ಬ್ರೇಕಿಂಗ್ ನ್ಯೂಸ್
29-05-23 05:53 pm Mangaluru Correspondent ಕರಾವಳಿ
ಮಂಗಳೂರು, ಮೇ 29: ಮುಂಬೈ ಕನ್ನಡಿಗ ಲೇಖಕಿ ಅಶ್ವಿತಾ ಶೆಟ್ಟಿಯವರ ಚೊಚ್ಚಲ ಕಥಾ ಸಂಕಲನ ‘’ಮರ್ಸಿಡಿಸ್ ಬೆಂಝ್ ನ ಹಿಂದೆ ’’ ಎನ್ನುವ ಪುಸ್ತಕವನ್ನು ಹೈಕೋರ್ಟ್ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಹರೇಕಳ ಪಾವೂರಿನ ಇನೋಳಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.
ಎಂಆರ್ ಪಿಎಲ್ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ವೀಣಾ ಟಿ. ಶೆಟ್ಟಿ, ಇನ್ನೋಳಿ ಸೋಮನಾಥೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲ ಶೆಟ್ಟಿ ಬಾರ್ಲ, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಐಲೇಸಾ ದಿವಾಯ್ಸ್ ಆಫ್ ಓಶಿಯನ್ ಸ್ಥಾಪಕ, ಲೇಖಕ ಶಾಂತರಾಮ ಶೆಟ್ಟಿ, ಬೆಂಗಳೂರಿನ ಟೋಟಲ್ ಕನ್ನಡ ಪ್ರಕಾಶಕ ಲಕ್ಷ್ಮೀಕಾಂತ್, ನಿವೃತ್ತ ಶಿಕ್ಷಕ ಗಂಗಾಧರ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸಿವಿಲ್ ನ್ಯಾಯಾಧೀಶ ಪ್ರಸಾದ್ ಕೆವಿ, ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ, ಸಾಹಿತಿ ಶಶಿರಾಜ್ ಕಾವೂರು ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿತಾ ಶೆಟ್ಟಿ ಮೂಲತಃ ಇನ್ನೋಳಿಯವರಾಗಿದ್ದು, ಮದುವೆಯಾದ ಬಳಿಕ ಮುಂಬೈನಲ್ಲಿ ನೆಲೆಸಿದ್ದಾರೆ. ಅಲ್ಲಿದ್ದುಕೊಂಡೇ ಕನ್ನಡದಲ್ಲಿ ಬರವಣಿಗೆ ಮುಂದುವರಿಸಿದ್ದಾರೆ. ಯುಗಪುರುಷ ಮಾಸ ಪತ್ರಿಕೆಯಲ್ಲಿ 15ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಇದೀಗ ಮೊದಲ ಬಾರಿಗೆ 22 ಕಥೆಗಳನ್ನು ಒಳಗೊಂಡ ಮರ್ಸಿಸಿಡ್ ಬೆಂಝ್ ಹಿಂದೆ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಆಧುನಿಕತೆಯ ಬೆನ್ನುಹತ್ತಿದ ಯುವ ಜನಾಂಗ, ಎದುರಿಸುತ್ತಿರುವ ತವಕ, ತಲ್ಲಣಗಳನ್ನು ತೆರೆದಿಟ್ಟಿದ್ದಾರೆ.
ಯುವಕನೊಬ್ಬ ಉದ್ಯೋಗ ಅರಸಿ ಜರ್ಮನಿಗೆ ಹೊರಟು ಅಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯಲ್ಲಿ ದುಡಿದು ಕಂಪನಿಯ ಯಶಸ್ಸಿಗೆ ಕಾರಣವಾಗುತ್ತಾನೆ. ದೊಡ್ಡ ಕಂಪನಿ, ಟಾರ್ಗೆಟ್ ಎನ್ನುತ್ತಾ 24 ಗಂಟೆ ದುಡಿತದ ಕಾರಣ ಇತ್ತ ಆತನ ಸ್ವಂತ ಜೀವನ ನರಕಕ್ಕೆ ಹೋಗುತ್ತದೆ. ಕಂಪನಿಯಿಂದ ಹೊರಬಂದು ನೋಡಿದಾಗ, ತನ್ನದೆಲ್ಲವೂ ನಶ್ವರವಾಗಿರುತ್ತೆ ಎನ್ನುವ ಚಿತ್ರಣವನ್ನು ಕಟ್ಟಿಕೊಡುವ ಕಥೆಗಳು ಆಧುನಿಕ ವಾಸ್ತವಗಳನ್ನು ತೆರೆದಿಡುತ್ತವೆ. ಕಾರ್ಯಕ್ರಮದಲ್ಲಿ ಪ್ರೊ.ಸಾಯಿಗೀತಾ ಹೆಗ್ಡೆ ಕೃತಿ ಪರಿಚಯಿಸಿದರು. ಹರಿಶ್ಚಂದ್ರ ಶೆಟ್ಟಿ ಕರ್ನಿರೆ ಸ್ವಾಗತಿಸಿದರು.
High court judge Justice Vishwajith Shetty launches book of Kannada Author Ashwitha Shetty called "Mercedes Benz Na Hindey" in Mangalore at Sri Somanatheshwara Temple. Ashwitha Shetty hails from Inoli, Mangalore and is now based in Mumabi. Mercedes Benz Na Hindey book contains 22 stories.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 07:31 pm
HK News Desk
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm