ಶಿರ್ವ ; ಮನೆಯ ಜಗುಲಿ ಹತ್ತಿದ ಕಾಡು ಕೋಣ, ಸ್ಥಳೀಯರಿಗೆ ಆತಂಕ 

30-07-23 11:00 pm       Udupi Correspondent   ಕರಾವಳಿ

ಕಾಡಿನಿಂದ ನುಗ್ಗಿ ಬಂದ ಕಾಡು ಕೋಣವೊಂದು ಮನೆಯ ಜಗುಲಿಗೆ ಹತ್ತಿದ ಘಟನೆ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ನಡೆದಿದೆ. 

ಉಡುಪಿ, ಜುಲೈ 30: ಕಾಡಿನಿಂದ ನುಗ್ಗಿ ಬಂದ ಕಾಡು ಕೋಣವೊಂದು ಮನೆಯ ಜಗುಲಿಗೆ ಹತ್ತಿದ ಘಟನೆ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ನಡೆದಿದೆ. 

ಶನಿವಾರ ನಸುಕಿನಲ್ಲಿ ಪಿಲಾರಿನ ರವಿ ಕುಲಾಲ್ ಎಂಬವರ ಮನೆಯ ಆವರಣಕ್ಕೆ ಕಾಡು ಕೋಣ ಬಂದಿದ್ದು ವೆರಾಂಡ ಹತ್ತಿ ಹೋಗಿರುವುದು, ಮನೆಯ ಸುತ್ತ ನಡೆದಾಡಿರುವುದು, ಬಾವಿಯ ಬಳಿಗೆ ಹೋಗಿರುವುದು ಕಂಡುಬಂದಿದೆ.‌ ಶಿರ್ವ ಸಮೀಪದ ಪಿಲಾರು ಕಾನ ರಕ್ಷಿತಾರಣ್ಯ ಸುತ್ತ ತಂತಿಯ ಬೇಲಿ ಇದ್ದರೂ, ಕೆಲವೊಮ್ಮೆ ಕಾಡು ಕೋಣಗಳ ಹಿಂಡು ನಾಡಿಗೆ ಬಂದು ಕೃಷಿಯನ್ನು ಹಾಳು ಮಾಡುವುದು ನಡೆಯುತ್ತದೆ.‌   

ಏಳೆಂಟು ಕಾಡು ಕೋಣಗಳ ಹಿಂಡು ರಕ್ಷಿತಾರಣ್ಯ ಆಸುಪಾಸಿನ ಗ್ರಾಮಗಳಾದ ಪಿಲಾರು, ಮಜಲಬೆಟ್ಟು, ಸೂಡ, ಮಿತ್ತಬೆಟ್ಟು, ಕುದ್ರುಪಾದೆ, ಗುಂಡುಪಾದೆ ಪ್ರದೇಶದಲ್ಲಿ ದಾಳಿ ಇಡುತ್ತಿದ್ದು ಕೃಷಿ ನಾಶ ಮಾಡುತ್ತಿದೆ. ಈ ಭಾಗದಲ್ಲಿ ಬೆಳೆಯುವ ತರಕಾರಿ, ಅಡಿಕೆ, ಬಾಳೆ ಇನ್ನಿತರ ಕೃಷಿ ತೋಟಗಳನ್ನು ಹಾಳು ಮಾಡುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಕೃಷಿಗೆ ದಾಳಿ ಮಾಡುವ ಕಾಡು ಕೋಣಗಳು ಈ ಭಾಗದ ಸ್ಥಳೀಯರಿಗೆ ಆತಂಕ ಹುಟ್ಟಿಸಿದೆ.

A wild bison was spotted on the verandah of the house belonging to Ravi Kulal at Pergottu of Pilaru Kunjigudde near Shirva on Saturday early in the morning.