ಬ್ರೇಕಿಂಗ್ ನ್ಯೂಸ್
21-06-23 05:13 pm Mangalore Correspondent ಕರಾವಳಿ
ಉಳ್ಳಾಲ, ಜೂ.21: ಕಳೆದ ನಾಲ್ಕೈದು ತಿಂಗಳಿಂದ ನಗರ ವ್ಯಾಪ್ತಿಯ ತ್ಯಾಜ್ಯವೆಲ್ಲವೂ ರಾಶಿ ಬಿದ್ದು ಕಸದ ಕೊಂಪೆಯಾಗಿದ್ದ ಉಳ್ಳಾಲ ಬೀಚ್ ರಸ್ತೆಯಲ್ಲಿ ನಿನ್ನೆ ಸ್ಥಳೀಯರು ಆಕ್ರೋಶಿತರಾಗಿ ತ್ಯಾಜ್ಯವನ್ನ ನಗರಸಭೆ ಕಚೇರಿ ಮುಂದೆ ಸುರಿಯಲು ಮುಂದಾದ ಹಿನ್ನಲೆಯಲ್ಲಿ ಎಚ್ಚೆತ್ತ ದಪ್ಪ ಚರ್ಮದ ನಗರಾಡಳಿತವು ಇಂದು ಸೂರ್ಯೋದಯದಿಂದಲೇ ಬೀಚ್ ರಸ್ತೆಯ ತ್ಯಾಜ್ಯವನ್ನು ಮಂಗಳೂರಿನ ಡಂಪಿಗ್ ಯಾರ್ಡ್ ಗೆ ಸಾಗಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ.
ಕಳೆದ ಐದಾರು ವರ್ಷಗಳಿಂದ ಉಳ್ಳಾಲ ನಗರಸಭೆ ನಗರವಾಸಿಗಳಿಂದ ಸಂಗ್ರಹಗೊಂಡ ತ್ಯಾಜ್ಯವನ್ನ ಬೀಚ್ ರಸ್ತೆ ಬದಿಯಲ್ಲೇ ರಾಶಿ ಹಾಕಿ ವಿಂಗಡಿಸಿ ವಿಲೇವಾರಿ ನಡೆಸುತ್ತಿದೆ. ಇದರಿಂದ ಬೀಚ್ಗೆ ಬರುವ ಪ್ರವಾಸಿಗರು ಮೂಗು ಮುಚ್ಕೊಂಡು ವಿಹರಿಸೋ ಪರಿಸ್ಥಿತಿ ಬಂದಿದೆ. ಕಳೆದ ಐದಾರು ತಿಂಗಳಿಂದ ಇಲ್ಲಿ ರಾಶಿಗಟ್ಟಲೆ ತ್ಯಾಜ್ಯ ಸಂಗ್ರಹಗೊಂಡಿದ್ದು ಅದನ್ನ ವಿಂಗಡಿಸಿ ವಿಲೇವಾರಿ ನಡೆಸೋ ಕಾರ್ಯ ನಗರಸಭೆ ಆಡಳಿತ ಮಾಡಿಲ್ಲ. ತ್ಯಾಜ್ಯ ಶೇಖರಣೆಯಿಂದ ಸ್ಥಳೀಯರ ಬಾವಿಯ ನೀರು ಕಲುಷಿತಗೊಂಡಿದೆ.



ಆಕ್ರೋಶಿತ ಸ್ಥಳೀಯರು ಮಂಗಳವಾರ ತ್ಯಾಜ್ಯವನ್ನ ರಸ್ತೆಗೆಸೆದು ಪ್ರತಿಭಟಿಸಿದ್ದಲ್ಲದೆ, ನಗರಸಭೆ ಕಚೇರಿಗೂ ತ್ಯಾಜ್ಯ ಸುರಿಯಲು ಮುಂದಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆ ಪ್ರಭಾರಿ ಪೌರಾಯುಕ್ತೆ ವಾಣಿ ಆಳ್ವಗೆ ಪ್ರತಿಭಟನಾ ನಿರತ ಸೆಲ್ವಿ ಎಂಬ ಮಹಿಳೆ ಕಲುಷಿತಗೊಂಡಿರುವ ತನ್ನ ಬಾವಿಯ ನೀರನ್ನ ಕುಡಿಯುವಂತೆ ಹೇಳಿದ್ದರು. ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ವಾಣಿ ಆಳ್ವ ಸ್ಥಳದಿಂದ ತೆರಳಿದ್ದರು.



ಘಟನೆ ಕುರಿತಂತೆ ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಜಿಲ್ಲಾಧಿಕಾರಿಗೆ ದೂರಿತ್ತಿದ್ದು ಸಮಸ್ಯೆ ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಉಳ್ಳಾಲದ ಮಾನ ಹರಾಜಾಗುತ್ತಿದ್ದರೂ ಸುಮ್ಮನಿದ್ದ ನಗರಸಭೆಯ ಅಧಿಕಾರಿಗಳು ಇಂದು ಬೆಳಗ್ಗಿನಿಂದಲೇ ಹಿಟಾಚಿ ಯಂತ್ರದಿಂದ ತ್ಯಾಜ್ಯ ತೆರವು ಮಾಡಲು ಆರಂಭಿಸಿದ್ದಾರೆ.
Mangalore Garbage dump in Ullal beach road, cleaning process begins after protest from residents.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm