Dharmasthala protest, Soujanya rape case: ಪ್ರತಿಭಟನೆ ವೇಳೆ ಸೌಜನ್ಯಾ ತಾಯಿ ಮತ್ತು ಮಗನಿಗೆ ಹಲ್ಲೆ ಯತ್ನ ; ಧರ್ಮಸ್ಥಳ ಠಾಣೆಯಲ್ಲಿ ಎಫ್ಐಆರ್ ದಾಖಲು 

04-08-23 09:12 pm       Mangalore Correspondent   ಕರಾವಳಿ

ಉಜಿರೆಯಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಭಕ್ತರ ಪ್ರತಿಭಟನೆಯಲ್ಲಿ ಸೌಜನ್ಯಾ ಪೋಷಕರಿಗೆ ಹಲ್ಲೆಗೆ ಯತ್ನಿಸಿದ ಬಗ್ಗೆ ದೂರು ದಾಖಲಾಗಿದ್ದು, ಧರ್ಮಸ್ಥಳ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಬೆಳ್ತಂಗಡಿ, ಆಗಸ್ಟ್ 4: ಉಜಿರೆಯಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಭಕ್ತರ ಪ್ರತಿಭಟನೆಯಲ್ಲಿ ಸೌಜನ್ಯಾ ಪೋಷಕರಿಗೆ ಹಲ್ಲೆಗೆ ಯತ್ನಿಸಿದ ಬಗ್ಗೆ ದೂರು ದಾಖಲಾಗಿದ್ದು, ಧರ್ಮಸ್ಥಳ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಸೌಜನ್ಯಾ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಂ ದೂರಿನ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ. ಭಕ್ತರ ಪ್ರತಿಭಟನೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಚೂಡಿದಾರದ ಶಾಲು ಎಳೆದು ಮಾನಕ್ಕೆ ಕುಂದುಂಟು ಮಾಡಿದ್ದಾಗಿ ಮತ್ತು ಮಗ ಜಯರಾಮನಿಗೂ ಹಲ್ಲೆ ಮಾಡಿದ ಬಗ್ಗೆ ದೂರು ನೀಡಲಾಗಿದೆ. ‌ಇದರಂತೆ, ಐಪಿಸಿ 1860ರ ಕಾಯ್ದೆ ಮತ್ತು 341, 354, 323, 34 ಸೆಕ್ಷನ್ ಗಳಡಿ ಪ್ರಕರಣ ದಾಖಲು ಮಾಡಲಾಗಿದೆ. 

ಶುಕ್ರವಾರ ಉಜಿರೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಪರವಾಗಿ ಬೃಹತ್ ಸಮಾವೇಶ ನಡೆದಿದ್ದು ಧರ್ಮಸ್ಥಳ ಅವಹೇಳನ ಖಂಡಿಸಿ‌ ಧಿಕ್ಕಾರ ಕೂಗಿದ್ದರು.‌ ಸಮಾವೇಶ ಸ್ಥಳಕ್ಕೆ ಆಗಮಿಸಿದ್ದ ಸೌಜನ್ಯ ತಾಯಿ ಹಾಗೂ ಕುಟುಂಬಸ್ಥರಿಗೆ ವೇದಿಕೆ ಹತ್ತದಂತೆ ತಡೆದಿದ್ದಲ್ಲದೆ, ಘೆರಾವ್ ಹಾಕಿದ್ದರು. ಈ ವೇಳೆ ತಳ್ಳಾಟ ನಡೆದಿದ್ದು ಪೊಲೀಸರ ಮುಂದೆಯೇ  ಧರ್ಮಸ್ಥಳ ಸಂಸ್ಥೆಗೆ ಸೇರಿದ ವ್ಯಕ್ತಿಯೊಬ್ಬ ಜಯರಾಮ್ ಕೊರಳು ಪಟ್ಟಿ ಹಿಡಿದು ಆವಾಜ್ ಹಾಕಿದ್ದಾನೆ.  ಇದರ ವಿಡಿಯೋ ವೈರಲ್ ಆಗಿದ್ದು ಕುಟುಂಬದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dharmasthala protest, protesters try to attack sowjanya's mother and brother FIR filed. During the massive protest held at Dharmasthala for allegely misusing the name of the temple the protesters tried to attack soujanya's mother who suddnely came to the protest demanding justice for her daughter