ಕಟೀಲು ದೇವಸ್ಥಾನ ಮುಂದೆಯೇ ಧಗಧಗನೆ ಹೊತ್ತಿ ಉರಿದ ಬಸ್ ! 

17-05-23 05:43 pm       Mangalore Correspondent   ಕರಾವಳಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಓಎಂ ಪಿಎಲ್ ಘಟಕಕ್ಕೆ ಸೇರಿದ ಬಸ್ಸಿಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಮಂಗಳೂರು, ಮೇ 17 : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಓಎಂ ಪಿಎಲ್ ಘಟಕಕ್ಕೆ ಸೇರಿದ ಬಸ್ಸಿಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಬಜ್ಪೆ- ಪೆರ್ಮುದೆಯಲ್ಲಿ ಇರುವ ಒಎಂಪಿಎಲ್ ಕೈಗಾರಿಕೆಗೆ ಕಟೀಲು ಭಾಗದಿಂದ ನೌಕರರನ್ನು ಒಯ್ಯುತ್ತಿದ್ದ ಬಸ್ಸಿಗೆ ಬೆಂಕಿ ಹತ್ತಿಕೊಂಡಿದೆ. 

ಕಟೀಲು ಕಡೆಯ ನೌಕರರನ್ನು ಬಿಟ್ಟು ಬಸ್ ವಾಪಸ್ಸಾಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿ ಡ್ರೈವರ್ ಸೇರಿ ಮೂರು ಜನ ಇದ್ದರು. ಅವರು ಕೂಡಲೇ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ.  ಶಾಟ್ ಸರ್ಕಿಟ್ ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದ್ದು ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. 

ಬೆಂಕಿ ಕಾಣಿಸಿಕೊಂಡ ಸಂದರ್ಭ ನೀರು ಸರಬರಾಜು ಮಾಡುವ ಮೂರುಕಾವೇರಿಯ ನೀರಿನ ಟ್ಯಾಂಕರ್ ಈ ರಸ್ತೆಯಲ್ಲಿ ಬಂದಿದ್ದು ಕೂಡಲೇ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ, ಆದರೆ ಅಷ್ಟರಲ್ಲೇ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಕಟೀಲು ದೇವಳದ ಸಿಂಬಂದಿ  ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು ಹೆಚ್ಚನ ಅವಘಡ ತಪ್ಪಿಸಿದ್ದಾರೆ.

A private bus owned by OMPL company caught fire in front of the Kateel Durgaparameshwari temple on the outskirts of the city on Wednesday, May 17.