪಡೆಯೋಕೆ ಗೊತ್ತಿದೆ ! 

16-05-23 08:56 pm       Mangalore Correspondent   ಕರಾವಳಿ

ಸತ್ಯ- ಅಸತ್ಯ, ಪ್ರಚಾರ- ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ರಾಜ್ಯದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ. ದ್ವೇಷ ಕಳೆದು ಸಮಾಜದಲ್ಲಿ ಸಾಮರಸ್ಯ ನಿರ್ಮಾಣಕ್ಕಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ ಎಂದು ಮಾಜಿ ಸಚಿವ, ಉಳ್ಳಾಲದಲ್ಲಿ ಸತತ ಐದನೇ ಬಾರಿಗೆ ಶಾಸಕರಾದ ಯುಟಿ ಖಾದರ್ ಹೇಳಿದ್ದಾರೆ. 

ಮಂಗಳೂರು, ಮೇ 16 : ಸತ್ಯ- ಅಸತ್ಯ, ಪ್ರಚಾರ- ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ರಾಜ್ಯದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ. ದ್ವೇಷ ಕಳೆದು ಸಮಾಜದಲ್ಲಿ ಸಾಮರಸ್ಯ ನಿರ್ಮಾಣಕ್ಕಾಗಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ ಎಂದು ಮಾಜಿ ಸಚಿವ, ಉಳ್ಳಾಲದಲ್ಲಿ ಸತತ ಐದನೇ ಬಾರಿಗೆ ಶಾಸಕರಾದ ಯುಟಿ ಖಾದರ್ ಹೇಳಿದ್ದಾರೆ. 

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದ ಜನರು ಬೆಲೆಯೇರಿಕೆ, ದ್ವೇಷ ಭಾವನೆಯಿಂದ ಕಂಗೆಟ್ಟು ನಿರಾಶರಾಗಿದ್ದರು. ಇವರನ್ನು ಯಾವಾಗ ಅಧಿಕಾರದಿಂದ ಕೆಳಕ್ಕಿಳಿಸುವುದೆಂದು ಕಾಯುತ್ತ ಇದ್ದರು. ಚುನಾವಣೆ ನಾವು ಗ್ರಹಿಸಿದ ರೀತಿಯಲ್ಲ. ಜನ ನಿರ್ಧಾರ ಮಾಡಿ, ಬಿಜೆಪಿಯವರನ್ನು ನೇರವಾಗಿ ಮನೆಗೆ ಕಳಿಸಿದ್ದಾರೆ ಎಂದು ಹೇಳಿದರು. 

ಕರಾವಳಿಯಲ್ಲಿ ಯಾಕೆ ಕಾಂಗ್ರೆಸ್ ಗೆಲುವಾಗಿಲ್ಲ ಎಂಬ ಪ್ರಶ್ನೆಗೆ, ನಾವು ಜನರ ವಿಶ್ವಾಸ ಗಳಿಸಬೇಕಾಗಿದೆ. ಮತ್ತೆ ವಿಶ್ವಾಸ ಗಳಿಸುತ್ತೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವ್ಯತ್ಯಾಸವನ್ನು ತೋರಿಸುತ್ತೇವೆ. ಯಾಕೆ ಸೋಲಾಗಿದೆ ಎಂದು ವಿಮರ್ಶೆ ಮಾಡುತ್ತೇವೆ. ಚುನಾವಣೆ ಪ್ರತಿ ಕ್ಷೇತ್ರಕ್ಕೂ ಬದಲಾವಣೆ ಇರುತ್ತದೆ. ಬೇರೆ ಬೇರೆ ವಿಚಾರಗಳು ಚುನಾವಣೆ ಮೇಲೆ ಪ್ರಭಾವ ಬೀರುತ್ತವೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಖಾದರ್ ಹೇಳಿದರು. 

SDPI members admit that the banned Jihadi outfit PFI made SDPI a backyard  of its erstwhile cadres to continue operations in Karnataka: Full details

ಉಳ್ಳಾಲದಲ್ಲಿ ಎಸ್ಡಿಪಿಐ ಮೂರನೇ ಸ್ಥಾನಕ್ಕೆ ಬಂದಿದೆ ಎಂಬ ಪ್ರಶ್ನೆಗೆ, ಪೊಲಿಟಿಕ್ಸ್ ನಲ್ಲಿ ರಿಯಾಕ್ಷನ್ ಇರುತ್ತದೆ, ರಾಜಕೀಯದಲ್ಲಿ 2 ಪ್ಲಸ್ 2 ಅಂದ್ರೆ 4 ಆಗಬೇಕೆಂದಿಲ್ಲ. ಅದು 6 ಆಗಬಹುದು. ನನ್ನ ಕ್ಷೇತ್ರದಲ್ಲಿ ಎಸ್ಡಿಪಿಐ ಮೂರನೇ ಸ್ಥಾನ ಪಡೆದಿರಬಹುದು. ಅವರದು ಒಂದು ಲೆಕ್ಕಾಚಾರ ಆದರೆ, ನಮ್ಮದು ಇನ್ನೊಂದು ಲೆಕ್ಕ ಇರತ್ತೆ. ಜನ ನನಗೆ ಆದ್ಯತೆ ಕೊಟ್ಟಿದ್ಧಾರೆ, ಹಿಂದಿಗಿಂತ ಹೆಚ್ಚು ಅಂತರದಲ್ಲಿ ಗೆದ್ದಿದ್ದೇನೆ ಎಂದು ಹೇಳಿದರು. 

BJP president JP Nadda asks party MPs from UP to create awareness about  state and central govt's work - India Today

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಕೊಡಲ್ಲ ಎಂಬ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆ ಕುರಿತ ಪ್ರಶ್ನೆಗೆ, ಕೇಂದ್ರ ಸರ್ಕಾರದ ಅನುದಾನ ಭಿಕ್ಷೆಯಲ್ಲ, ನಮ್ಮ ತೆರಿಗೆಯ ದುಡ್ಡಿನಲ್ಲಿ ಅನುದಾನ ಬರುವುದು. ಅನುದಾನ ಕೊಡದಿದ್ದರೆ ಬಾಯಿ ಮುಚ್ಕೊಂಡು ಕೂರಲ್ಲ. ಹಿಂದೆ ಬಿಜೆಪಿ ಸಂಸದರು ಮೌನ ವಹಿಸಿದ್ದರೆಂದು ನಾವು ಮೌನ ವಹಿಸಲ್ಲ. ಹೇಗೆ ಪಡ್ಕೋಬೇಕು ಎಂದು ಚೆನ್ನಾಗಿ ಗೊತ್ತಿದೆ. ನಮ್ಮ ದುಡ್ಡನ್ನು ಕೇಂದ್ರ ಕಿತ್ತುಕೊಂಡು ಗುಜರಾತಿಗೆ ಒಯ್ದು ಕೊಡುವ ಕೆಲಸ ಮಾಡ್ತಿದೆ. ರಾಜ್ಯಕ್ಕೆ ಪ್ರತಿ ವರ್ಷ ಒಂದೂವರೆ ಲಕ್ಷ ಕೋಟಿ ಜಿಎಸ್ಟಿ ಬರಬೇಕಾಗುತ್ತದೆ ಎಂದರು. 

ತುಳು ದ್ವಿತೀಯ ಭಾಷೆ ಸ್ಥಾನದ ಪ್ರಶ್ನೆಗೆ, ದ.ಕ. ಜಿಲ್ಲೆಯವರೇ ಕನ್ನಡ, ಸಂಸ್ಕೃತಿ ಸಚಿವರಾಗಿದ್ದು ತುಳು ಭಾಷೆ ಬಗ್ಗೆ ಒಂದು ನಿರ್ಣಯಕ್ಕೆ ಬರಲು ಆಗಿಲ್ಲ. ಬಿಜೆಪಿಯವರು ಹೇಳಿಕೆ ಕೊಟ್ಟು ಮೋಸ ಮಾಡಿದ್ದು ಮಾತ್ರ. ತಜ್ಞರ ಕಮಿಟಿ ಮಾಡಿ ಯಾಕೆ ದ್ವಿತೀಯ ಭಾಷೆಯ ಘೋಷಣೆ ಮಾಡಿಲ್ಲ. ನಾವು ಸುಳ್ಳು ಹೇಳುವುದಿಲ್ಲ. ಮುಖ್ಯಮಂತ್ರಿಗೆ ಮನವಿ ಕೊಟ್ಟು ಕುಚಲಕ್ಕಿ ಕೊಡುತ್ತೇವೆಂದು ಹೇಳಿದಂತೆ ಮಾಡಲ್ಲ. ಅಕ್ಕಿ ಕೊಡುವುದಕ್ಕೂ ಒಂದು ಪ್ರೊಸೆಸ್ ಇದೆ, ಅದನ್ನು ಪಾಲನೆ ಮಾಡಬೇಕು. ಇವರು ಈ ಜಿಲ್ಲೆಯ ಅಭಿವೃದ್ಧಿಗೆ ಏನು ಮಾಡಿದ್ದಾರೆ. ಸಣ್ಣ ಸಣ್ಣ ವಿಚಾರದಲ್ಲಿಯೂ ರಾಜಕೀಯ ಮಾಡಿದ್ದಾರೆ. ನಾವು ಅಷ್ಟು ಸಣ್ಣತನಕ್ಕೆ ಇಳಿಯಲ್ಲ. ತುಳು ಭಾಷೆ ಮಾನ್ಯತೆ ಬಗ್ಗೆ ನಮ್ಮದೇನೂ ತಕರಾರು ಇರಲಿಲ್ಲ. ಕ್ಯಾಬಿನೆಟ್ ನಿರ್ಣಯ ಮಾಡಬೇಕು ಎಂದರು.

Funds for the state is not by begging from central government, People of Karnataka have show their power to BJP slams UT Khader in Mangalore.