ಬ್ರೇಕಿಂಗ್ ನ್ಯೂಸ್
10-08-23 09:26 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 10: ಈ ಸಾರಿ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗಿನ ವಿದ್ಯುತ್ ಬಳಕೆದಾರರಿಗೆ ಬಿಲ್ ಫ್ರೀ ಮಾಡಲಾಗಿದೆ. ಕಾಂಗ್ರೆಸ್ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಈ ಸೌಲಭ್ಯ ಇದೇ ಆಗಸ್ಟ್ ಮೊದಲ ವಾರದಿಂದ ಜನರಿಗೆ ಸಿಗ್ತಾ ಇದೆ. ಆದರೆ, ಇದೇ ವೇಳೆ ವಿದ್ಯುತ್ ಪವರ್ ಕಟ್ ಯೋಜನೆಯನ್ನೂ ರಾಜ್ಯ ಸರಕಾರ ಜಾರಿಗೆ ತಂದಿದ್ಯಾ ಅನ್ನುವ ಅನುಮಾನ ಉಂಟಾಗಿದೆ.
ಮಂಗಳೂರ ನಗರದಲ್ಲಿ ಕಳೆದ ಮೂರು ದಿನಗಳಿಂದ ಹಗಲು ಮತ್ತು ರಾತ್ರಿ ತಲಾ ಒಂದೊಂದು ಗಂಟೆ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಆದರೆ ಇದನ್ನು ಇಂತಿಷ್ಟೇ ಹೊತ್ತಲ್ಲಿ ತೆಗೆಯುವುದು ಅಂತ ತೋರಿಸುತ್ತಿಲ್ಲ. ಹಗಲಲ್ಲಿ ಮಧ್ಯಾಹ್ನ ಹೊತ್ತಿಗೆ, ಸಂಜೆ 5 ಗಂಟೆ ಸುಮಾರಿಗೆ, ಆನಂತರ ರಾತ್ರಿ ವೇಳೆಗೆ ಕರೆಂಟ್ ಕಡಿತ ಮಾಡಲಾಗಿದೆ. ಕದ್ರಿ ಭಾಗದಲ್ಲಿ ಒಂದು ಸಮಯಕ್ಕೆ ಕರೆಂಟ್ ಕಡಿತ ಮಾಡಿದರೆ, ಕಾವೂರು, ಮಣ್ಣಗುಡ್ಡ ಭಾಗದಲ್ಲಿ ಮತ್ತೊಂದು ಅವಧಿಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ರಾತ್ರಿ ವೇಳೆ ಸಂಜೆ ಏಳರಿಂದ 9 ಗಂಟೆ ಮಧ್ಯೆ ಅರ್ಧ ಗಂಟೆಯಿಂದ ಒಂದು ಗಂಟೆಯ ವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇರೆ ಬೇರೆ ಕಡೆಯಲ್ಲಿ ಕೇಳಿದಾಗ, ಬೇರೆ ಬೇರೆ ಅವಧಿಯಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ವಿದ್ಯುತ್ ಫ್ರೀ ಜೊತೆಗೆ ಕತ್ತಲ ಭಾಗ್ಯವನ್ನೂ ಕೊಟ್ಟಿದ್ದಾರೆಯೇ ಅನ್ನುವ ಶಂಕೆ ಎದುರಾಗಿದೆ.
ಈ ಬಗ್ಗೆ ಮೆಸ್ಕಾಂ ಎಂಡಿ ಅವರಲ್ಲಿ ಕೇಳಿದಾಗ, ಹೌದು, ಪವರ್ ಕಟ್ ಮಾಡಲು ಮೇಲಿನಿಂದ ಸೂಚನೆ ಬಂದಿದೆ ಅನ್ನುವ ಉತ್ತರ ನೀಡಿದ್ದಾರೆ. ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತ ಆಗಿದೆ. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಅಲ್ಲದೆ, ರಾಯಚೂರು ಮತ್ತು ಕೂಡಗಿ ವಿದ್ಯುತ್ ಸ್ಥಾವರದಲ್ಲಿ ಸ್ವಲ್ಪ ಸಮಸ್ಯೆ ಇದೆಯೆಂದು ತಿಳಿಸಿದ್ದಾರೆ. ಹಾಗಾಗಿ ರಾಜ್ಯದ ಎಲ್ಲ ವಿದ್ಯುತ್ ವಿಭಾಗಗಳಲ್ಲಿಯೂ ಇಂತಿಷ್ಟು ವ್ಯಾಟ್ ಕಡಿತ ಮಾಡುವಂತೆ ಸೂಚನೆ ಬಂದಿದೆ ಎಂದಿದ್ದಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೈಡ್ರೋ ಪವರ್ ಪ್ರಾಜೆಕ್ಟಲ್ಲಿ ವಿದ್ಯುತ್ ಜನರೇಟ್ ಆಗುತ್ತದೆ. ಅಲ್ಲದೆ, ಈಗ ಹಗಲು ಹೊತ್ತಲ್ಲಿ ಅತಿ ಹೆಚ್ಚು ಸೋಲಾರ್ ಎನರ್ಜಿ ಉತ್ಪಾದನೆಯಾಗುತ್ತದೆ. ಹಾಗಿದ್ದರೂ, ಆಗಸ್ಟ್ ಮೊದಲ ವಾರದಲ್ಲಿಯೇ ವಿದ್ಯುತ್ ಕಡಿತ ಮಾಡುತ್ತಿರುವುದು ಯಾವ ಕಾರಣಕ್ಕೆ ಎನ್ನುವ ಸಂಶಯ ಉಂಟಾಗಿದೆ. ವಿದ್ಯುತ್ ಫ್ರೀ ಕೊಡುತ್ತಿರುವಾಗ ಮುಂದಿನ ತಿಂಗಳ ಬಿಲ್ ಕೂಡ ಕಡಿಮೆ ಬರಲಿ ಅನ್ನುವ ದೂರಾಲೋಚನೆಯಿಂದ ಪವರ್ ಕಟ್ ಮಾಡುತ್ತಿದ್ದಾರೆಯೇ ಅನ್ನೋದು ತಿಳಿಯುತ್ತಿಲ್ಲ.
Gruha Jyothi effect, Frequent power cut in Mangalore people suffer during night, public turn angry. There has been frequent friend power cuts during the night time which is caused issues to residence of Mangaloreans.
22-05-25 07:36 pm
Bangalore Correspondent
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
Bagalkot, Monkey Visits Animal Hospital: ಬಾಗಲ...
22-05-25 12:41 pm
Ola News, Suicide, Bangalore: ಓಲಾ ಕಂಪನಿಯ ಎಐ ವ...
21-05-25 09:16 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm