35-40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಜಿಲ್ಲೆ ಸಚಿವ ಸ್ಥಾನದಿಂದ ಮಿಸ್ ! ಪಕ್ಷ ಸಂಘಟನೆಯಲ್ಲಿ ಕಾಂಗ್ರೆಸ್ ಸೋತಿದ್ದಕ್ಕೆ ಸಚಿವ ಸ್ಥಾನಕ್ಕೂ ಕುತ್ತು !

27-05-23 10:57 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಸರಕಾರದ ಸಚಿವ ಸ್ಥಾನ ಮಿಸ್ ಆಗಿದೆ. ಪ್ರತಿ ಬಾರಿ ಯಾವುದೇ ಪಕ್ಷದ ಸರಕಾರ ಬಂದರೂ, ಕರಾವಳಿಯ ಈ ಎರಡು ಜಿಲ್ಲೆಗೆ ಸಚಿವ ಸ್ಥಾನ ಖಚಿತ ಇರುತ್ತಿತ್ತು.

ಮಂಗಳೂರು, ಮೇ 27: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಸರಕಾರದ ಸಚಿವ ಸ್ಥಾನ ಮಿಸ್ ಆಗಿದೆ. ಪ್ರತಿ ಬಾರಿ ಯಾವುದೇ ಪಕ್ಷದ ಸರಕಾರ ಬಂದರೂ, ಕರಾವಳಿಯ ಈ ಎರಡು ಜಿಲ್ಲೆಗೆ ಸಚಿವ ಸ್ಥಾನ ಖಚಿತ ಇರುತ್ತಿತ್ತು. ಈ ಬಾರಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳೊಂದಿಗೆ ಬಹುಮತದ ಸರ್ಕಾರ ಸ್ಥಾಪಿಸಿದ್ದರೂ, ಕರಾವಳಿ ಭಾಗದಲ್ಲಿ ಪಕ್ಷದ ಕಳಪೆ ಸಾಧನೆಯ ಕಾರಣಕ್ಕೋ ಏನೋ, ಸಚಿವ ಸ್ಥಾನವನ್ನೇ ಕೊಟ್ಟಿಲ್ಲ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 13 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಎರಡು ಸ್ಥಾನ ಮಾತ್ರ. ಅದರಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಯುಟಿ ಖಾದರ್ ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ. ಪುತ್ತೂರಿನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಅಶೋಕ್ ರೈ ಶಾಸಕರಾಗಿದ್ದಾರೆ. ಇವರನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂವರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಬಿಕೆ ಹರಿಪ್ರಸಾದ್, ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಪರಿಷತ್ ಸದಸ್ಯರಾಗಿದ್ದರಿಂದ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಇತರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಐದಾರು ಬಾರಿ ಗೆದ್ದವರಿಗೆ ಈ ಸಲ ಸಚಿವ ಸ್ಥಾನದ ಮಣೆ ಹಾಕಿದ್ದು ಲೋಕಸಭೆ ಚುನಾವಣೆ ಗೆಲ್ಲುವ ಟಾಸ್ಕ್ ನೀಡಲಾಗಿದೆ.  

 

PM Modi, Imran Khan thrive on rousing nationalistic passions: Former  Karnataka minister | Mangaluru News - Times of IndiaCongress leader U T Khader files nomination for Karnataka Assembly Speaker  post, Congress leader U T Khader files nomination for Karnataka Assembly  Speaker post

Congress to release its first list in Feb End – B K Hariprasad -  Mangalorean.com

2004ರಲ್ಲಿ ರಾಜ್ಯದಲ್ಲಿ ಧರಂ ಸಿಂಗ್ ಮತ್ತು ಕುಮಾರಸ್ವಾಮಿ ಮೈತ್ರಿ ಸರಕಾರ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವರು ಇರಲಿಲ್ಲ. ಹಾಗಾಗಿ ಹುಬ್ಬಳ್ಳಿ ಮೂಲದ ಜಬ್ಬಾರ್ ಖಾನ್ ಹೊನ್ನಳ್ಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಮಾನಾಥ ರೈ ಸೋತಿದ್ದೂ ಸಚಿವ ಸ್ಥಾನ ಮಿಸ್ ಆಗಿರುವುದಕ್ಕೆ ಕಾರಣ ಆಗಿತ್ತು. ಆನಂತರ, ಎರಡೇ ವರ್ಷದಲ್ಲಿ ಸರಕಾರದಿಂದ ಹೊರಬಂದು ಕುಮಾರಸ್ವಾಮಿ ಬಿಜೆಪಿ ಜೊತೆಗೆ ಸರಕಾರ ನಡೆಸಿದ್ದರು. ಆಗ ನಾಗರಾಜ ಶೆಟ್ಟಿ ಸಚಿವರಾಗಿದ್ದರು.

No moral policing in Karnataka: CM Siddaramaiah directs IPS officers |  Bengaluru - Hindustan Times

DK Shivakumar Confident Of Congress' Victory In Karnataka

ಅದಕ್ಕೂ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇದ್ದಾಗಲೂ ಅಮರನಾಥ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ವೀರಪ್ಪ ಮೊಯ್ಲಿ, ರಮಾನಾಥ ರೈ ಹೀಗೆ ಪ್ರತಿ ಬಾರಿ ಯಾರಾದರೊಬ್ಬರಿಗೆ ಸಚಿವ ಸ್ಥಾನ ಸಿಗುತ್ತಿತ್ತು. 2008ರಲ್ಲಿ ಯಡಿಯೂರಪ್ಪ ಸರಕಾರ ಬಂದಾಗಲೂ ಕೃಷ್ಣ ಪಾಲೆಮಾರ್ ಮತ್ತು ಡಾ.ವಿ.ಎಸ್ ಆಚಾರ್ಯ ಸಚಿವರಾಗಿದ್ದರು. 2013ರಲ್ಲಿ ಸಿದ್ದರಾಮಯ್ಯ ಸರಕಾರ ಬಂದಾಗ ರಮಾನಾಥ ರೈ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2018ರಲ್ಲಿ ಕಾಂಗ್ರೆಸ್ 7-1ರಲ್ಲಿ ಸೋತರೂ, ಮೈತ್ರಿ ಸರಕಾರದಲ್ಲಿ ಯುಟಿ ಖಾದರ್ ಸಚಿವರಾಗಿದ್ದರು. ಆನಂತರ, ಬಿಜೆಪಿ ಸರಕಾರ ಬಂದಾಗ ಉಡುಪಿ ಜಿಲ್ಲೆಯ ಸುನಿಲ್ ಕುಮಾರ್, ಶ್ರೀನಿವಾಸ ಪೂಜಾರಿ ಸಚಿವರಾಗಿದ್ದರು.

ಹೀಗಾಗಿ ಕಳೆದ 35-40 ವರ್ಷಗಳಿಂದಲೂ ಕರಾವಳಿಯ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಸಚಿವ ಸ್ಥಾನ ಇಲ್ಲದೇ ಇದ್ದ ಸಂದರ್ಭ ಕಡಿಮೆ. ಧರಂ ಸಿಂಗ್ ಸರಕಾರದ ಎರಡು ವರ್ಷದ ಅವಧಿಯಲ್ಲಿ ಮಾತ್ರ ಸಚಿವರಿಲ್ಲದೇ ಇದ್ದರು. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ರೆವಿನ್ಯೂ ಕೊಡುವ ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಯಾರಿಗಾದರೂ ಸಚಿವ ಸ್ಥಾನ ಕೊಡುತ್ತಿರುವುದು ವಾಡಿಕೆಯಾಗಿತ್ತು. ಈ ಬಾರಿ ಕಾಂಗ್ರೆಸ್ ಕರಾವಳಿಯಲ್ಲಿ ಕಳಪೆ ಸಾಧನೆ ಮಾಡಿರುವುದು ಮತ್ತು ಪಕ್ಷ ಸಂಘಟನೆಯಲ್ಲಿ ಕರಾವಳಿ ಹಿಂದೆ ಬಿದ್ದಿರುವುದಕ್ಕೆ ಸಚಿವ ಸ್ಥಾನವೂ ಮಿಸ್ ಆಗಿದೆ ಎನ್ನುವ ಮಾತು ಕೇಳಿಬಂದಿದೆ. ಇದ್ದೊಬ್ಬ ಶಾಸಕರನ್ನು ವಿಧಾನಸಭೆ ಸ್ಪೀಕರ್ ಮಾಡಿ ಕರಾವಳಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಲಾಗಿದೆ. ಈ ಬಾರಿ ಮಧು ಬಂಗಾರಪ್ಪ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಮಾತು ಕೇಳಿಬಂದಿದೆ.

None of the MLAs from Mangalore and Udupi received chance to enter Cabinet, No minister post to none in Siddaramaiah government. The party also gave a chance to several former ministers and veteran Congress leaders in its second list.