ಬ್ರೇಕಿಂಗ್ ನ್ಯೂಸ್
06-10-23 03:46 pm Mangalore Correspondent ಕರಾವಳಿ
ಮಂಗಳೂರು, ಅ.6: ಮೂಡುಬಿದ್ರೆ ತಾಲೂಕಿನ ಪುಚ್ಚಮೊಗರಿನಲ್ಲಿ ಹಿಂದುಗಳಿಗೆ ಸೇರಿದ ಕಟ್ಟೆಯಲ್ಲಿ ಈದ್ ಮಿಲಾದ್ ಹೆಸರಲ್ಲಿ ಹಸಿರು ಬಾವುಟ ಕಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಸ್ಥಳೀಯರ ದೂರಿನಂತೆ ಸ್ಥಳಕ್ಕೆ ಬಂದ ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಪಿಜಿ, ಹೊಸಬೆಟ್ಟು ಗ್ರಾಮ ಪಂಚಾಯತ್ ಪಿಡಿಓ ಅಧಿಕಾರಿಯನ್ನೇ ತರಾಟೆಗೆತ್ತಿಕೊಂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಸೆ.30ರಂದು ಈದ್ ಮಿಲಾದ್ ಹೆಸರಲ್ಲಿ ಸ್ಥಳೀಯ ಮುಸ್ಲಿಮರು ಮೆರವಣಿಗೆ ನಡೆಸಿದ್ದರು. ಈ ಸಂದರ್ಭದಲ್ಲಿ ಗಣಪತಿ ಕಟ್ಟೆ ಎಂದು ಕರೆಯಲಾಗುವ ಮರದ ಕಟ್ಟೆಯಲ್ಲಿ ಟೈಯರ್ ಗೆ ಹಸಿರು ಬಣ್ಣ ಬಳಿದು ಹಸಿರು ಬಾವುಟವನ್ನು ನೆಟ್ಟಿದ್ದರು. ಆದರೆ ಈ ವಿಚಾರದಲ್ಲಿ ಸ್ಥಳೀಯವಾಗಿ ಆಕ್ಷೇಪ ಬಂದಿರಲಿಲ್ಲ. ಸಂಜೆ ವೇಳೆಗೆ ತೆಗೆಯಬಹುದು ಎಂದು ಪರಿಸರದ ನಿವಾಸಿಗಳು ಅಂದುಕೊಂಡಿದ್ದರು. ಬಾವುಟ ತೆರವು ಮಾಡದ ಹಿನ್ನೆಲೆಯಲ್ಲಿ ಸ್ಥಳೀಯ ಹೊಸಬೆಟ್ಟು ಪಂಚಾಯತ್ ಪಿಡಿಓ ಶೇಖರ್ ಅವರಲ್ಲಿ ದೂರು ನೀಡಿದ್ದರು.
ಪಂಚಾಯತ್ ಪಿಡಿಓ ನಿರ್ಲಕ್ಷ್ಯ ವಹಿಸಿದ್ದು, ಬಾವುಟ ತೆರವು ಮಾಡಲು ಮುಂದಾಗಿರಲಿಲ್ಲ. ಹೀಗಾಗಿ ಸ್ಥಳೀಯರು ಮೂಡುಬಿದ್ರೆ ಪೊಲೀಸರ ಗಮನಕ್ಕೆ ತಂದಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿಜಿ, ಪಿಡಿಓ ಅಧಿಕಾರಿಯನ್ನು ಸ್ಥಳಕ್ಕೆ ಕರೆದು ತರಾಟೆಗೆತ್ತಿಕೊಂಡಿದ್ದಾರೆ. ಇದಕ್ಕೆ ಪರ್ಮಿಶನ್ ತೆಗೆದುಕೊಂಡಿದ್ದಾರೆಯೇ,.. ಪರ್ಮಿಶನ್ ಇಲ್ಲದೆ ಬಾವುಟ ಹಾಕಲು ಅವಕಾಶ ನೀಡಿದ್ದು ಯಾಕೆ.. ನಿನಗೆ ನಿನ್ನ ಕೆಲಸ ಗೊತ್ತಿಲ್ಲ. ಅಧಿಕಾರ ವ್ಯಾಪ್ತಿ ತಿಳಿದಿಲ್ಲ. ಅದು ತಿಳಿಯದೆ ಯಾಕೆ ಪಿಡಿಓ ಆಗಿದ್ದೀಯಾ ಎಂದು ಜೋರು ಮಾಡಿದ್ದಾರೆ. ಅಧಿಕಾರಿಯನ್ನು ಸಾರ್ವಜನಿಕರ ನಡುವಲ್ಲೇ ತೀವ್ರ ತರಾಟೆಗೆತ್ತಿಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಮಾತುಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಅಧಿಕಾರಿಯ ನಡೆ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಸರಕಾರಿ ಅಧಿಕಾರಿಯಾಗಿದ್ದು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಈ ರೀತಿ ಆಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
#Mangalore #Muslim Green flag on #Ganapati Katta at #Moodbidre, #Police inspector #sandesh shouting at #PDO video goes viral #breakingnews pic.twitter.com/mnebQj0m9j
— Headline Karnataka (@hknewsonline) October 6, 2023
Mangalore Muslim Green flag on Ganapati Katta at Moodbidre, inspector sandesh shouting at PDO video goes viral.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm