Bakrid Mangalore 2023: ತ್ಯಾಗ, ಪ್ರೀತಿ, ಸಾಮರಸ್ಯದ ಸಂದೇಶವೇ ಈದ್ ಹಬ್ಬ ;  ಆಶ್ರಮವಾಸಿಗಳೊಂದಿಗೆ ಹಬ್ಬ ಆಚರಿಸಿದ ಸ್ಪೀಕರ್ ಖಾದರ್,  ಗ್ರೀಟಿಂಗ್ ಕಾರ್ಡ್ ನೀಡಿದ ವೃದ್ಧೆ 

29-06-23 04:06 pm       Mangalore Correspondent   ಕರಾವಳಿ

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಆಶ್ರಮವಾಸಿಗಳಿಗೆ ಬಿರಿಯಾನಿ ಊಟ ನೀಡಿ ಈದ್ ಹಬ್ಬವನ್ನ ಆಚರಿಸಿದರು. ಈ ವೇಳೆ, ನೆಚ್ಚಿನ ಶಾಸಕರಿಗೆ ಆಶ್ರಮವಾಸಿ ವೃದ್ಧೆಯೋರ್ವರು ತಾನೇ ತಯಾರಿಸಿದ ಈದ್ ಗ್ರೀಟಿಂಗ್ಸ್ ನೀಡಿ ಶುಭ ಹಾರೈಸಿದ್ದಾರೆ. 

ಉಳ್ಳಾಲ, ಜೂ.29: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಆಶ್ರಮವಾಸಿಗಳಿಗೆ ಬಿರಿಯಾನಿ ಊಟ ನೀಡಿ ಈದ್ ಹಬ್ಬವನ್ನ ಆಚರಿಸಿದರು. ಈ ವೇಳೆ, ನೆಚ್ಚಿನ ಶಾಸಕರಿಗೆ ಆಶ್ರಮವಾಸಿ ವೃದ್ಧೆಯೋರ್ವರು ತಾನೇ ತಯಾರಿಸಿದ ಈದ್ ಗ್ರೀಟಿಂಗ್ಸ್ ನೀಡಿ ಶುಭ ಹಾರೈಸಿದ್ದಾರೆ. 

ಇದಕ್ಕೂ ಮುನ್ನ ಬೆಳಗ್ಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಯು.ಟಿ ಖಾದರ್ ಅವರು ಈದ್ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಂಗಳೂರಿನ‌ ಹೆಲ್ಪ್ ಇಂಡಿಯಾ ಫೌಂಡೇಶನ್ ಆಶ್ರಯದಲ್ಲಿ ಸೋಮೇಶ್ವರದ ನೆಹರು ನಗರದ ಪಶ್ಚಿಮ್ ರಿಹ್ಯಾಬ್ ಮಾನಸಿಕ ಪುನಶ್ಚೇತನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಈದ್ ಆಚರಣೆಯಲ್ಲಿ ಬಾಗವಹಿಸಿ ಸಂತಸ ಹಂಚಿಕೊಂಡರು. ಆಶ್ರಮವಾಸಿ ವೃದ್ಧೆಯೋರ್ವರು ತಾವೇ ತಯಾರಿಸಿದ್ದ ಈದ್ ಗ್ರೀಟಿಂಗ್ ಕಾರ್ಡ್ ವೊಂದನ್ನ ನೆಚ್ಚಿನ ಶಾಸಕ ಖಾದರ್ ಗೆ ನೀಡಿದರು. ವೃದ್ಧೆ ಪ್ರೀತಿಯಿಂದ ನೀಡಿದ ಗ್ರೀಟಿಂಗ್ ಕಾರ್ಡನ್ನ‌‌ ಬಹಳ ಸಂತೋಷದಿಂದಲೇ ಖಾದರ್ ಸ್ವೀಕರಿಸಿದರು. 

ಈ ವೇಳೆ ಮಾತನಾಡಿದ ಖಾದರ್ ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತ ನಿರ್ಮಾಣಕ್ಕೆ ಹಬ್ಬಗಳು ಸೇತುವಾಗಬೇಕು. ಪರಸ್ಪರ ಸಂಸ್ಕೃತಿ, ಸೌಹಾರ್ದತೆಯನ್ನು ಹಂಚುವ ಮೂಲಕ ದೇಶದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಪ್ರವಾದಿ ಇಬ್ರಾಹಿಂ ಅವರ ಕಾಲದಲ್ಲಿ ನಡೆದ ಘಟನೆಯನ್ನು ನೆನಪಿಸುವಂತಹ ಹಬ್ಬ ಬಕ್ರೀದ್ ಆಗಿದೆ. ಈ ಹಬ್ಬ ಎಲ್ಲರಿಗೂ ನೆಮ್ಮದಿ ತರಲೆಂಬ ಹಾರೈಕೆ ನಮ್ಮದು. ಮಣಿಪುರದ ಜನಾಂಗೀಯ ಕಲಹ ಇತ್ಯರ್ಥಗೊಳ್ಳಲಿ, ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ದರ್ಗಾದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್ ಮುಕ್ಕಚೇರಿ, ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕ ರಾಝಿಕ್ ಉಳ್ಳಾಲ್, ಝಾಕಿರ್ ಇಕ್ಲಾಸ್, ಪಶ್ಚಿಮ್ ರಿಹಾಬ್ ಸೆಂಟರ್ ನ ಸ್ಥಾಪಕ ರೋಹಿತ್ ಸಾಂಕ್ಟಸ್, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.

Mangalore Bakrid festival spreads communal harmony, Speaker U T Khader celebrates Eid in Ashram at Someshwara. A good society needs to be created by sharing culture and harmony with one another,” said U T Khader, local MLA and speaker of Karnataka legislative assembly.