ಬ್ರೇಕಿಂಗ್ ನ್ಯೂಸ್
21-06-23 08:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 21: ರಸ್ತೆಗೆ ಅಡ್ಡ ಬಂದಿದ್ದ ಮಹಿಳೆಯನ್ನು ತನ್ನ ಚಾಕಚಕ್ಯತೆಯಿಂದ ಬಸ್ಸನ್ನು ಬದಿಗೆ ಸರಿಸಿ ನಿಲ್ಲಿಸಿದ ಚಾಲಕನ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡಿಪು ಭಾಗದಿಂದ ತೌಡುಗೋಳಿ ಕ್ರಾಸ್ ಮೂಲಕ ಮಂಗಳೂರು ತೆರಳುತ್ತಿದ್ದ ಗೋಪಾಲಕೃಷ್ಣ ಹೆಸರಿನ ಖಾಸಗಿ ಬಸ್ ಜೂನ್ 20ರಂದು ಮಧ್ಯಾಹ್ನ ಬರುತ್ತಿದ್ದಾಗ ಮಹಿಳೆ ಅಡ್ಡ ಬಂದ ಘಟನೆ ನಡೆದಿತ್ತು. ತೌಡುಗೋಳಿ ಕ್ರಾಸ್ ನಲ್ಲಿ ಮಹಿಳೆ ಅಡ್ಡ ಬಂದಿದ್ದು ಕೂಡಲೇ ಗಮನಿಸಿದ ಚಾಲಕ ನಾಗರಾಜ್ ಬಸ್ಸನ್ನು ಬದಿಗೆ ಸರಿಸಿ ನಿಲ್ಲಿಸಿದ್ದರು. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಗರಾಜ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.


ವಿಡಿಯೋದಲ್ಲಿ ಬಸ್ ವೇಗವಾಗಿ ಬರುತ್ತಿರುವುದು ದಾಖಲಾಗಿದ್ದು, ಅದನ್ನು ಅನುಸರಿಸಿ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೆಂದು ಹೇಳಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಲ್ಲದೆ, ಆ ಬಸ್ಸನ್ನು ಸೀಜ್ ಮಾಡಿ ಠಾಣೆಗೆ ತಂದು ಇರಿಸಿದ್ದಾರೆ. ಚಾಲಕನ ವಿರುದ್ಧ ಸೆಕ್ಷನ್ 279, 336 ಐಪಿಸಿ ಜೊತೆಗೆ ಮೋಟಾರು ವಾಹನ ಕಾಯ್ದೆ 211-2 ಪ್ರಕಾರ ಕೇಸು ದಾಖಲಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ನಿರ್ಲಕ್ಷ್ಯದಿಂದ ರಸ್ತೆ ದಾಟುತ್ತಿದ್ದ ಮಹಿಳೆಯ ಪ್ರಾಣ ಉಳಿದಿತ್ತು.
ಎದುರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಅನುಸರಿಸಿ ಅಡ್ಡಲಾಗಿ ವಾಹನ ಬರುವುದನ್ನೂ ಲೆಕ್ಕಿಸದೆ ಮುಸ್ಲಿಂ ಮಹಿಳೆಯೊಬ್ಬರು ರಸ್ತೆ ದಾಟಲು ಮುಂದಾಗಿದ್ದರು. ಇದೇ ವೇಳೆ ಬಸ್ ಬಂದಿದ್ದು, ಹಠಾತ್ ಬ್ರೇಕ್ ಹಾಕಿ ಬದಿಗೆ ಸರಿಸಿದ್ದರಿಂದ ಮಹಿಳೆ ಕೂದಲೆಳೆಯಲ್ಲಿ ಬಚಾವ್ ಆಗಿದ್ದರು. ಇದೀಗ ಚಾಲಕನ ವಿರುದ್ಧವೇ ಪೊಲೀಸರು ಕೇಸು ದಾಖಲಿಸಿ ಖಾಸಗಿ ಬಸ್ಗಳ ಧಾವಂತಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ. ಒಳರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ ದುಡುಕುತನ ಮತ್ತು ವೇಗದ ಚಾಲನೆ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.
Police file case against bus that saved womans life while crossing road at Naringana in Mangalore for rash driving.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm