ಆಗಸ್ಟ್ 15ರ ಒಳಗೆ ಮಂಗಳೂರನ್ನು ಡ್ರಗ್ಸ್ ಮುಕ್ತ ನಗರ ಮಾಡುತ್ತೇವೆ ; ಡಿಸಿಪಿ ದಿನೇಶ್ ಕುಮಾರ್

24-06-23 10:52 pm       Mangalore Correspondent   ಕರಾವಳಿ

ಮಂಗಳೂರು ನಗರವನ್ನು ಆಗಸ್ಟ್ 15ರ ಒಳಗೆ ಡ್ರಗ್ಸ್ ಮತ್ತು ನಿಷೇಧಿತ ಮಾದಕ ದ್ರವ್ಯ ಮುಕ್ತ ನಗರವನ್ನಾಗಿಸಲು ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಮಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ.

ಮಂಗಳೂರು, ಜೂನ್ 24: ಮಂಗಳೂರು ನಗರವನ್ನು ಆಗಸ್ಟ್ 15ರ ಒಳಗೆ ಡ್ರಗ್ಸ್ ಮತ್ತು ನಿಷೇಧಿತ ಮಾದಕ ದ್ರವ್ಯ ಮುಕ್ತ ನಗರವನ್ನಾಗಿಸಲು ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಮಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಅವರು ಮಾತನಾಡಿದರು. ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರ ನೆರವು ಬಯಸುತ್ತದೆ. ಡ್ರಗ್ಸ್ ಪೆಡ್ಲಿಂಗ್ ಮಾಡುವವರ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕಿದ್ದು, ಅಂಥವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಡ್ರಗ್ಸ್ ವ್ಯಸನಿಗಳಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸುವುದು, ಅಗತ್ಯ ಬಿದ್ದರೆ ಅವರನ್ನು ಡ್ರಗ್ಸ್ ಮುಕ್ತಗೊಳಿಸಲು ನಿಗಾ ಕೇಂದ್ರಕ್ಕೆ ದಾಖಲು ಮಾಡುತ್ತೇವೆ ಎಂದರು.

ನಾವು ಶಾಲೆ, ಕಾಲೇಜುಗಳಿಗೆ ತೆರಳಿ ಡ್ರಗ್ಸ್ ಕುರಿತ ಅಪಾಯದ ಬಗ್ಗೆ ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ತಿಳಿಹೇಳುತ್ತೇವೆ. ನಾರ್ಕೋಟಿಕ್ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲೆಂದೇ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ತಂಡವನ್ನು ರೆಡಿ ಮಾಡಿದ್ದೇವೆ ಎಂದವರು ತಿಳಿಸಿದರು. ಇದಲ್ಲದೆ, ನಗರದಲ್ಲಿ ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಬಸ್ ಓಡಿಸುವುದು, ಕರ್ಕಶ ಹಾರ್ನ್ ಬಳಕೆ ಮಾಡುವುದು, ಹೆಲ್ಮೆಟ್ ಇಲ್ಲದೆ ಪ್ರಯಾಣ, ತ್ರಿಬಲ್ ರೈಡಿಂಗ್ ಮಾಡುವವರ ಬಗ್ಗೆಯೂ ನಿಗಾ ಇಟ್ಟಿದ್ದು, ದಂಡ ವಿಧಿಸುತ್ತಿದ್ದೇವೆ ಎಂದರು.

ಸಾರ್ವಜನಿಕರು ಯಾರೇ ಆಗಲೀ, ವಾಹನಗಳು ಟ್ರಾಫಿಕ್ ನಿಯಮ ಉಲ್ಲಂಘಿಸಿದಲ್ಲಿ ಅಂತಹ ಫೋಟೋಗಳನ್ನು ತೆಗೆದು ನಮಗೆ ತಲುಪಿಸಿದರೂ ನಾವು ಕ್ರಮ ಕೈಗೊಳ್ಳುತ್ತೇವೆಂದು ದಿನೇಶ್ ಕುಮಾರ್, ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು. ಖಾಸಗಿ ಬಸ್ ಗಳು ನಿರ್ಲಕ್ಷ್ಯದಿಂದ ಚಲಾಯಿಸುವುದು, ಪಾದಚಾರಿ ನಡೆದಾಡುವ ಫುಟ್ ಪಾತ್ ಮೇಲೆ ವಾಹನ ನಿಲ್ಲಿಸುವುದು ಇತ್ಯಾದಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಪೊಲೀಸರ ಗಮನಸೆಳೆದರು. ಇನ್ಸ್ ಪೆಕ್ಟರ್ ಭಾರತಿ ಉಪಸ್ಥಿತರಿದ್ದು, ಫ್ಲಾಟ್ ಇನ್ನಿತರ ಮನೆಗಳನ್ನು ಲೀಸ್ ಅಥವಾ ಬಾಡಿಗೆ ಕೊಡುವ ಸಂದರ್ಭದಲ್ಲಿ ಗ್ರಾಹಕರ ಪೂರ್ವಾಪರ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಸಾರ್ವಜನಿಕರು ಯಾವುದೇ ತೊಂದರೆಯಾದಲ್ಲಿ 112 ನಂಬರಿಗೆ ಫೋನ್ ಮಾಡಿ ಪೊಲೀಸರಿಗೆ ದೂರು ಕೊಡಬಹುದು. ಠಾಣೆಗೆ ಬಂದೇ ದೂರು ಕೊಡಬೇಕಿಲ್ಲ ಎಂದರು.

"The police department is sincerely working to make the city free from consumption of narcotic drugs (banned substances) and its peddling by August 15," said deputy commissioner of police (crime and traffic) B P Dinesh Kumar. He was speaking at the public grievances redressal meet here on Saturday, June 24 that was organised by the Mangaluru city police.