ಬ್ರೇಕಿಂಗ್ ನ್ಯೂಸ್
20-08-23 10:45 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 20: ಸೌಜನ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ನಗರದ ಕದ್ರಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಜನಸಾಗರವೇ ನೆರೆದಿತ್ತು. ಸೌಜನ್ಯಾ ತಾಯಿ ಕುಸುಮಾವತಿ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಸೇರಿದಂತೆ ಸಾವಿರಾರು ಜನರು ಸೇರಿದ್ದರು.
ತಿಮರೋಡಿ ಮಹೇಶ್ ಶೆಟ್ಟರ ಅಬ್ಬರದ ಭಾಷಣಕ್ಕೆ ಜನರು ಮಂತ್ರಮುಗ್ಧರಾಗಿದ್ದಾರೆ. ಸೌಜನ್ಯಾ ಪ್ರಕರಣದಲ್ಲಿ ಹನ್ನೊಂದು ವರ್ಷಗಳ ಬಳಿಕವೂ ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ ಎಂದರೆ ದೇಶದಲ್ಲಿ ಕಾನೂನು ನಮ್ಮ ಪರವಾಗಿಲ್ಲ ಎಂದೇ ಹೇಳಬೇಕು. ಕಾನೂನು ಇರುವುದು ಉಳ್ಳವರ ಪರ ಮಾತ್ರ ಎನ್ನುವಂತಾಗಿದೆ ಎಂದಯ ಹೇಳಿ ಭಾಷಣ ಆರಂಭಿಸಿದ ತಿಮರೋಡಿ, ಸೌಜನ್ಯಾ ಅತ್ಯಾಚಾರ, ಕೊಲೆ ಮಾಡಿರುವುದು ವೀರೇಂದ್ರ ಹೆಗ್ಗಡೆಯ ಜನಗಳು, ಹರ್ಷೇಂದ್ರ ಹೆಗ್ಗಡೆಯ ಮಕ್ಕಳು ಕಾಮಾಂಧರು ಎಂದು ನೇರ ಆರೋಪ ಮಾಡಿದರು. ಧರ್ಮಸ್ಥಳ ಅನ್ನೋದು ಸನಾತನ ಧರ್ಮದ ಜನರು ನಂಬಿಕೊಂಡು ಬಂದ ನ್ಯಾಯ ಪೀಠ. ಮಾತು ಬಿಡ ಮಂಜುನಾಥ, ನ್ಯಾಯ ದೇವತೆ ಅಣ್ಣಪ್ಪ ನಂಬಿ ಬಂದವರಿಗೆ ನ್ಯಾಯ ಕೊಟ್ಟಿದ್ದಾನೆ. ಮುಖ್ಯಮಂತ್ರಿ ಆದಿಯಾಗಿ ಎಂತೆಂಥವರೆಲ್ಲ ಆ ಜಾಗದಲ್ಲಿ ನ್ಯಾಯ ತೀರ್ಮಾನ ಮಾಡಿಕೊಂಡಿಲ್ಲ. ಅದೇ ಧರ್ಮಸ್ಥಳದಲ್ಲಿ ನಮ್ಮ ಮನೆ ಮಗಳು ಸೌಜನ್ಯಾಗೆ ನ್ಯಾಯ ಸಿಗಲಾರದೇ ಎಂದು ಕೇಳಿದರು.
ದ್ವಾಪರಾದಲ್ಲಿ ಸೀತಾ ಮಾತೆ ಹೇಗೋ ಕಲಿಯುಗದಲ್ಲಿ ಸೌಜನ್ಯಾ ರೂಪದಲ್ಲಿ ದೇವಿ ಅವತರಿಸಿದ್ದಾಳೆ. ಸೌಜನ್ಯಾ ಬರೀಯ ಬಾಲಕಿಯಲ್ಲ ಆಕೆ ಶಕ್ತಿಯಾಗಿದ್ದಾಳೆ. ಇದರ ದೃಷ್ಟಾಂತ ಆಕೆಯ ನಡೆ ನುಡಿಗಳಲ್ಲಿ ಕಂಡಿತ್ತು. ಅಂದು ತನಗೆ ಎಕ್ಸಾಂ ಇದೆ, ಮಧ್ಯಾಹ್ನ ಹೊಸ ಅಕ್ಕಿ ಊಟ ಇದೆ, ಉಪವಾಸ ಇರ್ತೇನೆಂದು ಹೇಳಿ ಹೋದಾಕೆ ಸೌಜನ್ಯಾ.. ಆದರೆ ಖಾಲಿ ಹೊಟ್ಟೆಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಗ್ಯಾಂಗ್ ರೇಪ್ ಮಾಡಿ ತಿಂದು ಬಿಸಾಕಿದ್ರಲ್ಲಾ.. ಇವರನ್ನು ಮನುಷ್ಯರು ಅಂತಾರೆಯೇ.. ರಾಕ್ಷಸರು ಇವರೆಲ್ಲ. ಪೊಲೀಸರು, ಸಿಐಡಿ, ಸಿಬಿಐ ಅಧಿಕಾರಿಗಳೆಲ್ಲ ಇಂಥ ಭೀಕರ ಕೃತ್ಯವನ್ನು ತನಿಖೆಯ ನೆಪದಲ್ಲಿ ಮುಚ್ಚಿ ಹಾಕಿದ್ರಲ್ಲ.. ಸಿಬಿಐ, ಪೊಲೀಸ್ ಇಲಾಖೆಯಲ್ಲಿ ಒಳ್ಳೆಯವರೂ ಇದ್ದಾರೆ, ಆದರೆ ಈಗ ಕೆಟ್ಟವರು ಜಾಸ್ತಿ ಇದಾರೆ ಅನ್ನೋದು ವ್ಯವಸ್ಥೆಯ ದುರಂತ ಸ್ಥಿತಿ. ಕೃತ್ಯ ನಡೆಯೋದಕ್ಕೂ ಹತ್ತು ವರ್ಷಗಳ ಹಿಂದೆ ಮದುವೆಯಾಗಿ ಮಗು ಇರ್ತಿದ್ದರೆ ತನಿಖಾಧಿಕಾರಿ ಆಗಿದ್ದ ಯೋಗೀಶನಿಗೆ ಮಗಳ ಆರ್ತನಾದ ನೆನಪಾಗುತ್ತಿತ್ತು. ಈ ರೀತಿಯಾಗಿ ಕೇಸ್ ಮುಚ್ಚಿ ಹಾಕುತ್ತಿರಲಿಲ್ಲ. ಹಾಗಾಗಿ ಒಬ್ಬಳು ತಾಯಿಯ ನೋವು ಅರ್ಥವಾಗಲಿಲ್ಲ. ಹೆಗ್ಗಡೆ ಕುಟುಂಬ, ಯಾರೆಲ್ಲ ಇದರ ಹಿಂದಿದ್ದಾರೋ ಎಲ್ಲರನ್ನೂ ಬಚಾವ್ ಮಾಡಿ ಕೇಸ್ ಮುಚ್ಚಿ ಹಾಕಿದ್ದಾರೆ.
ಸಾಮಾಜಿಕ ನ್ಯಾಯ ಕೊಡಬೇಕೆಂದು ಜಾತಿ, ಪಂಥ ಎಂದು ನೋಡದೆ ನಾವು ಮುಂದಾಗಿದ್ದೇವೆ, ಮುಂದಿನ ಹೋರಾಟ ಹೀಗೇ ಇರುವುದಿಲ್ಲ. ಎಚ್ಚರಿಕೆ ಕೊಡುತ್ತಿದ್ದೇನೆ, ರಾಜಕೀಯ ಪಕ್ಷಗಳ ನಾಯಕರು ಎಲ್ಲರೂ ಒಂದೇ. ಆದರೆ ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕನ್ನು ಹೇಗೆ ನಿಮ್ಮಿಂದ ಕಸಿದುಕೊಳ್ಳಬೇಕೆಂದು ಗೊತ್ತಿದೆ, ಯಾರು ಮೆರೆಯುತ್ತಾರೋ ಅವರನ್ನು ಜುಟ್ಟು ಹಿಡಿದು ಅಧಿಕಾರದಿಂದ ಇಳಿಸೋಕೆ ಗೊತ್ತಿದೆ. ಅದಕ್ಕೆ ಆಸ್ಪದ ಕೊಡಬೇಡಿ.
ಸತ್ಯ, ನ್ಯಾಯದ ನೆಲೆಯಲ್ಲಿ ನ್ಯಾಯ ಕೇಳುತ್ತಿದ್ದೇವೆ. ತಲೆಗೆ ಮೂರು ಬಾರಿ ಸುತ್ತಿ ಹಾಕಿದ ದುಡ್ಡಿನಲ್ಲಿ ಏನು ಬೇಕಾದರೂ ಮಾಡುತ್ತೇವೆಂದರೆ ಈ ಕಾಲದಲ್ಲಿ ಮಾಡಲು ಆಗಲ್ಲ. ಹಿಂದೆ ಕೃಷ್ಣ ಹೇಳಿದ್ದಾನಲ್ಲಾ, ಯಾವಾಗ ಅಧರ್ಮ ತಾಂಡವ ಆಡುತ್ತೋ ಆಗ ಎದ್ದು ಬರುತ್ತೇನೆಂದು. ಇಷ್ಟೆಲ್ಲ ಜನರ ರೂಪದಲ್ಲಿ ಈಗ ಕೃಷ್ಣ ಎದ್ದು ಬಂದಿದ್ದಾನೆ. ನೀವೆಲ್ಲ ಹೋರಾಟಗಾರರ ರೂಪದಲ್ಲಿ ಎದ್ದು ನಿಂತಿದ್ದೀರಿ..
ಇವರೆಲ್ಲ ಯಾವಾಗ ಮುಗೀತಾರೋ ಗೊತ್ತಿಲ್ಲ !
ಗೃಹ ಮಂತ್ರಿಯೊಬ್ಬ ಸೌಜನ್ಯಾ ಪ್ರಕರಣ ಮುಗಿದ ಅಧ್ಯಾಯ ಅಂತಾರೆ, ಇವರೆಲ್ಲ ಯಾವಾಗ ಮುಗೀತಾರೆ ಅಂತ ಅವರಿಗೇ ಗೊತ್ತಿಲ್ಲ. ಹೋರಾಟ ಆಗ್ತಾ ಇರತ್ತೆ, ಮುಗಿಯತ್ತೆ ಎಂದು ನಗಣ್ಯ ಮಾಡುತ್ತಿದ್ದಾರೆ. ಒಂದು ದಿನ ನಿಮ್ಮ ಮನೆ ಬಾಗಿಲಿಗೆ ಮುತ್ತಿಗೆ ಹಾಕಿದರೆ ಗೊತ್ತಾಗಬಹುದು. ಒಂದ್ವೇಳೆ, ರಾಜಕೀಯ ನಾಯಕರ ಮನೆಯವರಿಗೆ ಈ ಸ್ಥಿತಿಯಾಗ್ತಿದ್ದರೆ ನೀವು ಖಾವಂದರನ್ನು ಹಾಗೇ ಬಿಡುತ್ತಿದ್ದಿರಾ.. ಈಗ ಪಾಪದ ಕುಟುಂಬದ ಮನೆ ಹುಡುಗಿಯೆಂದು ದಾರ್ಷ್ಟ್ಯವೇ.. ಸೌಜನ್ಯಾಗೆ ನ್ಯಾಯ ಸಿಗದೇ ಹೋದರೆ ಧರ್ಮಸ್ಥಳ ಪೀಠವೇ ನಾಶವಾಗಿ ಹೋಗಲಿದೆ. ಕೋಟಿ, ಕೋಟಿ ಜನರು ಕೇಳಿಯೂ ನ್ಯಾಯ ಸಿಗದೇ ಹೋದರೆ ಧರ್ಮಸ್ಥಳ ಉಳಿಯುತ್ತಾ..? ಸನಾತನ ಧರ್ಮದ ಜನರು ಹಳೆ ಕಾಲದಿಂದಲೂ ನಂಬಿಕೊಂಡು ಬಂದ ಧರ್ಮಸ್ಥಳಕ್ಕೆ ಅಂತಹ ಅಪಚಾರ ಆಗಬಾರದು. ಅದಕ್ಕಾಗಿ ಯಾರು ಕಾಮಾಂಧರು ಇದ್ದಾರೋ ಅವರನ್ನು ಜೈಲಿಗಟ್ಟುವ ಕೆಲಸ ಆಗಬೇಕು. ನಾಡಿದ್ದು ಸೆಪ್ಟೆಂಬರ್ 3ರಂದು ಬೆಳ್ತಂಗಡಿಯಲ್ಲಿ ಲಕ್ಷ ಲಕ್ಷ ಜನರು ಸೇರಲಿದ್ದಾರೆ. ಜನರ ಹಕ್ಕೊತ್ತಾಯ ಈ ದೇಶದ ಪ್ರಧಾನಿ, ಗೃಹ ಮಂತ್ರಿ, ರಾಜ್ಯದ ಎಲ್ಲ ಅಧಿಕಾರಿಗಳು, ನಾಯಕರ ಕಣ್ಣು ತೆರೆಸಬೇಕು. ಆ ರೀತಿಯಲ್ಲಿ ಜನರ ಅಬ್ಬರ ಕಾಣಿಸಬೇಕು ಎಂದು ಹೇಳಿ ಮಹೇಶ್ ಶೆಟ್ಟಿ ತಿಮರೋಡಿ ಕೈಮುಗಿದರು.
Massive protest demands justice in Sowjanya brutal rape, murder case at Kadri in Mangalore. The Sowjanya Horata Samiti Mangaluru organized a massive protest under the initiative of activist Prasanna Ravi, seeking justice for the brutal rape and murder of Sowjanya.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm