Nalin Kateel: ಬಿಜೆಪಿ ನಾಯಕರ ಕಚ್ಚಾಟ ; ಪಕ್ಷದ ಶಿಸ್ತು ಮೀರಿದರೆ ಕ್ರಮ ಕೈಗೊಳ್ಳುವೆ - ರಾಜ್ಯಾಧ್ಯಕ್ಷ ನಳಿನ್ 

27-06-23 06:45 pm       Mangalore Correspondent   ಕರಾವಳಿ

ಪಕ್ಷದ ಶಿಸ್ತು ಮೀರಿ ಯಾರು ಕೂಡ ಯಾವುದೇ ಹೇಳಿಕೆಗಳ‌ನ್ನು ನೀಡಬಾರದು. ಪಕ್ಷದ ಅನುಶಾಸನದ ಪ್ರಕಾರವೇ ಎಲ್ಲರೂ ನಡೆದುಕೊಳ್ಳಬೇಕು. ಪಕ್ಷದ ಸೂಚನೆ ಮೀರಿ ಯಾರಾದರೂ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಚ್ಚಾಟದಲ್ಲಿ ತೊಡಗಿರುವ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು, ಜೂನ್ 27: ಪಕ್ಷದ ಶಿಸ್ತು ಮೀರಿ ಯಾರು ಕೂಡ ಯಾವುದೇ ಹೇಳಿಕೆಗಳ‌ನ್ನು ನೀಡಬಾರದು. ಪಕ್ಷದ ಅನುಶಾಸನದ ಪ್ರಕಾರವೇ ಎಲ್ಲರೂ ನಡೆದುಕೊಳ್ಳಬೇಕು. ಪಕ್ಷದ ಸೂಚನೆ ಮೀರಿ ಯಾರಾದರೂ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಚ್ಚಾಟದಲ್ಲಿ ತೊಡಗಿರುವ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ನಾಯಕತ್ವ ವಿರುದ್ಧ ಪಕ್ಷದ ನಾಯಕರಿಂದಲೇ ಅಪಸ್ವರ ಕುರಿತ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ನಳಿನ್ ಕುಮಾರ್, ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಎಲ್ಲಿಯೂ ಗಲಾಟೆಗಳು ಆಗಿಲ್ಲ. ಎಲ್ಲ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ. ಆದರೂ ಕೆಲವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ.‌ ನಿನ್ನೆಯೇ ಈ ಬಗ್ಗೆ ಎಲ್ಲ ಹಿರಿಯರಲ್ಲಿ ಮಾತನಾಡಿದ್ದೇನೆ. ಇವತ್ತಿನಿಂದ ಯಾರೂ ಯಾವುದೇ ಹೇಳಿಕೆಗಳನ್ನು ನೀಡಬಾರದೆಂದು ಸೂಚಿಸಿದ್ದೇನೆ ಎಂದರು.

ಅತಿರೇಕದ ಹೇಳಿಕೆ ಕೊಡುವ ಎಲ್ಲರಿಗೂ ನೋಟಿಸ್ ನೀಡಲಾಗುತ್ತದೆ. ಮತ್ತೆ ಪಕ್ಷವನ್ನು ಲೋಕಸಭಾ ಚುನಾವಣೆಗೆ ತಯಾರಿ ಮಾಡಿಸಬೇಕು. ಲೋಕಸಭಾ ಚುನಾವಣೆ ಗೆಲ್ಲುವುದೇ ಗುರಿಯಾಗಬೇಕು. ಈಗಾಗಲೇ ಬೂತ್ ಗಟ್ಟಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಕಾರ್ಯಕರ್ತರೊಡನೆ ಸಂವಾದ ಮಾಡಿದ್ದಾರೆ. ನಮ್ಮ ಜವಾಬ್ದಾರಿ ಜಾಸ್ತಿ ಇದೆ‌. ಕಾರ್ಯಕರ್ತರು ಬಹಳ ಉತ್ಸಾಹ ಮತ್ತು ಪ್ರೇರಣೆಯಿಂದ ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಗೋ ಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು 

ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರದಲ್ಲಿ ಮಾತನಾಡಿದ ಅವರು, ಗೋವುಗಳ ರಕ್ಷಣೆಗಾಗಿ ಬಿಜೆಪಿ ಕಾನೂನು ತಂದಿದೆ. ಆದ್ದರಿಂದ ಕಾನೂನು ಜಾರಿಯಲ್ಲಿರುವಾಗ ಗೋಕಳ್ಳರ ಮತ್ತು ಗೋಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರು ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Mangalore Govt should take strict measures to prevent cattle theft, slaughter, internal fight in BJP not tolerated says Nalin Kateel. Speaking to media here on Tuesday, June 27, he said, “The BJP government has introduced the anti-cattle slaughter law to protect the culture of this land. Even Mahatma Gandhi spoke about preserving the cattle.