ಬ್ರೇಕಿಂಗ್ ನ್ಯೂಸ್
31-05-23 07:00 pm Mangalore Correspondent ಕರಾವಳಿ
ಮಂಗಳೂರು, ಮೇ 31: ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಡಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಕಸರತ್ತು ನಡೆಸುತ್ತಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ನಿಗಮಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಉಚಿತ ಬಸ್ ಪ್ರಯಾಣದಲ್ಲಿ ಯಾವುದೇ ಷರತ್ತು ಇರುವುದಿಲ್ಲ. ಎಲ್ಲರಿಗೂ ಫ್ರೀ ಕೊಡಲಾಗುವುದು ಎಂದಿದ್ದರು. ಆದರೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ರಾಜ್ಯದಲ್ಲಿ ಜಾರಿಗೆ ಬಂದರೆ, ಮೊದಲಾಗಿ ಈ ಸೌಲಭ್ಯದಿಂದ ವಂಚಿತರಾಗೋದು ಕರಾವಳಿಯ ಜನ.
ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 95 ಪರ್ಸೆಂಟ್ ಸಾರಿಗೆ ವ್ಯವಸ್ಥೆ ಇರುವುದು ಖಾಸಗಿಯದ್ದು. ಮಂಗಳೂರು ನಗರ ಮತ್ತು ಉಡುಪಿ ನಗರದಲ್ಲಂತೂ ಪೂರ್ತಿಯಾಗಿ ಖಾಸಗಿ ಬಸ್ ಗಳೇ ಆಕ್ರಮಿಸಿಕೊಂಡಿವೆ. ಉಳಿದಂತೆ, ಗ್ರಾಮಾಂತರ ಪ್ರದೇಶಗಳಾದ ಪುತ್ತೂರು, ಬಂಟ್ವಾಳ, ಮೂಡುಬಿದ್ರೆಯಲ್ಲೂ ಖಾಸಗಿ ಬಸ್ ಸಂಚಾರವೇ ಹೆಚ್ಚಿವೆ. ಎಲ್ಲ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ, ಕಾಲೇಜು- ಶಾಲೆಗೆ ಹೋಗುವ ಹೆಣ್ಮಕ್ಕಳಿಗೆ ಉಚಿತ ಪ್ರಯಾಣದ ಆದೇಶ ಬಂದರೆ, ಈ ಭಾಗದ ಜನರು ಅವಕಾಶ ವಂಚಿತರಾಗಲಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ಬಿಡಲ್ಲ ಎನ್ನುವ ಮಾತು ಇಲ್ಲಿ ಹೆಚ್ಚು ಅನ್ವಯವಾಗುತ್ತದೆ. ರಾಜ್ಯ ಸರಕಾರ ಜನರಿಗೆ ಉಚಿತ ಸೌಲಭ್ಯದ ಆದೇಶ ಮಾಡಿದರೂ, ಅದು ಕರಾವಳಿ ಜನರಿಗೆ ತಲುಪುವುದಿಲ್ಲ. ಈ ಕಾರಣದಿಂದ ಕರಾವಳಿಯಲ್ಲಿ ಖಾಸಗಿ ಬಸ್ ಗಳಲ್ಲೂ ಉಚಿತ ಪ್ರಯಾಣದ ಅವಕಾಶ ನೀಡಬೇಕೆಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರಕಾರವನ್ನು ಆಗ್ರಹ ಮಾಡಿದ್ದಾರೆ. ಇದೇ ವೇಳೆ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಖಾಸಗಿ ಬಸ್ ಮಾಲೀಕರ ಒಕ್ಕೂಟದ ರಾಜ್ಯಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಸರಕಾರ ಖಾಸಗಿ ಬಸ್ ಗಳಲ್ಲೂ ಸೌಲಭ್ಯ ಜಾರಿಗೆ ತಂದರೆ ಸ್ವಾಗತಿಸುತ್ತೇವೆ. ನಾವು ಕೂಡ ಉಚಿತವಾಗಿ ಒಯ್ಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ನಮಗೆ ಸರಕಾರದಿಂದ ಪರ್ಯಾಯವಾಗಿ ಹಣವನ್ನು ಕೊಡಬೇಕಿಲ್ಲ. ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಇರುವಂತೆ ಡೀಸೆಲ್ ಸಬ್ಸಿಡಿ ಇನ್ನಿತರ ಸೌಲಭ್ಯ ನೀಡಿದರೆ ಸಾಕು ಎಂದವರು ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಮೂಲೆಗೆ ಹೋಗಬೇಕಿದ್ದರೂ, ಜನರು ಖಾಸಗಿ ಬಸ್ಗಳನ್ನೇ ಆಶ್ರಯಿಸಬೇಕು. ಒಂದೆರಡು ನರ್ಮ್ ಬಸ್ ಗಳಿದ್ದರೂ, ಊಟಕ್ಕಿಲ್ಲದ ಉಪ್ಪಿನಕಾಯಿ ಅಂತಿದೆ. ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಸಿಟಿ ಬಸ್ಸುಗಳು ತುಂಬಿಕೊಂಡೇ ಸಂಚರಿಸುವುದು ಮಾಮೂಲು. ದಿನವೂ ಕೆಲಸಕ್ಕೆ ಹೋಗುವವರು, ಶಾಲೆ, ಕಾಲೇಜಿಗೆ ಹೋಗುವವರೇ ಖಾಸಗಿ ಬಸ್ಸುಗಳ ಗಿರಾಕಿಗಳು. ಇಂಥ ಸಂದರ್ಭದಲ್ಲಿ ಸಾಧಾರಣವಾಗಿ ಬಸ್ಸುಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿರುತ್ತಾರೆ. ಹೀಗಾಗಿ ರಾಜ್ಯ ಸರಕಾರದ ಸೌಲಭ್ಯ ಜಾರಿಗೆ ತರುವುದೇ ಆಗಿದ್ದರೆ, ಕರಾವಳಿಯಲ್ಲಿ ಖಾಸಗಿ ಬಸ್ಸುಗಳಿಗೂ ಅನ್ವಯಿಸಬೇಕು ಎಂದು ಮಹಿಳಾ ಪ್ರಯಾಣಿಕರು ಅಹವಾಲು ಇಟ್ಟಿದ್ದಾರೆ.
ಈಗಾಗಲೇ ಗ್ಯಾರಂಟಿ ಜಾರಿಗಾಗಿ ತೀವ್ರ ಇಕ್ಕಟ್ಟಿನಲ್ಲಿ ಬಿದ್ದಿರುವ ಕಾಂಗ್ರೆಸ್ ಸರಕಾರ, ಚುನಾವಣೆ ಹೊತ್ತಲ್ಲಿ ಜನರಿಗೆ ನೀಡಿದ್ದ ಭರವಸೆ ಒಮ್ಮೆಗಾದರೂ ಈಡೇರಿಸಬೇಕು ಎಂಬ ನೆಲೆಯಲ್ಲಿ ಹೊಯ್ದಾಟ ನಡೆಸುತ್ತಿದೆ. ಇದರ ನಡುವೆ, ಖಾಸಗಿ ಬಸ್ಸುಗಳ ಮೇಲೂ ಉಚಿತ ಪ್ರಯಾಣದ ಅವಕಾಶ ನೀಡುತ್ತಾರೆಯೇ ಎಂಬುದು ಉತ್ತರ ಸಿಗದ ಪ್ರಶ್ನೆಯಷ್ಟೇ.
Does Congress gaurnatee of Free bus pass applicable to Mangalore and Udupi? As local buses here are private and not government. Speaking to the media persons Udupi Private bus association president Kuhiladi Suresh Nayak said that the association is all ready to give free pass if the government is ready to pay them.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 07:31 pm
HK News Desk
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm