ಮನೆ ಮಾಲೀಕನ ಬಿಟ್ಟು ಕೆಲಸದಾಕೆ ಜೊತೆಗೆ ಬಸ್ಸನ್ನೇರಿದ ಶ್ವಾನ ; ಇಳಿಸಲು ಬಸ್ ಸಿಬಂದಿ ಹರಸಾಹಸ 

26-05-23 10:58 pm       Udupi Correspondent   ಕರಾವಳಿ

ಶ್ವಾನ ಅಂದರೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿ. ಅದಕ್ಕೆ ಅನ್ನ ಹಾಕಿದ ಋಣವನ್ನು ನಾಯಿ ಯಾವತ್ತೂ ಮರೆಯಲ್ಲ. ಇದೇ ರೀತಿ ನಿಷ್ಠೆ ಮೆರೆದ ನಾಯಿಯೊಂದು ಮನೆ ಮಾಲೀಕನನ್ನು ಬಿಟ್ಟು ಅನ್ನ ಹಾಕಿ ಸಲಹಿದ ಮನೆ ಕೆಲಸದಾಕೆಯ ಜೊತೆಗೆ ಬಸ್ ಹತ್ತಿದ ಘಟನೆ ಉಡುಪಿಯಲ್ಲಿ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.

ಉಡುಪಿ, ಮೇ 26 : ಶ್ವಾನ ಅಂದರೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿ. ಅದಕ್ಕೆ ಅನ್ನ ಹಾಕಿದ ಋಣವನ್ನು ನಾಯಿ ಯಾವತ್ತೂ ಮರೆಯಲ್ಲ. ಇದೇ ರೀತಿ ನಿಷ್ಠೆ ಮೆರೆದ ನಾಯಿಯೊಂದು ಮನೆ ಮಾಲೀಕನನ್ನು ಬಿಟ್ಟು ಅನ್ನ ಹಾಕಿ ಸಲಹಿದ ಮನೆ ಕೆಲಸದಾಕೆಯ ಜೊತೆಗೆ ಬಸ್ ಹತ್ತಿದ ಘಟನೆ ಉಡುಪಿಯಲ್ಲಿ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.

ಉಡುಪಿ ಹೊರವಲಯದ ಅಮ್ಮುಂಜೆ ರಸ್ತೆಯ ಸರಸ್ವತಿ ನಗರದಲ್ಲಿ ಮನೆ ಕೆಲಸದಾಕೆ ಕೆಲಸ ಮುಗಿಸಿ ಎಂದಿನಂತೆ ಬಸ್ಸನ್ನೇರಿದ್ದಳು. ಜೊತೆಗೆ ಬೆನ್ನು ಹತ್ತಿದ್ದ ನಾಯಿ ಆಕೆಯ ಜೊತೆಗೆ ಬಸ್ ಹತ್ತಿದೆ. ಬಸ್ಸಿನ ನಿರ್ವಾಹಕ ಎಷ್ಟು ಪ್ರಯತ್ನ ಪಟ್ಟರೂ ನಾಯಿ ಕೆಳಗಿಳಿಯಲಿಲ್ಲ. ಮನೆ ಕೆಲಸದಾಕೆ ಮಹಿಳೆ ಎಲ್ಲಿ ಹೋಗಿ ಕುಳಿತಳೋ ಅಲ್ಲಿಯೇ ಪಕ್ಕದಲ್ಲಿ ನಿಂತುಬಿಟ್ಟಿತ್ತು. 

ಕೊನೆಗೆ, ಬಸ್ ನಿರ್ವಾಹಕ ಮಹಿಳೆಯನ್ನೇ ಬಸ್ ಇಳಿಯಲು ಸೂಚಿಸಿದ್ದಾರೆ. ಹಿಂದಿನ ಬಾಗಿಲಲ್ಲಿ ಮಹಿಳೆ ಇಳಿಯುತ್ತಿದ್ದಂತೆ ನಾಯಿ ಕೂಡ ಇಳಿದು ಬಂತು. ಅನ್ನ ಹಾಕಿ ಸಲಹಿದ ಪ್ರೀತಿಯೋ, ತನ್ನನ್ನು ಬಿಟ್ಟು ಪ್ರೀತಿಯ ತಾಯಿ ಹೋಗುತ್ತಿದ್ದಾಳೆ ಎಂದೋ ಏನೋ ನಾಯಿ ಮನೆ ಕೆಲಸದಾಕೆ ಮಹಿಳೆಯನ್ನು ಬಿಟ್ಟು ಕೊಡಲೇ ಇಲ್ಲ. ಆಮೂಲಕ ಸ್ವಾಮಿ ನಿಷ್ಠೆ ಮೆರೆದ ನಾಯಿಯ ವಿಡಿಯೋ ಉಡುಪಿಯಲ್ಲಿ ವೈರಲ್ ಆಗಿದೆ.

A pet dog followed a house maid, who was working for owners of the dog, in the bus as the woman was leaving for her home. This incident is reported from Ammunje Road bus stand at Saraswati Nagar here.