Udupi College Video, Police DYSP Belliappa: ಉಡುಪಿ ವಿಡಿಯೋ ಕೇಸ್ ; ಬಿಜೆಪಿಯ ಪ್ರತಿಭಟನೆ ಬೆನ್ನಲ್ಲೇ ತನಿಖಾಧಿಕಾರಿಯ ಬದಲಾವಣೆ, ಕುಂದಾಪುರದ ಡಿವೈಎಸ್‌ಪಿ ಬೆಳ್ಳಿಯಪ್ಪಗೆ ಇಂಚಾರ್ಜ್

29-07-23 03:45 pm       Udupi Correspondent   ಕರಾವಳಿ

ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ, ಜುಲೈ 29: ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಮಂಜುನಾಥ್ ಗೌಡ ಅವರು ತನಿಖೆಯಲ್ಲಿ ಲೋಪ ಮಾಡಿದ್ದಾರೆಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು.

ಬಿಜೆಪಿಯ ಪ್ರತಿಭಟನೆಯ ಬೆನ್ನಲ್ಲೇ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಛಿಂದ್ರ, ತನಿಖಾಧಿಕಾರಿ ಮಂಜುನಾಥ್ ಗೌಡ ಅವರನ್ನು ಬದಲಿಸಿ ಕುಂದಾಪುರದ ಡಿವೈಎಸ್ ಬೆಳ್ಳಿಯಪ್ಪ ಎಂಬುವರಿಂದ ತನಿಖೆಯನ್ನು ನಡೆಸಲು ನಿರ್ಧರಿಸಲಾಗಿದ್ದು, ಅವರಿಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಈ ಪ್ರಕರಣದ ಆರೋಪಿಗಳಾದ ಮೂವರು ವಿದ್ಯಾರ್ಥಿನಿಯರನ್ನು ಜು. 29ರಂದು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಯ ವೇಳೆ ವಿದ್ಯಾರ್ಥಿನಿಯರು ಏನು ಹೇಳಿದರು ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯರು ಈಗಾಗಲೇ ಜಾಮೀನು ಪಡೆದಿದ್ದಾರೆ.

Congress MLA Priyank Kharge gets 3rd notice in Karnataka ​PSI scam, says  hes not obligated to depose- The New Indian Express

ಪ್ರಿಯಾಂಕ್ ಖರ್ಗೆ ಕಿಡಿ :

ಉಡುಪಿ ವಿದ್ಯಾರ್ಥಿನಿಯರ ವಿಡಿಯೊ ಚಿತ್ರೀಕರಣ ಪ್ರಕರಣದಲ್ಲಿ ಬಿಜೆಪಿ ತನ್ನ ರಾಜಕೀಯ ಮುಂದುವರಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ನಟಿ ಖುಷ್ಬೂ ಸುಂದರ್ ಅವರೇ ಖುದ್ದಾಗಿ, ಈ ಪ್ರಕರಣದಲ್ಲಿ ಯಾವುದೇ ವಿಡಿಯೋ ಚಿತ್ರೀಕರಣವಾಗಿಲ್ಲ. ವಿಡಿಯೋ ಚಿತ್ರೀಕರಣದ ಸಾಕ್ಷಿಗಳೇ ಸಿಕ್ಕಿಲ್ಲದಿದ್ದಾಗ ಕೇಸ್ ದಾಖಲಿಸಲು ಸಾಧ್ಯವಾಗುವುದೇ ಇಲ್ಲ ಎಂದು ಹೇಳಿದ್ದಾರೆ.

Violating HC order on hijab can lead to anti-national activities: Union  Minister Shobha Karandlaje- The New Indian Express

ಶೋಭಾ ಕರಂದ್ಲಾಜೆ ಆರೋಪ:

ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈ ಹಿಂದೆಯೂ ಉಡುಪಿಯ ಆ ವೈದ್ಯಕೀಯ ಕಾಲೇಜಿನಲ್ಲಿ ಇಂಥ ಘಟನೆಗಳು ನಡೆದಿರುವುದಾಗಿ ಹೇಳಲಾಗಿದೆ. ಆ ಕಾಲೇಜಿನ ಹಿಂಬಾಗದ ಕಾಂಪೌಂಡ್ ನ ಬಳಿ ಮೂವರು ಹುಡುಗರು ಬರುತ್ತಿದ್ದರಂತೆ. ಅವರು ಯಾರು ಎಂಬಿತ್ಯಾದಿ ವಿಚಾರಗಳನ್ನು ತನಿಖೆಯಲ್ಲಿ ಪತ್ತೆ ಹಚ್ಚಬೇಕಿದೆ ಎಂದು ಆಗ್ರಹಿಸಿದ್ದಾರೆ.

Udupi college Video case, Investigation police officer changed aftet BJP protest, DYSP Belliappa New officer by SP.