ಬ್ರೇಕಿಂಗ್ ನ್ಯೂಸ್
19-06-23 10:16 pm Mangalore Correspondent ಕರಾವಳಿ
ಮಂಗಳೂರು, ಜೂನ್ 19: ಮಳೆಗಾಲದಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸಕೂಡದು. ರಸ್ತೆ ಅಗೆಯುವುದಿದ್ದರೆ ಅಂತಹ ಕಾಮಗಾರಿಯನ್ನು ಮಳೆಗಾಲ ಕಳೆಯೋ ವರೆಗೆ ಮುಂದೂಡಿಕೆ ಮಾಡುವಂತೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಆದರೆ ಮಂಗಳೂರು ನಗರ ಭಾಗದಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆಲ್ಲ ಬೆಲೆಯೇ ಇಲ್ಲದಂತೆ ಪಾಲಿಕೆಯವರು ವರ್ತಿಸುತ್ತಿದ್ದಾರೆ. ಮಳೆಗಾಲ ಅನ್ನುವುದನ್ನೂ ಮರೆತು ಕಾಂಕ್ರೀಟ್ ರಸ್ತೆಗಳನ್ನು ಅಗೆದು ಹಾಕಲಾಗುತ್ತಿದ್ದು, ಜನರು ಎದ್ದು ಬಿದ್ದು ಹೋಗಬೇಕಾದ ಸ್ಥಿತಿ. ಸೋಮವಾರ ಸಂಜೆ ಅಗೆದಿಟ್ಟ ಹೊಂಡಕ್ಕೆ ಕದ್ರಿ ಕಂಬಳದಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಬಿದ್ದು ಅವಾಂತರ ಸೃಷ್ಟಿಯಾಗಿತ್ತು.
ಕದ್ರಿ ಕಂಬ್ಳ ರಸ್ತೆಯಲ್ಲಿ ಕಳೆದೊಂದು ವಾರದಿಂದ ಕಾಂಕ್ರೀಟ್ ರಸ್ತೆಯನ್ನು ಅಗೆದು ಚರಂಡಿಯ ಹಳೆ ಪೈಪ್ ತೆಗೆದು ಹೊಸತಾಗಿ ಪೈಪ್ ಅಳವಡಿಕೆ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಅಲ್ಲಿಯೇ ಇರುವ ದೊಡ್ಡ ಅಪಾರ್ಟ್ಮೆಂಟ್ ಮತ್ತು ಅಲ್ಲಿನ ಬಿಲ್ಡರ್ ಪರವಾಗಿ ತರಾತುರಿಯಲ್ಲಿ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ. ಆದರೆ ರಸ್ತೆಯನ್ನು ಅಗೆದು ಮಣ್ಣು ತುಂಬಿಸಿ ಬಿಟ್ಟು ಹೋಗಿದ್ದ ಜಾಗದಲ್ಲಿ ಸಿಮೆಂಟ್ ಮಿಕ್ಸರ್ ಲಾರಿ ಬಂದು ಅದರ ಚಕ್ರ ಹೊಂಡದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಒಂದು ಬದಿಯ ಚಕ್ರ ಹೊಂಡದಲ್ಲಿ ಎರಡಡಿ ಆಳಕ್ಕೆ ಹೂತು ಹೋಗಿದ್ದರೆ, ಲಾರಿ ಮುಂದಕ್ಕೆ ಹೋಗಲಾಗದೆ, ಕಾಂಕ್ರೀಟ್ ಮಿಕ್ಸರ್ ಸುತ್ತುವುದನ್ನು ನಿಲ್ಲಿಸುವುದಕ್ಕೂ ಆಗದೆ (ನಿಲ್ಲಿಸಿದರೆ ಕಾಂಕ್ರೀಟ್ ಗಟ್ಟಿಯಾಗುತ್ತದೆ) ಅದರ ಸಿಬಂದಿ ಒದ್ದಾಡುತ್ತಿದ್ದರು. ಬಳಿಕ ಕ್ರೇನ್ ತರಿಸಿ ಲಾರಿಯನ್ನು ರಸ್ತೆ ಮಧ್ಯದ ಹೊಂಡದಿಂದ ಮೇಲಕ್ಕೆತ್ತುವ ಪ್ರಯತ್ನ ಮಾಡುತ್ತಿದ್ದರು.
ಅಂದಹಾಗೆ, ಕದ್ರಿ ಕಂಬ್ಳ ಭಾಗದಲ್ಲಿ ಒಂದು ವರ್ಷದಲ್ಲಿ ಮೂರನೇ ಬಾರಿ ಈಗ ಅಗೆಯುತ್ತಿದ್ದಾರೆ. ಪ್ರತಿ ಬಾರಿ ಅಗೆದಾಗಲೂ ಚರಂಡಿ ಕಾಮಗಾರಿ ಅನ್ನುವ ಸಬೂಬು ನೀಡುತ್ತಾರೆ. ಯಾವ ಚರಂಡಿಯೋ, ಯಾರ ಲಾಭಕ್ಕೆ ಕಾಂಕ್ರೀಟ್ ರಸ್ತೆ ಒಡೆದು ಬಿಲ್ ಮಾಡುತ್ತಾರೋ ಗೊತ್ತಿಲ್ಲ. ಹೇಗೂ ಕಾಂಕ್ರೀಟ್ ರಸ್ತೆಯನ್ನು ಅಗೆಯೋದು, ಅಲ್ಲಿನ ಎಲ್ಲ ಚರಂಡಿ ಪೈಪ್, ನೀರಿನ ಪೈಪ್, ಇನ್ನಿತರ ಕೇಬಲ್ ಪೈಪ್ ಗಳನ್ನೆಲ್ಲ ಒಂದೇ ಬಾರಿಗೆ ಸುರಿಯಬಹುದು. ಪ್ರತಿ ಬಾರಿ ಬಿಲ್ ಮಾಡಿ, ಸ್ಥಳೀಯ ಕಾರ್ಪೊರೇಟರಿನಿಂದ ಹಿಡಿದು ಮೇಯರ್, ಪಾಲಿಕೆ ಅಧಿಕಾರಿಗಳಿಗೆಲ್ಲ ಪಾಲು ಹೋಗಬೇಕಲ್ಲ. ಅದಕ್ಕಾಗಿ ವರ್ಷದಲ್ಲಿ ಮೂರು ಬಾರಿ ಅಗೆಯುತ್ತಾರಂತೆ ಎನ್ನುತ್ತಾರೆ, ಸ್ಥಳೀಯರು.
ಸ್ಮಾರ್ಟ್ ಸಿಟಿ ಮಂಗಳೂರು ನಗರದ ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದಿಟ್ಟ ಹೊಂಡಗಳೇ ಕಾಣಿಸುತ್ತವೆ. ಬಿಜೈ ರಸ್ತೆಯ ಉದ್ದಕ್ಕೂ ತಿಂಗಳು ಕಳೆದರೂ ಅಗೆಯುವುದೇ ಕೆಲಸ ಆಗಿದೆ. ಅತ್ತ ಕಂಕನಾಡಿ, ವೆಲೆನ್ಸಿಯಾ ಹೋದರೂ, ಅಲ್ಲಲ್ಲಿ ಹೊಂಡ ತೆಗೆದಿಟ್ಟು ಪೈಪನ್ನು ತೂರಿಸುವ ಪ್ರಯತ್ನ ಆಗ್ತಿದೆ. ಬೆಳಗ್ಗೆ ಒಮ್ಮೆ, ಸಂಜೆ ಹೊತ್ತಿಗೊಮ್ಮೆ ಕೆಲಸ ಮಾಡುವುದು, ಕಾರ್ಮಿಕರು ದಿನ ಭರ್ತಿ ಮಾಡಿ ಹೋಗುತ್ತಾರೆ. ಸಾರ್ವಜನಿಕರು ಹೊಂಡ ತಪ್ಪಿಸಿಕೊಂಡು ವಾಹನ ಚಲಾಯಿಸಬೇಕಷ್ಟೆ. ವರ್ಷಪೂರ್ತಿ ಅಗೆದರೂ, ಈ ಅಗೆತಕ್ಕೆ, ರಸ್ತೆ ಗುಂಡಿಗಳಿಗೆ, ಹೊಂಡಕ್ಕೆ ಬಿದ್ದವರಿಗೆ ಲೆಕ್ಕ ಇಲ್ಲ. ತಿಂಗಳ ಕಾಲ ಹೊಂಡ ತೆಗೆದಿಟ್ಟು ಅದಕ್ಕೆ ಇನ್ನೊಬ್ಬ ಬಂದು ಸೆಗಣಿ ಹಾಕಿದಂತೆ ಕಾಂಕ್ರೀಟ್ ಸುರಿದು ಹೋಗುವುದು ಖಯಾಲಿ ಆಗಿದೆ.
ದಿನ ದಿನವೂ ಹೊಸ ಹೊಸ ಜಾಗದಲ್ಲಿ ಅಗೆಯೋದು, ಒಮ್ಮೆ ನೀರಿನ ಪೈಪ್ಲೈನ್, ಮತ್ತೊಮ್ಮೆ ಕೇಬಲ್ ಲೈನ್ ಹಾಕೋದು, ಇನ್ನೊಮ್ಮೆ ಗ್ಯಾಸ್ ಲೈನ್ ಹಾಕೋದು ಇತ್ಯಾದಿ ನಡೆಯುತ್ತಲೇ ಇದೆ. ಮಂಗಳೂರಿನ ಜನರು ಇದಕ್ಕೆಲ್ಲ ಒಗ್ಗಿಕೊಂಡು ಯಾರಿಗೋ ಶಾಪ ಹಾಕ್ಕೊಂಡು ಹೊಂಡಕ್ಕೆ ಬಿದ್ದರೂ, ಎದ್ದು ಮೈಯನ್ನು ಒರಸಿಕೊಂಡು ಪರಚಿಕೊಂಡು ಸಾಗುತ್ತಾರೆ. ಮಂಗಳೂರಿನ ಜನರು ಸಹನಾಮಯಿಗಳು ತಾನೇ..
Mangalore Cement truck falls into pothole while trying to fill other hole, public face headache in the name of Smart City project as everywhere there is constant digging of roads.
20-05-25 10:49 pm
Bangalore Correspondent
Speaker UT Khader: ವಿಧಾನಸಭೆ ಗ್ರೂಪ್ ಸಿ, ಡಿ ಹುದ...
20-05-25 08:22 pm
K S Eshwarappa: ಸೇನಾ ಕಾರ್ಯಾಚರಣೆ ಪ್ರಶ್ನಿಸುವ ದೇ...
20-05-25 07:18 pm
Bangalore Rain, Death: ಒಂದೇ ಮಳೆಗೆ ತತ್ತರಿಸಿದ ಬ...
20-05-25 03:30 pm
Shashi Kumar IPS, Corruption, Hubballi, polic...
19-05-25 04:00 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 11:12 pm
Mangalore Correspondent
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm