ಬ್ರೇಕಿಂಗ್ ನ್ಯೂಸ್
20-06-23 07:51 pm Mangalore Correspondent ಕರಾವಳಿ
ಉಳ್ಳಾಲ, ಜೂನ್ 20: ಪ್ರವಾಸಿ ತಾಣವಾದ ಉಳ್ಳಾಲ ಬೀಚ್ ರಸ್ತೆಯಲ್ಲೇ ಕಳೆದ ಆರೇಳು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ನಡೆಸಲಾಗುತ್ತಿದೆ. ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ಶೇಖರಣೆಯಾಗಿ ನಾರುತ್ತಿದ್ದು ಸಿಟ್ಟಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿ ತ್ಯಾಜ್ಯವನ್ನ ನಗರಸಭೆ ಕಚೇರಿ ಮುಂದೆ ಸುರಿಯಲು ಮುಂದಾಗಿದ್ದು, ಸ್ಥಳಕ್ಕೆ ಬಂದ ನಗರ ಪೌರಾಯುಕ್ತೆ ವಾಣಿ ಆಳ್ವ ಅವರು ಅರ್ಧ ಗಂಟೆಯಲ್ಲೇ ಮೂಗು ಮುಚ್ಚಿ ಓಡಿದ್ದಾರೆ.
ಉಳ್ಳಾಲ ಬೀಚ್ ರಸ್ತೆಯಲ್ಲಿ ಕಳೆದ ಆರೇಳು ವರುಷಗಳಿಂದಲೂ ನಗರ ವ್ಯಾಪ್ತಿಯ ತ್ಯಾಜ್ಯವನ್ನ ರಾಶಿ ಹಾಕಿ ವಿಲೇವಾರಿ ನಡೆಸಿ ಮಂಗಳೂರಿನ ವಾಮಂಜೂರು ಡಂಪಿಂಗ್ ಯಾರ್ಡ್ಗೆ ಕಳಿಸಲಾಗುತ್ತಿತ್ತು. ಆದರೆ ಉಳ್ಳಾಲ ನಗರಸಭೆ, ಮಂಗಳೂರು ಮಹಾನಗರ ಪಾಲಿಕೆಗೆ ಪಾವತಿಸಬೇಕಾದ ಸುಮಾರು 90 ಲಕ್ಷ ರೂಪಾಯಿ ಬಿಲ್ ಬಾಕಿ ಇರಿಸಿದ್ದು ಇದರಿಂದಾಗಿ ಆರು ತಿಂಗಳಿಂದ ಉಳ್ಳಾಲ ಬೀಚ್ ರಸ್ತೆ ಕಸದ ಕೊಂಪೆಯಾಗಿ ನಾರುತ್ತಿದೆ. ಇಂದು ಬೆಳಗ್ಗೆ ಸ್ಥಳದಲ್ಲಿ ಸ್ಥಳೀಯರು, ವಿವಿಧ ಸಂಘಟನೆಗಳ ಸದಸ್ಯರು ಜಮಾಯಿಸಿ ಪ್ರತಿಭಟನಾ ಅಂಗವಾಗಿ ಶೇಖರಣೆಗೊಂಡಿದ್ದ ತ್ಯಾಜ್ಯವನ್ನ ರಸ್ತೆಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜೆಸಿಬಿ ಮುಖಾಂತರ ತ್ಯಾಜ್ಯವನ್ನ ನಗರಸಭೆ ಕಚೇರಿಯೆದುರು ಸುರಿಯಲು ಮುಂದಾಗಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನ ತಡೆದಿದ್ದಾರೆ.
ಸ್ಥಳಕ್ಕೆ ಎಂಟ್ರಿ ನೀಡಿದ ಉಳ್ಳಾಲ ನಗರಸಭಾ ಮಾಜಿ ಮತ್ತು ಪ್ರಭಾರಿ ಪೌರಾಯುಕ್ತೆ ವಾಣಿ ಆಳ್ವ ಅವರು ಪ್ರತಿಭಟನಾಕಾರರಲ್ಲಿ ನಾನೀಗ ಪ್ರಭಾರಿಯಾಗಿ ಬಂದು ನಾಲ್ಕೈದು ದಿನವಾಗಿದೆ. ತ್ಯಾಜ್ಯ ವಿಲೇವಾರಿಯ ಬಗ್ಗೆ ನಗರ ಸದಸ್ಯರು, ಅಧಿಕಾರಿಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ. ಈ ವೇಳೆ ಪ್ರತಿಭಟನಾಕಾರರು, ಹಿಂದೆ ನೀವು ಇಲ್ಲಿ ಅಧಿಕಾರದಲ್ಲಿದ್ದಾಗಲೇ ಇಲ್ಲಿ ಇದೇ ಸ್ಥಿತಿ ಇತ್ತೆಂದು ಹೇಳಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿ ಸೆಲ್ವಿ ಎಂಬವರು ತ್ಯಾಜ್ಯ ಶೇಖರಣೆಯಿಂದ ಕಲುಷಿತ ಗೊಂಡಿರುವ ತಮ್ಮ ಬಾವಿಯ ಮಲಿನ ನೀರನ್ನ ವಾಣಿ ಆಳ್ವ ಅವರಿಗೆ ಕುಡಿಯಲು ಕೊಟ್ಟಿದ್ದಾರೆ. ಕಲುಷಿತ ನೀರು ಮತ್ತು ತ್ಯಾಜ್ಯದ ಕೊಂಪೆಯ ದರ್ನಾತದಿಂದ ಮೂಗು ಮುಚ್ಕೊಂಡ ನಗರ ಪೌರಾಯುಕ್ತೆ ವಾಣಿ ಉಳ್ಳಾಲ ಇನ್ಸ್ ಪೆಕ್ಟರ್ ಅವರಲ್ಲಿ ಇಂಗ್ಲೀಷು ಮಾತನಾಡಿ ಅರ್ಧ ಗಂಟೆಯಲ್ಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಕಳೆದ ಹಲವಾರು ವರ್ಷಗಳಿಂದ ಉಳ್ಳಾಲದಾದ್ಯಂತ ಕಸ ವಿಲೇವಾರಿ ಸಮಸ್ಯೆ ಕಾಡುತ್ತಿದೆ. ಸ್ಥಳೀಯ ಶಾಸಕ ಯು.ಟಿ ಖಾದರ್ ಅವರು ರಾಜ್ಯದಲ್ಲಿ ವಿವಿಧ ಖಾತೆಗಳನ್ನ ಅಲಂಕರಿಸಿದರೂ ಕ್ಷೇತ್ರದ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಕೊಡಲು ಅವರಿಂದ ಸಾಧ್ಯವಾಗಿಲ್ಲ. ನಾನು ಜಿಲ್ಲಾಧಿಕಾರಿಯವರಲ್ಲಿ ವಿಷಯ ಪ್ರಸ್ತಾಪಿಸಿದ್ದು ನಾಳೆ ಅವರು ಸ್ಥಳಕ್ಕೆ ಭೇಟಿ ಕೊಟ್ಟು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಬೀಚ್ ರಸ್ತೆಯ ತ್ಯಾಜ್ಯದ ಕೊಂಪೆಗೆ ಪರಿಹಾರ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.
The residents of Ullal, who have been distressed by the presence of piles of trash near Ullal beach for several years, causing unbearable stench, contaminating the well water in the vicinity, and creating unhygienic living conditions for tourists and locals, have initiated protests by placing the trash on Ullal
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm