ಬ್ರೇಕಿಂಗ್ ನ್ಯೂಸ್
22-08-23 10:43 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 22: ಕಾರ್ಕಳ ತಾಲೂಕಿನ ಸಾಣೂರಿನಿಂದ ಮಂಗಳೂರು ವರೆಗಿನ 45 ಕಿಮೀ ಉದ್ದದ ಚತುಷ್ಪಥ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ ಆಗಿದೆ, ರೈತರಿಗೆ ಭೂಸ್ವಾಧೀನಕ್ಕೂ ಮೊದಲೇ ಪರಿಹಾರ ನೀಡಬೇಕೆಂದು ಹೈಕೋರ್ಟ್ ಆದೇಶ ಮಾಡಿದ್ದರೂ ಹೆದ್ದಾರಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೆದ್ದಾರಿಗೆ ಭೂಮಿ ಕಳಕೊಳ್ಳುತ್ತಿರುವ ರೈತರು ನಂತೂರಿನ ಹೆದ್ದಾರಿ ಪ್ರಾಧಿಕಾರದ ಕಚೇರಿಯ ಎದುರಲ್ಲಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ಮೈಸೂರು- ಬೆಂಗಳೂರು ನಡುವೆ 127 ಕಿಮೀ ಉದ್ದದ ರಸ್ತೆ ಕೇವಲ ಐದು ವರ್ಷದಲ್ಲಿ ಪೂರ್ಣಗೊಂಡಿದೆ. ಆದರೆ ಇಲ್ಲಿ ನೋಟಿಫಿಕೇಶನ್ ಆಗಿ ಏಳು ವರ್ಷವಾದರೂ 80 ಶೇಕಡಾ ಭಾಗದಲ್ಲಿ ಭೂಸ್ವಾಧೀನವೇ ಆಗಿಲ್ಲ. ಕೈಕಂಬ, ಗಂಜಿಮಠ, ಸಾಣೂರು ಪ್ರದೇಶದಲ್ಲಿ ಕೇವಲ ಸರಕಾರಿ ಜಾಗ ಇರುವಲ್ಲಿ ಮಾತ್ರ ಕಾಮಗಾರಿ ಆರಂಭಿಸಿದ್ದು, ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಕೆಲಸ ಆರಂಭಿಸಿದ್ದೇವೆಂದು ತೋರಿಸಿಕೊಂಡಿದ್ದಾರೆ. ಇದಕ್ಕೆಲ್ಲ ಇಲ್ಲಿನ ಶಾಸಕರು, ಸಂಸದರ ನಿರ್ಲಕ್ಷ್ಯವೇ ಕಾರಣ. ಸುನಿಲ್ ಕುಮಾರ್ ಮತ್ತು ನಳಿನ್ ಕುಮಾರ್ ತಮ್ಮ ಉತ್ತರ ಕುಮಾರನ ಪೌರುಷವನ್ನು ಭಾಷಣದಲ್ಲಿ ಮಾತ್ರ ತೋರಿಸಿದ್ದಾರೆ. ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿ ಆದೇಶ ಜನರ ಪರವಾಗಿ ಬಂದಿದ್ದರೂ, ಹೆದ್ದಾರಿ ಅಧಿಕಾರಿಗಳು ಆದೇಶ ಜಾರಿಗೊಳಿಸದೆ ವಂಚನೆ ನಡೆಸುತ್ತಿದ್ದಾರೆ ಎಂದು ಹೋರಾಟ ಸಮಿತಿಯ ಮುಖಂಡ ಬೃಜೇಶ್ ಶೆಟ್ಟಿ ಮಿಜಾರು ದೂರಿದ್ದಾರೆ.
ನಕ್ಷೆಯನ್ನೇ ಬದಲಿಸಿದ್ದ ಮಾಫಿಯಾಗಳು
ಯಾವುದೇ ಹೆದ್ದಾರಿ ಚತುಷ್ಪಥ ಆಗುವ ಸಂದರ್ಭದಲ್ಲಿ ರಸ್ತೆ ನೇರಗೊಂಡು ಅಂತರ ಕಡಿಮೆಗೊಳ್ಳಬೇಕು. ಆದರೆ ಮಂಗಳೂರು- ಮೂಡುಬಿದ್ರೆ- ಕಾರ್ಕಳದ ರಸ್ತೆ ಪೂರ್ಣಗೊಳ್ಳುವಾಗ 5 ಕಿಮೀ ಹೆಚ್ಚುವರಿ ಉದ್ದ ಆಗಲಿದೆ. ಪೊಳಲಿ, ಅಡ್ಡೂರು ಪ್ರದೇಶದಲ್ಲಿ ಭೂಮಾಫಿಯಾಗಳ ತೆಗೆದಿಟ್ಟ ಭೂಮಿಗೆ ದುಪ್ಪಟ್ಟು ದರ ಬರುವುದಕ್ಕಾಗಿ ಆ ಭಾಗದಲ್ಲಿ ರಸ್ತೆ ಹೋಗುವಂತೆ ನಕ್ಷೆಯನ್ನೇ ಬದಲಿಸಿದ್ದಾರೆ. ಗುರುಪುರದಲ್ಲಿ ಎರಡು ವರ್ಷಗಳ ಹಿಂದೆ ಹೊಸತಾಗಿ ಸೇತುವೆ ಮಾಡಿದ್ದರೂ, ಅದನ್ನು ಬಿಟ್ಟು ಪಕ್ಕದಲ್ಲೇ ಮತ್ತೊಂದು ಸೇತುವೆ ಮಾಡುತ್ತಿದ್ದಾರೆ. ಪ್ರತಿ ಒಂದು ಕಿಮೀ ಉದ್ದದ ರಸ್ತೆಗೆ ತಲಾ 30 ಕೋಟಿ ರೂ. ಸುರಿಯುತ್ತಿದ್ದು, ಐದು ಕಿಮೀ ಹೆಚ್ಚುವರಿ ಉದ್ದವಾದರೆ ಅದರ ಭಾರವನ್ನು ಜನರ ಮೇಲೇ ಹೊರಿಸುತ್ತಾರೆ.
ಗುರುಪುರ ಪೇಟೆಯ ಬದಲು ಪೊಳಲಿ, ಅಡ್ಡೂರು ಮೂಲಕ ರಸ್ತೆ ಹೋಗುವುದರಿಂದ ಮಂಗಳೂರು- ಮೂಡುಬಿದ್ರೆ ನಡುವಿನ ಅಂತರವೇ ನಾಲ್ಕು ಕಿಮೀ ಹೆಚ್ಚಲಿದೆ. ಇಷ್ಟೆಲ್ಲ ಅಧ್ವಾನ, ಅವಾಂತರ ಮಾಡಿಕೊಂಡು ಭೂಮಿ ಕಳಕೊಳ್ಳುವ ರೈತರಿಗೆ ಪರಿಹಾರವನ್ನೂ ನೀಡದೆ ಜನರ ಕಣ್ಣಿಗೆ ಮಣ್ಣೆರಚಿ ಹೆದ್ದಾರಿ ಮಾಡುತ್ತಿದ್ದಾರೆ. ಇದಕ್ಕೆಲ್ಲ ಭೂಸ್ವಾಧೀನಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಇಲ್ಲಿನ ಸಂಸದ ನಳಿನ್ ಕುಮಾರ್ ಕಾರಣ. ಸಂಸದರ ಬಳಿ ಪ್ರತಿ ಬಾರಿ ಹೋಗಿ ಗೋಗರೆದರೂ ನಿರ್ಲಕ್ಷ್ಯ ಮಾಡಿದ್ದು, ಜನರ ಪರವಾಗಿ ನಿಲ್ಲುವುದಕ್ಕೆ ನಿರಾಕರಿಸಿದ್ದಾರೆ. ಇಂತಹ ವ್ಯಕ್ತಿ ಸಂಸದರಾಗಿ ನಮ್ಮನ್ನು ಯಾಕೆ ಪ್ರತಿನಿಧಿಸಬೇಕು ಎಂದು ಕುಲಶೇಖರದಲ್ಲಿ ಭೂಮಿ ಕಳಕೊಳ್ಳುವ ವಕೀಲರೂ ಆಗಿರುವ ಮರಿಯಮ್ಮ ಥೋಮಸ್ ಪ್ರಶ್ನೆ ಮಾಡಿದ್ದಾರೆ.
ಆಗಸ್ಟ್ 22ರಿಂದ 29ರ ವರೆಗೆ ಪ್ರತಿ ದಿನವೂ ಬೆಳಗ್ಗಿನಿಂದ ಸಂಜೆಯ ವರೆಗೆ ಪ್ರತಿಭಟನಾ ಧರಣಿ ನಡೆಯಲಿದ್ದು, ಅಧಿಕಾರಿಗಳು ಬಗ್ಗದೇ ಇದ್ದರೆ ಅನಿರ್ದಿಷ್ಟ ಧರಣಿ ನಡೆಸುವುದಾಗಿ ಹೋರಾಟ ಸಮಿತಿಯ ವಿಶ್ವಜಿತ್ ತಿಳಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ನಿವೃತ್ತ ಶಿಕ್ಷಕರೂ ಆಗಿರುವ ಮಿಜಾರು ನಿವಾಸಿ 100 ವರ್ಷ ಪ್ರಾಯದ ಸೀತಾರಾಮ ಶೆಟ್ಟಿ ಆಗಮಿಸಿದ್ದರು. ಇದೇ ಆಗಸ್ಟ್ 20ಕ್ಕೆ ನೂರು ವರ್ಷ ಪೂರೈಸಿದ್ದ ಸೀತಾರಾಮ ಶೆಟ್ಟಿಯವರ ಶತ ಸಂಭ್ರಮವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಆಚರಿಸಲಾಗಿತ್ತು. ಇಳಿ ವಯಸ್ಸಿನಲ್ಲೂ ಇವರು ಕಳೆದ ಮೂರು ವರ್ಷಗಳಲ್ಲಿ ಐದು ಬಾರಿ ಭೂಸ್ವಾಧೀನಾಧಿಕಾರಿ ಮತ್ತು ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಆದರೆ, ತಮ್ಮ ಭೂಮಿಗೆ ಪರಿಹಾರ ಸಿಗದ ಕಾರಣ ಮಂಗಳವಾರದ ಪ್ರತಿಭಟನಾ ಸ್ಥಳಕ್ಕೆ ಬಂದು ಒಂದಷ್ಟು ಹೊತ್ತು ಕುಳಿತು ನಿರ್ಗಮಿಸಿದ್ದಾರೆ.
Farmers who are losing their land for the highway have staged a sit-in protest in front of the Highways Authority of India (NHAI) office in Nanthur, alleging that there is rampant corruption in the km-long four-laning work from Sanur to Mangaluru in Karkala taluk and the highway authorities have neglected the high court's order to pay compensation to the farmers before acquiring land.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm