ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟುವಿಗೆ ಹೃದಯಾಘಾತ ; ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು 

31-05-23 12:40 pm       Mangalore Correspondent   ಕರಾವಳಿ

ರಾಷ್ಟ್ರ ಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ, ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ ಸಾಲಿಯತ್ ದಿಢೀರ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.

ಬೆಳ್ತಂಗಡಿ, ಮೇ 31: ರಾಷ್ಟ್ರ ಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ, ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ ಸಾಲಿಯತ್ ದಿಢೀರ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ. 

ಉಜಿರೆ ಎಸ್.ಡಿ.ಎಂ. ಕಾಲೇಜು ಹಳೇ ವಿದ್ಯಾರ್ಥಿನಿಯಾಗಿದ್ದ ಸಾಲಿಯತ್(24) ಪ್ರತಿಭಾನ್ವಿತ ವಾಲಿಬಾಲ್ ಕ್ರೀಡಾಪಟುವಾಗಿದ್ದರು. ಚಿಕ್ಕಮಗಳೂರು ಮೂಲದವರನ್ನು ಮದುವೆಯಾಗಿ ಒಂದು ವರ್ಷದಿಂದ ಪತಿ ಮನೆಯಲ್ಲಿದ್ದರು.

ಎದೆ ನೋವಿಗೆ ಒಳಗಾದ ಅವರನ್ನು ಸ್ಥಳೀಯ ಬಣಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಹೃದಯಾಘಾತ ಆಗಿರುವುದು ದೃಢಪಟ್ಟ ಹಿನ್ನೆಲೆ ನಿನ್ನೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಾಲಿಯತ್ ನಿಧನದಿಂದ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.

ಸಾಲಿಯತ್ ಅವರು ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಗೆಲ್ಲುವಲ್ಲಿ ಪಾತ್ರ ವಹಿಸಿದ್ದರು.

Saliath (24), a brilliant volleyball player of the taluk, who played at national level during her student days, died of cardiac arrest on May 31. Saliath was an alumnus of SDM College. She was resident of Padangadi Poyyegudde and was residing at her husband’s house at Chikkamagaluru since one year after marriage.