ಬ್ರೇಕಿಂಗ್ ನ್ಯೂಸ್
29-06-23 12:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 29: ಅಪ್ರಾಪ್ತರು ಸ್ಕೂಟರ್ ಇನ್ನಿತರ ಯಾವುದೇ ವಾಹನ ಚಲಾಯಿಸುವಂತೆ ಇಲ್ಲ. ಹಾಗಿದ್ದರೂ, ಲೈಸನ್ಸ್ ಇಲ್ಲದಿದ್ದರೂ ಹುಡುಗರು ದ್ವಿಚಕ್ರ ವಾಹನ ಚಲಾಯಿಸುತ್ತಾರೆ. ಕೆಲವೊಮ್ಮೆ ಅತಿ ವೇಗದಿಂದ ಚಲಾಯಿಸಿ ದುರಂತಕ್ಕೀಡಾಗುತ್ತಾರೆ. ನಗರದ ಮೇರಿಹಿಲ್ ನಲ್ಲಿ ನಿನ್ನೆ ರಾತ್ರಿ ಸ್ಕೂಟರ್ ಡಿವೈಡರ್ ಡಿಕ್ಕಿಯಾಗಿ ಅಪ್ರಾಪ್ತ ತರುಣರಿಬ್ಬರು ದುರಂತ ಸಾವಿಗೀಡಾಗಿದ್ದಾರೆ.
ಬುಧವಾರ ರಾತ್ರಿ ಅತಿ ವೇಗದ ಚಾಲನೆಯಿಂದಾಗಿ ಸ್ಕೂಟರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪ್ರಾಪ್ತ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಪಚ್ಚನಾಡಿ ನಿವಾಸಿಗಳಾದ ಪವನ್(16) ಹಾಗೂ ಚಿರಾಗ್(15) ಮೃತಪಟ್ಟವರು. ಇಬ್ಬರು ಕೂಡ ಪಚ್ಚನಾಡಿಯಲ್ಲಿ ಅಕ್ಕಪಕ್ಕದ ನಿವಾಸಿಗಳಾಗಿದ್ದು ನಿನ್ನೆ ಸಂಜೆ ಇನ್ಯಾರದ್ದೋ ಸ್ಕೂಟರ್ ಪಡೆದು ತಿರುಗಾಟಕ್ಕೆ ಹೋಗಿದ್ದರು.
ರಾತ್ರಿ 9 ಗಂಟೆ ಸುಮಾರಿಗೆ ಏರ್ಪೋರ್ಟ್ ರಸ್ತೆಯಲ್ಲಿ ಜಿಟಿ ಜಿಟಿ ಮಳೆಯ ನಡುವೆ ಇವರು ಕೆಪಿಟಿ ಕಡೆಯಿಂದ ಪದವಿನಂಗಡಿ ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಅತಿವೇಗದ ಚಾಲನೆಯಿಂದಾಗಿ ಸ್ಕೂಟರ್ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜು ಮುಂಭಾಗದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದ್ದು ರಸ್ತೆ ಮಧ್ಯದ ವಿದ್ಯುತ್ ಲೈಟ್ ಕಂಬಕ್ಕೆ ಇಬ್ಬರು ಸವಾರರು ಕೂಡ ಬಡಿದು ರಸ್ತೆಗೆ ಬಿದ್ದಿದ್ದಾರೆ. ಸವಾರರು ಹೆಲ್ಮೆಟ್ ಹಾಕಿದ್ದರು ಎಂದು ಪೊಲೀಸರು ಹೇಳುತ್ತಿದ್ದು, ಅತಿವೇಗದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎನ್ನುತ್ತಿದ್ದಾರೆ. ಹೆಲ್ಮೆಟ್ ಹಾಕಿದ್ದರೆ, ತಲೆಯ ಭಾಗಕ್ಕೆ ಅಷ್ಟು ಪೆಟ್ಟು ಬೀಳುತ್ತಿರಲಿಲ್ಲ.
ರಸ್ತೆಯಲ್ಲಿ ಬಿದ್ದಿದ್ದ ಒಬ್ಬನನ್ನು ಅದೇ ಸಂದರ್ಭದಲ್ಲಿ ಬಂದ ಇನೋವಾ ವಾಹನದಲ್ಲಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಇನ್ಬೊಬ್ಬನನ್ನು ರೂಟ್ ಮುಗಿಸಿ ಕರ್ತವ್ಯದಿಂದ ಮರಳುತ್ತಿದ್ದ ಬಸ್ ಒಂದರಲ್ಲಿ ಎಜೆ ಆಸ್ಪತ್ರೆಗೆ ಒಯ್ಯಲಾಗಿತ್ತು. ಓರ್ವ ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೃತ ಚಿರಾಗ್ ಬೋಂದೆಲ್ ಚರ್ಚ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದರೆ, ಪವನ್ ಕೆನರಾ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮಾಡುತ್ತಿದ್ದ.
ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಬಿಜೈ ಚರ್ಚ್ ಹಾಲ್ ಮುಂಭಾಗದಲ್ಲಿ ಇದೇ ರೀತಿ ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಬರುತ್ತಿದ್ದ ಹದಿಹರೆಯದ ತರುಣ ಆಟೋ ರಿಕ್ಷಾ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿತ್ತು. ಅಪ್ರಾಪ್ತರಿಗೆ ವಾಹನ ಕೊಡುವುದೇ ಇಲ್ಲಿ ಆಪತ್ತಿಗೆ ಕಾರಣವಾಗುತ್ತಿದೆ.
Mangalore Accident in Maryhill, two minor students killed on spot after scooter hits pole on divider. The deceased are identified as Pavan (16) and Chirag (15). Both were residents of Padavinangady.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm