Arashinagundi falls missing sharath body found: ಅರಶಿನಗುಂಡಿ ಜಲಪಾತಕ್ಕೆ ಬಿದ್ದಿದ್ದ ಯುವಕನ ಶವ ವಾರದ ಬಳಿಕ ಬಂಡೆಯ ಎಡೆಯಲ್ಲಿ ಪತ್ತೆ 

30-07-23 03:16 pm       Udupi Correspondent   ಕರಾವಳಿ

ಇತ್ತೀಚೆಗೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಆಯತಪ್ಪಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಉಡುಪಿ, ಜುಲೈ 30: ಇತ್ತೀಚೆಗೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಆಯತಪ್ಪಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್ (23) ಮೃತಪಟ್ಟವರು. ಕಳೆದೆರಡು ದಿನಗಳಿಂದ ಘಟ್ಟ ಪ್ರದೇಶದಲ್ಲಿ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಡಿಮೆಯಾಗಿದೆ. ಎನ್ ಡಿಆರ್ ಎಫ್ ಸಿಬಂದಿ ಹುಡುಕಾಡುತ್ತಿದ್ದಾಗ ಶರತ್ ಬಿದ್ದ ಜಾಗದಿಂದ 200 ಮೀಟರ್ ದೂರದ ಕಲ್ಲು ಬಂಡೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 

ಶರತ್ ಒಂದು ವಾರದ ಹಿಂದೆ ಕಳೆದ ಭಾನುವಾರ (ಜು.23ರಂದು) ಸ್ನೇಹಿತನೊಂದಿಗೆ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಜಲಪಾತ ಬಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು ಸೌಪರ್ಣಿಕಾ ನದಿಯ ಸೆಳೆತಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಜಲಪಾತಕ್ಕೆ ಬೀಳುತ್ತಿದ್ದ ದೃಶ್ಯಗಳು ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿತ್ತು.

ಶರತ್ ಅವರೊಂದಿಗಿದ್ದ ಸ್ನೇಹಿತ ಮಾಹಿತಿ ನೀಡಿದ ತರುವಾಯ ಆತನ ಪತ್ತೆಗೆ ಶೋಧ ಕಾರ್ಯ ಬಿರುಸುಗೊಂಡಿತ್ತು. ಕೊಲ್ಲೂರು ಠಾಣೆ ಉಪನಿರೀಕ್ಷಕಿಯರಾದ ಜಯಶ್ರೀ, ಸುಧಾರಾಣಿ, ಠಾಣೆ ಸಿಬ್ಬಂದಿ, ಅರಣ್ಯ ಇಲಾಖೆ, ಎಸ್.ಡಿ.ಆರ್.ಎಫ್ ತಂಡ, ಉಡುಪಿ, ಬೈಂದೂರು, ಕುಂದಾಪುರ ಅಗ್ನಿಶಾಮಕ ತಂಡದ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ವಿಪರೀತ ಮಳೆ, ಜಿಗಣೆ ಕಾಟದ ನಡುವೆ ಕಾರ್ಯಾಚರಣೆ ನಡೆಸಲಾಗಿತ್ತು.

Arashinagundi falls missing sharath body found 200 meters below the falls in the rocks. The body was found wedged underneath a rock. Sharath, hailing from Bhadravathi, had visited Arashinagundi Falls on July 23 for sightseeing.