Saujanya Rape case: ಸೌಜನ್ಯಾ ಕೊಲೆ ಪ್ರಕರಣ ; ಕಡಬದಲ್ಲಿ ಗೌಡ ಒಕ್ಕಲಿಗ ಸಂಘದಿಂದ ಬೃಹತ್ ಪ್ರತಿಭಟನೆ, ನಿರ್ಲಕ್ಷ್ಯ ಮಾಡಿದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ 

02-08-23 10:22 pm       Mangalore Correspondent   ಕರಾವಳಿ

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಮರು ತನಿಖೆಗೆ ಒತ್ತಾಯಿಸಿ ಕಡಬದಲ್ಲಿ ಒಕ್ಕಲಿಗ ಗೌಡ ಸಂಘದ ನೇತೃತ್ವದಲ್ಲಿ ಹಕ್ಕೊತ್ತಾಯ, ಪ್ರತಿಭಟನಾ ಸಭೆ ನಡೆದಿದೆ. 

ಸುಳ್ಯ, ಆಗಸ್ಟ್ 2: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಮರು ತನಿಖೆಗೆ ಒತ್ತಾಯಿಸಿ ಕಡಬದಲ್ಲಿ ಒಕ್ಕಲಿಗ ಗೌಡ ಸಂಘದ ನೇತೃತ್ವದಲ್ಲಿ ಹಕ್ಕೊತ್ತಾಯ, ಪ್ರತಿಭಟನಾ ಸಭೆ ನಡೆದಿದೆ. 

ಮುಖ್ಯಮಂತ್ರಿಗಳು ಹೇಳಿರುವಂತೆ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಅವಶ್ಯಕತೆಯಿಲ್ಲ. ಪ್ರಕರಣದ ಬಗ್ಗೆ ಮರು ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕು. ನೈಜ ಆರೋಪಿಯನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದು ಕಡಬ ಪೇಟೆಯಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ‌ಒಕ್ಕಲಿಗ ಸಂಘದ ಜೊತೆಗೆ ಹಲವಾರು ಇತರೇ ಸಂಘಟನೆಗಳು ಸಭೆಯಲ್ಲಿ ಸೇರಿದ್ದು ಇತರೇ ಸಮುದಾಯಗಳ ಜನರೂ ಭಾಗವಹಿಸಿದ್ದರು. ಬಳಿಕ ಕಡಬ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. 

ಮೆರವಣಿಗೆ ವೇಳೆ ವಾಹನಗಳಿಗೆ ಜಸ್ಟಿಸ್ ಫಾರ್ ಸೌಜನ್ಯಾ ಸ್ಟಿಕ್ಕರ್ ಅಳವಡಿಸಿ ಘೋಷಣೆ ಕೂಗಿದ್ದಾರೆ. ಪ್ರತಿಭಟನೆ ಸಭೆ ಯಾವುದೇ ಕ್ಷೇತ್ರ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ. ಕೃತ್ಯ ಎಸಗಿದ ಆರೋಪಿಗಳು ಯಾರೆಂದು ಪತ್ತೆ ಮಾಡಬೇಕು. ಅದಷ್ಟೇ ನಮ್ಮ ಒತ್ತಾಯ. ನಮ್ಮ‌ ಅಹವಾಲನ್ನು ನಿರ್ಲಕ್ಷ್ಯ ಮಾಡಿದರೆ ಪ್ರತಿ ಜಿಲ್ಲೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸೇರಿದ್ದ ಪ್ರಮುಖರು ತಿಳಿಸಿದ್ದಾರೆ.‌

Saujanya rape case, gowda community holds massive protest at Kadaba in Mangalore.