ಮಂಗಳೂರು ಮೂಡಾ ಕಚೇರಿಯಲ್ಲಿ ಉದ್ಯೋಗಿ ಆತ್ಮಹತ್ಯೆ ; ನೇಣಿಗೆ ಶರಣಾದ ದ್ವಿತೀಯ ದರ್ಜೆ ಸಹಾಯಕ

02-06-23 04:35 pm       Mangaluru Correspondent   ಕರಾವಳಿ

ನಗರದ ಉರ್ವಾದಲ್ಲಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕಚೇರಿಯಲ್ಲೇ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.

ಮಂಗಳೂರು, ಜೂನ್ 2: ನಗರದ ಉರ್ವಾದಲ್ಲಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕಚೇರಿಯಲ್ಲೇ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.

ಅಳಪೆ ನಿವಾಸಿ ಕೀರ್ತನ್‌ (30) ಮೃತ ವ್ಯಕ್ತಿ. ಇವರು ಮೂಡಾ ಕಚೇರಿಯಲ್ಲಿ ನೌಕರನಾಗಿದ್ದು ಇತ್ತೀಚೆಗೆ ದ್ವಿತೀಯ ದರ್ಜೆ ಸಹಾಯಕರಾಗಿ ಭಡ್ತಿ ಪಡೆದಿದ್ದರು. ಇಂದು ಬೆಳಗ್ಗೆ ಕಚೇರಿಗೆ ಬಂದಿದ್ದ ಕೀರ್ತನ್ ಸ್ಟೋರ್ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಆನಂತರ, ಯಾರೋ ಸಿಬ್ಬಂದಿ ಬಾಗಿಲು ಬಡಿದ ಕಾರಣ ಹೊರ ಬಂದಿದ್ದರು. ಮತ್ತೆ ಸ್ವಲ್ಪ ಹೊತ್ತಲ್ಲೆ ಕೀರ್ತನ್ ನಾಪತ್ತೆಯಾಗಿದ್ದರು.

ಕೀರ್ತನ್ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಮಧ್ಯಾಹ್ನ 12.30ರ ವೇಳೆ ಮೂಡಾ ಕಚೇರಿಯಲ್ಲೇ ಇರುವಿಕೆ ಕಂಡು ಬಂದಿತ್ತು. ಮೂಡಾದ ಸ್ಟೋರ್ ರೂಮ್ ಪರಿಶೀಲಿಸಿದಾಗ ಕೀರ್ತನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೀರ್ತನ್ ಅವರು ಈ ಹಿಂದೆ ಡೆಂಗ್ಯು ಜ್ವರದಿಂದ ಬಳಲಿ ಕಾಲಿನ ಬಲ ಕಳಕೊಂಡಿದ್ದು ನಡೆದಾಡಲು ಕಷ್ಟ ಪಡುತ್ತಿದ್ದರಂತೆ. ಮೃತ ಕೀರ್ತನ್ ಪತ್ನಿ ಉಪನ್ಯಾಸಕಿಯಾಗಿದ್ದು, ಏಕೈಕ ಪುತ್ರಿ ಎಲ್ ಕೆಜಿ ಓದುತ್ತಿದ್ದಾಳೆ

Mangalore Muda office staff commit suicide inside the storeroom. The deceased has been identified as Keerthan (30). Some serious health issues have occurred in the suicide suspect's family. Keerthan was missing for a while, and when police traced his location, it was in the shwing storeroom of Muda.