ಬ್ರೇಕಿಂಗ್ ನ್ಯೂಸ್
01-08-23 10:38 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಸಾಕ್ಷರತೆ, ಆರೋಗ್ಯ ಸೂಚ್ಯಂಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಾನ ಕುಸಿಯುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿದ್ದರಾಮಯ್ಯ, ಶಿಕ್ಷಣ ಮತ್ತು ಆರೋಗ್ಯ ಅಧಿಕಾರಿಗಳನ್ನು ಈ ಬಗ್ಗೆ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಸಾಕ್ಷರತೆ ಪ್ರಮಾಣದಲ್ಲಿ 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು. 2020ರಲ್ಲಿ 15ನೇ ಸ್ಥಾನ ಮತ್ತು 2023ರಲ್ಲಿ 17ನೇ ಸ್ಥಾನಕ್ಕೆ ಕುಸಿದಿದೆ. ಸಾಕ್ಷರತೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಿತಿ ಈ ಪರಿ ಕುಸಿತ ಆಗುತ್ತಿರುವುದು ಗಂಭೀರ ಎಚ್ಚರಿಕೆಯ ಸೂಚನೆ. ಯಾಕೆ ಹೀಗಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಸಮಜಾಯಿಷಿ ನೀಡಲು ಯತ್ನಿಸಿದ ಡಿಡಿಪಿಐ ಅವರನ್ನು ನಿಮ್ಮ ಕತೆಯೇನು ಬೇಡ, ಯಾಕೆ ಕುಸಿತ ಆಗಿದೆ ಹೇಳಪ್ಪಾ.. ನೀವು ಯಾವಾಗಿನಿಂದ ಈ ಹುದ್ದೆಯಲ್ಲಿದ್ದೀರಿ ಎಂದು ಕೇಳಿದರು. ಒಂದೂವರೆ ತಿಂಗಳಾಗಿದ್ದು, ಈ ಹಿಂದಿನವರು ಮೂರು ವರ್ಷ ಇದ್ದರು ಎಂದರು ಅಧಿಕಾರಿ. ಹಾಗಾದರೆ, ಈ ರೀತಿಯ ಕುಸಿತಕ್ಕೆ ಹಿಂದಿನ ಡಿಡಿಪಿಐ ಅಧಿಕಾರಿಯೇ ಕಾರಣ. ನಿಮ್ಮ ಫೂಲಿಶ್ ನೆಸ್ ನಿಂದಾಗಿಯೇ ಈ ರೀತಿ ಆಗುತ್ತಿದೆ, ನೀವೆಲ್ಲ ಶಾಲೆಗಳಿಗೆ ಹೋಗುತ್ತೀರಾ.. ಏನು ಸಮಸ್ಯೆ ಇದೆ ಅಂತ ನೋಡಿದ್ದೀರಾ ಎಂದು ಕೇಳಿದರು.
ಶಿಕ್ಷಣ ಮಟ್ಟ ಕುಸಿಯುತ್ತಿರುವ ವಿಚಾರದಲ್ಲಿ ಶಾಸಕ ಭರತ್ ಶೆಟ್ಟಿ ಸಮಜಾಯಿಷಿ ನೀಡಲು ಯತ್ನಿಸಿದರು. ರ್ಯಾಂಕ್ ಶ್ರೇಣಿಯಲ್ಲಿ ಅಂಕಗಳ ಮಾನದಂಡ ಬದಲಾವಣೆ ಇದಕ್ಕೆ ಕಾರಣ ಎಂದು ಹೇಳಿದಾಗ, ಚಿತ್ರದುರ್ಗ, ಮಂಡ್ಯ ಜಿಲ್ಲೆಗಳು ನಿಮಗಿಂತ ಮುಂದೆ ಹೋಗಿದ್ದು ಹೇಗೆ. ಇದು ನಿಮಗೆ ಒಳ್ಳೆಯ ಲಕ್ಷಣವೇ.. ನಿಮ್ಮಲ್ಲಿ ಈ ಬಗ್ಗೆ ಮಾಹಿತಿ ಇದೆಯಾ ಎಂದು ಶಾಸಕರನ್ನು ಗರಂ ಆಗಿಯೇ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಸಾಕ್ಷರತೆ ಪ್ರಮಾಣದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಕುಸಿತ ಆಗುತ್ತಿರುವುದಕ್ಕೆ ಏನ್ರೀ ಕಾರಣ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನೆ ಮಾಡಿದರು. ನಾವು ಅಧಿಕಾರಿಗಳ ಸಭೆ ಕರೆದು ಚಿಂತನೆ ಮಾಡುತ್ತೇವೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡುರೂವ್ ಹೇಳಿದರು.
ಆರೋಗ್ಯ ಸೂಚ್ಯಂಕದಲ್ಲಿಯೂ ಇಳಿಕೆ
ಆರೋಗ್ಯ ಸೂಚ್ಯಂಕದಲ್ಲಿ 2015ರಲ್ಲಿ ಮೂರನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ 2023ರಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ, ತಾಯಿ, ಮಗು, ಬಾಣಂತಿಯರ ಮರಣ ಹೆಚ್ಚಿದೆ ಎಂದು ಸಿದ್ದರಾಮಯ್ಯ ಅಂಕಿ ಅಂಶಗಳ ಸಹಿತ ಸಭೆಯ ಗಮನಕ್ಕೆ ತಂದರು. ಡಿಎಚ್ಓ ಯಾರ್ರೀ.. ಮಂಗಳೂರಿನಂಥ ನಗರದಲ್ಲಿ ಯಾಕೆ ಈ ಸ್ಥಿತಿ ಬಂದಿದೆ ಎಂದು ಕೇಳಿದರು. ಸ್ಪಷ್ಟ ಉತ್ತರ ನೀಡಲು ತಡಬಡಾಯಿಸಿದ ಅಧಿಕಾರಿಯನ್ನು ಮುಖ್ಯಮಂತ್ರಿ ತೀವ್ರ ತರಾಟೆಗೆತ್ತಿಕೊಂಡರು. ನಾಚಿಕೆ ಆಗಲ್ವಾ ನಿಂಗೆ.. ಇಲಾಖೆಯಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀಯಾ ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದರು. ಇದೇ ವಿಚಾರದ ಬಗ್ಗೆ ಜಿಪಂ ಸಿಇಓ ಆನಂದ್ ಅವರನ್ನು ಪ್ರಶ್ನೆ ಮಾಡಿದ್ದು, ಅವರಲ್ಲಿಯೂ ಉತ್ತರ ಇರಲಿಲ್ಲ. ಇದೇ ಸಂದರ್ಭದಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದು, ವೈದ್ಯರು ಆಸ್ಪತ್ರೆಯಲ್ಲಿ ನಿಲ್ಲದೇ ಇರುವ ಬಗ್ಗೆ ಅಧಿಕಾರಿಗಳು ತಿಳಿಸಿದರು.
ಶಾಸಕ ವೇದವ್ಯಾಸ ಕಾಮತ್, ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ನಾವು ಕೌನ್ಸೆಲಿಂಗ್ ಮಾಡುತ್ತಿದ್ದೇವೆ, ಶೀಘ್ರದಲ್ಲಿ ಭರ್ತಿ ಮಾಡುತ್ತೇವೆ. ನೀವು ಯಾಕೆ ನಾಲ್ಕು ವರ್ಷದಲ್ಲಿ ಹುದ್ದೆ ಭರ್ತಿ ಮಾಡಿಲ್ಲ ಎಂದು ಮರು ಪ್ರಶ್ನೆ ಹಾಕಿದರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅಡಿಕೆಗೆ ಬರುತ್ತಿರುವ ಹಳದಿ ರೋಗದ ಬಗ್ಗೆ ವೈಜ್ಞಾನಿಕ ಸಂಶೋಧನೆ ಆಗಬೇಕೆಂದು ಆಗ್ರಹ ಮಾಡಿದರು. ಇದಕ್ಕೆ ಶಾಸಕ ಅಶೋಕ್ ರೈ, ಪ್ರತಾಪಸಿಂಹ ನಾಯಕ್ ದನಿಗೂಡಿಸಿದರು. ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಈ ಬಗ್ಗೆ ತಜ್ಞ ವಿಜ್ಞಾನಿಗಳನ್ನು ಕರೆದು ಚರ್ಚಿಸುತ್ತೇನೆ. ಸಂಶೋಧನೆ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.
ಗೂಂಡಾ ಕಾಯ್ದೆ ಹೇರಿ ಗಡೀಪಾರು ಮಾಡಿ
ನೈತಿಕ ಪೊಲೀಸ್ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಅವರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಏನ್ರೀ, ಯಾಕೆ ಕಂಟ್ರೋಲ್ ಮಾಡಕ್ಕಾಗಲ್ವಾ ಎಂದು ಕೇಳಿದರು. ಅಲ್ಲದೆ, ಯಾವುದೇ ಸಿದ್ಧಾಂತ, ಸಂಘಟನೆ ಇದ್ದರೂ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಯಾರು ಅದರ ಹಿಂದಿದ್ದಾರೆ ಅವರನ್ನು ಪತ್ತೆ ಮಾಡಿ. ಗಡೀಪಾರು, ಗೂಂಡಾ ಕಾಯ್ದೆಯಡಿ ಶಿಕ್ಷಿಸುವ ಕೆಲಸ ಮಾಡಿ. ಆಯಕಟ್ಟಿನ ಜಾಗದಲ್ಲಿ ಬಾಕ್ಸ್ ಇಟ್ಟು ಮಾಹಿತಿಗಳನ್ನು ಬರೆದು ಹಾಕುವಂತೆ ಹೇಳಿ ಸಾರ್ವಜನಿಕರಿಂದ ಸಲಹೆ ಪಡೆಯಿರಿ ಎಂದು ಕಮಿಷನರ್ ಅವರಿಗೆ ಸೂಚಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಬಗ್ಗೆ ಸಿದ್ದರಾಮಯ್ಯ ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಅಲ್ಲದೆ, ವಿವಿಧ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ತೋರಿಸಿ ಗಮನ ಹರಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಹಿರಿಯ ಅಧಿಕಾರಿಗಳಾದ ರಜನೀಶ್ ಗೋಯಲ್, ಅತೀಕ್ ಅಹ್ಮದ್ ಇದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರೂ ಭಾಗವಹಿಸಿದ್ದರು.
During his visit to Mangaluru, Chief Minister Siddaramaiah emphasized the need for officials to be proactive, efficient, and respectful towards the public. He urged them to ensure that government schemes reach beneficiaries promptly to curb corruption.
21-07-25 01:31 pm
Bangalore Correspondent
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 03:11 pm
Mangalore Correspondent
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm