ಬ್ರೇಕಿಂಗ್ ನ್ಯೂಸ್
25-05-23 08:52 pm Mangalore Correspondent ಕರಾವಳಿ
ಮಂಗಳೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ 24 ಹಿಂದುಗಳ ಹತ್ಯೆ ಮಾಡಿದ್ದಾರೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆರೋಪ ಮಾಡಿದ್ದಾರೆ. ಮೂರು ಮುಕ್ಕಾಲು ವರ್ಷ ರಾಜ್ಯದಲ್ಲಿ ಇವರದೇ ಬಿಜೆಪಿ ಸರಕಾರ ಇತ್ತು. ಯಾಕೆ ಅದರ ಬಗ್ಗೆ ತನಿಖೆ ಮಾಡಿಸಿಲ್ಲ. ಇವರಿಗೇನು ನಲ್ವತ್ತು ಪರ್ಸೆಂಟ್ ಭ್ರಷ್ಟಾಚಾರದ ಹಣ ಎಣಿಸಲಿಕ್ಕಿತ್ತಾ.. ಸಿದ್ದರಾಮಯ್ಯ ಬಗ್ಗೆ ನೀಡಿರುವ ಹೇಳಿಕೆ ಕುರಿತು ಹರೀಶ್ ಪೂಂಜ ಬಹಿರಂಗ ಕ್ಷಮೆ ಯಾಚಿಸದಿದ್ದರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈಗಾಗಲೇ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಪೊಲೀಸ್ ದೂರು ದಾಖಲಾಗಿದೆ. ಮಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ದೂರು ನೀಡಲಿದ್ದಾರೆ. ನಮ್ಮ ಕಾನೂನು ವಿಭಾಗದ ಮನೋರಾಜ್ ಅವರು ಮಾನನಷ್ಟ ಮೊಕದ್ದಮೆ ಹಾಕಲು ಸಿದ್ಧತೆ ನಡೆಸಿದ್ದಾರೆ ಎಂದರು. ಬೆಳ್ತಂಗಡಿಯಲ್ಲಿ ಭ್ರಷ್ಟಾಚಾರದ ದುಡ್ಡಿನಲ್ಲಿ ಹರೀಶ್ ಪೂಂಜ ಗೆದ್ದಿದ್ದಾರೆ ಎಂದು ಆರೋಪಿಸಿದ ಹರೀಶ್ ಕುಮಾರ್, ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಶಾಸಕ ಹರೀಶ್ ಪೂಂಜ ಪರವಾಗಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಮತ್ತು ಸದಸ್ಯರೊಬ್ಬರು ನಸುಕಿನ 3 ಗಂಟೆ ವೇಳೆಗೆ ಹಣ ಹಂಚುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಪೊಲೀಸರು ಸರ್ಚ್ ಮಾಡಿ, ಏನೂ ಹಣ ಇಲ್ಲವೆಂದು ಹೇಳಿದ್ದರು. ಆನಂತರ, ವಸಂತ ಬಂಗೇರ ಬಂದು ಕಾರಿನಲ್ಲಿ ಚೆಕ್ ಮಾಡಿದಾಗ 65 ಸಾವಿರ ರೂ. ಹಣ ಸಿಕ್ಕಿತ್ತು. ನಡುರಾತ್ರಿ ಅಷ್ಟು ಹಣ ಸಿಕ್ಕಿದ್ದರೆ, ಎಷ್ಟು ಬೂತ್ ಗಳಲ್ಲಿ ಇವರು ಹಣ ಹಂಚಿರಲ್ಲ. 40 ಕೋಟಿಗೂ ಹೆಚ್ಚು ಸುರಿದು ಹರೀಶ್ ಪೂಂಜ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ ಶರತ್ ಮಡಿವಾಳ ಹತ್ಯೆಯನ್ನು ಯಾರ ತಲೆಗೆ ಕಟ್ಟಿದ್ದರು, ಪ್ರವೀಣ್ ನೆಟ್ಟಾರು ಹತ್ಯೆಯನ್ನು ಯಾರು ಮಾಡಿಸಿದ್ದಾರೆಂದು ಹಿಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ. ಪ್ರವೀಣ್ ಕೊಲೆ ಸಂದರ್ಭದಲ್ಲಿ ಸಂಸದರ ಕಾರನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆದಿತ್ತು ಎಂದು ಹೇಳಿದ ಹರೀಶ್ ಕುಮಾರ್, ಬೆಳ್ತಂಗಡಿಯಲ್ಲಿ ಮರಳುಗಾರಿಕೆ ಎಷ್ಟಿದೆ ಅಂದ್ರೆ, ನೇತ್ರಾವತಿಯಲ್ಲಿ ಒಂದು ಹಿಡಿಯಷ್ಟು ಮರಳು ಸಿಗದಂತಾಗಿದೆ. ಈಗ ಮೊಗ್ರು ಗ್ರಾಮದಿಂದ 25 ಕಿಮೀ ದೂರದ ಬೆಳ್ತಂಗಡಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆಯಾಗಿದ್ದು, ಈವರೆಗೆ ಪೈಪ್ ಲೈನ್ ಅಷ್ಟೇ ಆಗಿದ್ದು ಅದರಲ್ಲಿ ಭಾರೀ ಭ್ರಷ್ಟಾಚಾರ ಆಗಿದೆ.
ಬೆಳ್ತಂಗಡಿಯ ಪೊಲೀಸರು ಕೂಡ ಹರೀಶ್ ಪೂಂಜನ ದುಡ್ಡು ಪಡೆದು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹಣ ಹಂಚುತ್ತಿದ್ದಾಗಲೂ ಪೊಲೀಸರು ಹಣ ಸಿಕ್ಕೇ ಇಲ್ಲ ಎಂದಿದ್ದರು. ಅದೇ ಕಾರಿನಲ್ಲಿ ವಸಂತ ಬಂಗೇರ ಸ್ವತಃ ತಪಾಸಣೆ ನಡೆಸಿದ್ದಾಗ ಹಣ ಪತ್ತೆಯಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ಆಗಿದೆ. ಚುನಾವಣೆ ವೇಳೆ ಕೆಲವರು ದಮ್ಮು, ತಾಕತ್ತು ಇದ್ದರೆ ಅಶ್ವಮೇಧ ಕುದುರೆ ಬಿಟ್ಟಿದ್ದೇವೆ, ಕಟ್ಟಿ ಹಾಕಿ ಎಂದು ಸವಾಲು ಹಾಕಿದ್ದರು. ಮತದಾರರು ದಮ್ಮು ತೋರಿಸಿದ್ದು ಬಿಜೆಪಿಯನ್ನು ಮೂಲೆಗೆ ತಳ್ಳಿದ್ದಾರೆ. ಈಗ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಬಗ್ಗೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಇವರಿಗೇನು ಅವಸರ, ನಾವು ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ. ಹಿಂದೆ ಮೋದಿಯವರು ನೂರು ದಿನದಲ್ಲಿ ಕಪ್ಪು ಹಣ ತರುತ್ತೇನೆ, 15 ಲಕ್ಷ ರೂ. ಎಲ್ಲರ ಬ್ಯಾಂಕ್ ಅಕೌಂಟಿಗೆ ಹಾಕಿಸ್ತೇನೆ ಎಂದಿದ್ದರು. ಒಂಬತ್ತು ವರ್ಷ ಆಯ್ತು, ಯಾಕೆ ಯಾರು ಕೂಡ ಕೇಳುತ್ತಿಲ್ಲ ಎಂದರು ಹರೀಶ್ ಕುಮಾರ್.
ಮಟ್ಕಾ ದಂಧೆ, ಡ್ರಗ್ಸ್ ಕಿಂಗ್ ಪಿನ್ ಯಾರು ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಟ್ಕಾ, ಡ್ರಗ್ಸ್, ಚೀಟಿ ದಂಧೆ ಎಗ್ಗಿಲ್ಲದೆ ನಡೀತಿದ್ದು, ಎಲ್ಲ ಪೊಲೀಸ್ ಠಾಣೆಗಳಿಗೂ ಮಾಮೂಲು ಹೋಗುತ್ತಿದೆ. ಇದರ ಹಿಂದಿರುವ ಕಿಂಗ್ ಪಿನ್ ಯಾರೆಂದು ಪೊಲೀಸರು ಪತ್ತೆ ಹಚ್ಚಬೇಕು. ಪೊಲೀಸ್ ಕಮಿಷನರ್, ಎಸ್ಪಿಯವರು ಈ ಬಗ್ಗೆ ಎಚ್ಚತ್ತು ಕೆಲಸ ಮಾಡಬೇಕಾಗಿದೆ. ಯಾವ ಪಕ್ಷಗಳಿಗೆ, ಠಾಣೆಗಳಿಗೆ ಎಷ್ಟು ಹಣ ಹೋಗುತ್ತದೆ ಎಂದು ಪತ್ತೆ ಮಾಡಬೇಕಾಗಿದೆ ಎಂದರು.
ಪುತ್ತೂರಿನಲ್ಲಿ ಹೊಡೆಸಿದ್ದು ಯಾರೆಂದು ಹೇಳಲಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಂಗ್ರೆಸ್ ಹಿಂದು ವಿರೋಧಿ ಎಂಬ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಹಿಂದು ವಿರೋಧಿಯಲ್ಲ. ಯಾರು ಹಿಂದು ವಿರೋಧಿಗಳೆಂದು ಇಡೀ ಜಿಲ್ಲೆಯ ಹಿಂದು ಕಾರ್ಯಕರ್ತರೇ ತೋರಿಸುತ್ತಿದ್ದಾರೆ. ಇವರ ಕಾರನ್ನು ಯಾಕೆ ಅಲ್ಲಾಡಿಸಿದ್ರು, ಪುತ್ತೂರಿನಲ್ಲಿ ಪೊಲೀಸರ ಮೂಲಕ ಹಿಂದು ಕಾರ್ಯಕರ್ತರಿಗೆ ಮಾರಣಾಂತಿಕ ಹಲ್ಲೆ ನಡೆಸಲು ಕುಮ್ಮಕ್ಕು ಕೊಟ್ಟಿದ್ದು ಯಾರೆಂದು ನಳಿನ್ ಕುಮಾರ್ ಹೇಳಲಿ. ಇವರ ನಕಲಿ ಹಿಂದುತ್ವ, ಢೋಂಗಿ ರಾಜಕಾರಣವನ್ನು ಇಡೀ ರಾಜ್ಯದ ಜನರು ತಿರಸ್ಕರಿಸಿದ್ದಾರೆ ಎಂದರು.
ಚುನಾವಣೆ ಸಂದರ್ಭದಲ್ಲಿ ಹರೀಶ್ ಪೂಂಜ ಬೆಳ್ತಂಗಡಿ ತಾಲೂಕಿನಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದಿದ್ದಾಗಿ ತೆಂಗಿನ ಕಾಯಿ ಒಡೆದು ಎಲ್ಲ ಕಡೆ ಫ್ಲೆಕ್ಸ್ ಹಾಕಿಸಿದ್ದಾರೆ. ಇದಕ್ಕೆ ವರ್ಕ್ ಆರ್ಡರ್ ಆಗಿದ್ಯಾ, ಅನುದಾನ ಮಂಜೂರಾತಿ ಆಗಿದೆಯಾ ಎಂಬ ಬಗ್ಗೆ ಶಾಸಕರು ಸ್ಪಷ್ಟನೆ ನೀಡಬೇಕು. ಅನುದಾನ ಮಂಜೂರಾತಿ ಆಗದೆ ಗುದ್ದಲಿ ಪೂಜೆ ನಡೆಸುವುದನ್ನು ಕಾಂಗ್ರೆಸ್ ಸಹಿಸಲ್ಲ ಎಂದರು.
"MLA Harish Poonja accused Chief Minister Siddaramaiah of murdering 24 Hindu workers during the BJP's election victory celebrations in Beltangady. We intend to file a defamation case against him," MLC Harish Kumar said. Addressing the media on Thursday, May 25, he further added, "The BJP government has been in power for the past few years, so why didn't they inquire about the murdered Hindu workers during that time? Were they too preoccupied with tallying the corrupt? Harish Poonja may be an MLA, but appropriate action will be taken against him."
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm