ಬ್ರೇಕಿಂಗ್ ನ್ಯೂಸ್
03-06-23 10:33 pm Mangalore Correspondent ಕರಾವಳಿ
ಮಂಗಳೂರು, ಜೂನ್ 3 : ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬಾಬಾ ರಾಮದೇವ್ ಮಾಲಕತ್ವದ ಪತಂಜಲಿ ಬ್ರಾಂಡಿನ ರುಚಿಗೋಲ್ಡ್ ತೈಲ ಇನ್ನಿತರ ಆಹಾರ ಉತ್ಪಾದಕ ಘಟಕದಿಂದ ಫಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯ ನೇರವಾಗಿ ಹರಿಸಲಾಗುತ್ತಿದ್ದು ಈ ಬಗ್ಗೆ ಜನಾಕ್ರೋಶ ಉಂಟಾಗಿರುವುದರಿಂದ ಕೈಗಾರಿಕಾ ಘಟಕವನ್ನು ಮುಚ್ಚುವಂತೆ ಮಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೈಗಾರಿಕಾ ಘಟಕದಿಂದ ಅಕ್ರಮ ಕೊಳವೆಗಳನ್ನು ಹೊರಗೆ ಬಿಟ್ಟು ನದಿಗೆ ಸಾಗುವ ತೋಡುಗಳಿಗೆ ತ್ಯಾಜ್ಯಗಳನ್ನು ಹರಿಯ ಬಿಡಲಾಗುತ್ತಿದೆ. ಜನರ ಆಕ್ರೋಶ ಕೇಳಿಬಂದಿದ್ದರಿಂದ ರಾಶಿ ಬಿದ್ದ ತ್ಯಾಜ್ಯವನ್ನು ಕಾರ್ಮಿಕರ ಮೂಲಕ ಕಂಪನಿಯವರೇ ತೆರವು ಮಾಡುವ ಯತ್ನ ಮಾಡಿದ್ದಾರೆ. ಸ್ಥಳದಿಂದ ತೆರವುಗೊಳಿಸಿ ಸಮುದ್ರಕ್ಕೆ ಸುರಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡ ಭೇಟಿ ನೀಡಿದ್ದು ಹೋರಾಟದ ಎಚ್ಚರಿಕೆ ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಮಾತನಾಡಿ, ಕಂಪೆನಿಗೆ ತಕ್ಷಣದಿಂದಲೇ ಬೀಗ ಜಡಿಯಲು ಆಗ್ರಹಿಸಲಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಘಟಕವು ಪತಂಜಲಿ ಕೈಗಾರಿಕಾ ಘಟಕ ಮುಚ್ಚುವಂತೆ ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಿ ದಾಖಲೆ ಸಹಿತ ಪತ್ರ ಬರೆದಿರುವುದಾಗಿ ಅಧಿಕಾರಿಗಳು ಹೋರಾಟ ಸಮಿತಿಯ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಕಂಪೆನಿಯ ಮುಂದೆ ಸಾಂಕೇತಿಕ ಪ್ರತಿಭಟನೆ
ಗಂಭೀರವಾದ ಕ್ರಿಮಿನಲ್ ಅಪರಾಧ ಎಸಗಿರುವ, ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಪತಂಜಲಿ ಘಟಕವನ್ನು ತಕ್ಷಣವೆ ಮುಚ್ಚಿ ಬೀಗ ಜಡಿಯಲು ಹೋರಾಟ ಸಮಿತಿ ಸದಸ್ಯರು ಆಗ್ರಹಿಸಿದರು. ನಿರ್ಣಾಯಕ ಕ್ರಮ ಜರುಗದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಯಿತು.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫಾರೂಕ್ ಜೋಕಟ್ಟೆ, ಮಾಜಿ ಅಧ್ಯಕ್ಷ ಕೆವಿನ್, ಹೋರಾಟ ಸಮಿತಿ ಪ್ರಮುಖರಾದ ಅಬೂಬಕ್ಕರ್ ಬಾವಾ, ಶ್ರೀನಾಥ್ ಕುಲಾಲ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ನಿತಿನ್ ಬಂಗೇರ, ಮನೋಜ್ ಉರ್ವಸ್ಟೋರ್, ಇಕ್ಬಾಲ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ಚಂದ್ರಶೇಖರ್ ಜೋಕಟ್ಟೆ, ಹನೀಫ್ ಜೋಕಟ್ಟೆ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಶು ಇದ್ದಿನಬ್ಬ, ಹನೀಫ್ ಇಡ್ಯಾ, ವಿಜಯ್ ಅರಾನ್ಹ ಮತ್ತಿತರರು ಹಾಜರಿದ್ದರು.
Mangalore Patanjali ruchi gold polluts Palguni river water will chemicals, localities demand shot down of factory.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm