ಬ್ರೇಕಿಂಗ್ ನ್ಯೂಸ್
30-11-23 04:43 pm Mangalore Correspondent ಕರಾವಳಿ
ಮಂಗಳೂರು, ನ.30: ಟಿಪ್ಪು ಆಳ್ವಿಕೆಯ ಕಾಲದಲ್ಲಿ ಕರಾವಳಿಯಲ್ಲಿ ಭಾರೀ ಅತ್ಯಾಚಾರ, ಅನಾಚಾರ ನಡೆದಿತ್ತು. ಕ್ರೈಸ್ತರು ಬ್ರಿಟಿಷರಿಗೆ ಬೆಂಬಲಿಸುತ್ತಾರೆಂದು ಅವರನ್ನು ಹುಡುಕಿ ಹುಡುಕಿ ಟಿಪ್ಪು ಸೈನಿಕರು ಕೊಲ್ಲತೊಡಗಿದ್ದರು. ಮಂಗಳೂರಿನಲ್ಲಿ ಸೆರೆಸಿಕ್ಕ ಯುವಕರನ್ನು ನಡೆಸಿಕೊಂಡೇ ಸುಳ್ಯ, ಕೊಡಗಿನ ಮೂಲಕ ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದರು. ಕ್ರೈಸ್ತರ ಚರ್ಚ್, ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾಗಲೇ ಕಿನ್ನಿಗೋಳಿಯಲ್ಲಿ ಸ್ಥಳೀಯ ಬಂಟ ಕುಟುಂಬಸ್ಥರು ತಮ್ಮ ಆಸುಪಾಸಿನ ಕ್ರೈಸ್ತರ ರಕ್ಷಣೆಗೆ ಮುಂದಾಗಿದ್ದರು. ಕ್ರೈಸ್ತ ಮಹಿಳೆಯರು, ಮಕ್ಕಳನ್ನು ತಮ್ಮ ಮನೆಯಲ್ಲೇ ಇರಿಸಿ ಟಿಪ್ಪು ಸೈನಿಕರ ಅತ್ಯಾಚಾರದಿಂದ ಪಾರು ಮಾಡಿದ್ದರು. 240 ವರ್ಷಗಳ ಹಿಂದಿನ ಉಪಕಾರ ಸ್ಮರಣೆಯನ್ನು ಕ್ರೈಸ್ತರು ಇಂದಿಗೂ ಸಂಪ್ರದಾಯ ಎನ್ನುವಂತೆ ನಡೆಸಿಕೊಂಡು ಬಂದಿದ್ದಾರೆ.
ಕಿನ್ನಿಗೋಳಿಯ ದಾಮಸ್ ಕಟ್ಟೆಯ ಕೀರಂ ಚರ್ಚ್ ನಲ್ಲಿ ವಾರ್ಷಿಕ ಹಬ್ಬದಲ್ಲಿ ಸ್ಥಳೀಯ ಮೂರು ಬಂಟ ಮನೆತನಗಳಿಗೆ ವಿಶೇಷ ಗೌರವ ಸಲ್ಲಿಸುತ್ತಾರೆ. ಟಿಪ್ಪು ದಾಳಿಯ ಸಂದರ್ಭದಲ್ಲಿ ತಮ್ಮನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಕ್ಕಾಗಿ ಬಂಟರನ್ನು ಆಹ್ವಾನಿಸಿ ಗೌರವಿಸುತ್ತಾರೆ. 240 ವರ್ಷಗಳಿಂದಲೂ ಕೀರಂ ಚರ್ಚ್ ನಲ್ಲಿ ಈ ರೀತಿಯ ಸಂಪ್ರದಾಯ ನಡೆದುಕೊಂಡು ಬಂದಿದ್ದು ಈ ಬಾರಿಯೂ ಚರ್ಚ್ ನಲ್ಲಿ ಮೂರು ಗುತ್ತಿನ ಕುಟುಂಬಗಳ ಹಿರಿಯರನ್ನು ಕರೆದು ಗೌರವಿಸಲಾಗಿದೆ. ಐಕಳ ಬಾವ, ತಾಳಿಪಾಡಿ ಗುತ್ತು, ಏಳಿಂಜೆ ಅಂಗಡಿಗುತ್ತು ಮನೆತನದ ಹಿರಿಯರಿಗೆ ವೀಳ್ಯದೆಲೆ, ಅಡಿಕೆ ಮತ್ತು ಒಂದು ಬಾಳೆಗೊನೆಯನ್ನು ನೀಡಿ ಗೌರವಿಸಲಾಗಿದೆ. 240 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿ ಕ್ರೈಸ್ತರು ಉಪಕಾರ ಸ್ಮರಣೆಯನ್ನು ಮಾಡುತ್ತಿರುವುದನ್ನು ಸಂಪ್ರದಾಯ, ವಾಡಿಕೆ ಎನ್ನುವಂತೆ ನಡೆಸುತ್ತಿದ್ದಾರೆ.
1784ರ ಫೆ.24ರಂದು ಕಿನ್ನಿಗೋಳಿಯ ಕ್ರೈಸ್ತರನ್ನು ಸದೆಬಡಿಯಲೇಬೇಕೆಂದು ನಿರ್ಧರಿಸಿ ಚರ್ಚ್ ಮತ್ತು ಕ್ರೈಸ್ತರನ್ನು ಗುರಿಯಾಗಿಸಿ ಟಿಪ್ಪು ಸೈನಿಕರು ದಾಳಿ ನಡೆಸಿದ್ದರು. ಅಂದು ಕಿನ್ನಿಗೋಳಿಯ ಕೀರಂ ಚರ್ಚ್ ಆವರಣದಲ್ಲಿ ಟಿಪ್ಪು ಸೈನಿಕರು ಸುತ್ತುವರಿದಿದ್ದರು. ಕ್ರೈಸ್ತರನ್ನು ಹಿಡಿದು ಕೊಲ್ಲುವುದು, ಮಕ್ಕಳು, ಮಹಿಳೆಯರನ್ನು ವಶಕ್ಕೆ ಪಡೆದು ತಮ್ಮ ಸ್ವಾಧೀನದಲ್ಲಿ ಇರಿಸಿ ಕಿರುಕುಳ ನೀಡುತ್ತಿದ್ದರು. ಇದೇ ವೇಳೆ, ಕಿನ್ನಿಗೋಳಿಯ ಆಸುಪಾಸಿನಲ್ಲಿದ್ದ ಬಂಟ ಮನೆತನದ ಕುಟುಂಬಸ್ಥರು ಕ್ರೈಸ್ತ ಮಕ್ಕಳು ಮತ್ತು ಮಹಿಳೆಯರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಮಕ್ಕಳಿಗೆ ಬಂಟ ಸಂಪ್ರದಾಯದ ರೀತಿಯಲ್ಲಿ ಕಿವಿಗೆ ಓಲೆ ತೊಡಿಸಿದರೆ, ಮಹಿಳೆಯರಿಗೆ ಕೈ ಬಳೆ, ಕೊರಳಿಗೆ ಚಿನ್ನದ ಆಭರಣಗಳನ್ನು ಹಾಕಿ ತಮ್ಮದೇ ಮನೆಯವರಂತೆ ಬಿಂಬಿಸಿದ್ದರು. ಟಿಪ್ಪು ಸೈನಿಕರು ಹುಡುಕಿ ಬಂದರೂ, ಇವರೆಲ್ಲ ತಮ್ಮದೇ ಮನೆ ಸದಸ್ಯರು ಅನ್ನುವಂತೆ ಬಿಂಬಿಸಿ ಅವರನ್ನು ರಕ್ಷಣೆ ಮಾಡಿದ್ದರು.
ಹಲವು ವರ್ಷಗಳ ಕಾಲ ಕ್ರೈಸ್ತರನ್ನು ಜತನದಲ್ಲಿ ರಕ್ಷಿಸಿದ್ದ ಬಂಟ ಕುಟುಂಬಸ್ಥರಿಗೆ ಇಂದಿಗೂ ಕ್ರೈಸ್ತರು ಕೃತಜ್ಞತೆ ತೋರಿಸುತ್ತಿದ್ದಾರೆ. ಟಿಪ್ಪು ಕೊನೆಗೆ 1799ರಲ್ಲಿ ಶ್ರೀರಂಗಪಟ್ಟಣದಲ್ಲಿ ಮಡಿದ ನಂತರ, ಅಲ್ಲಿವರೆಗೂ ಬಂಧಿಯಾಗಿದ್ದ ಕ್ರೈಸ್ತರು ಬಿಡುಗಡೆಗೊಂಡು ಮರಳಿ ತಮ್ಮ ಊರಿಗೆ ಬಂದಿದ್ದರು. ಕಿನ್ನಿಗೋಳಿಯ ಕೀರಂ ಚರ್ಚ್ ನಲ್ಲಿ ಮತ್ತೆ ಪೂಜೆಗಳನ್ನು ಮಾಡತೊಡಗಿದ್ದರು. ಬಂಟರ ಮನೆಗಳಲ್ಲಿದ್ದ ತಮ್ಮ ಮಕ್ಕಳು, ಮಹಿಳೆಯರನ್ನು ಕರೆತಂದು ತಮ್ಮದೇ ಮನೆಯಲ್ಲಿ ನೆಲೆಸಿದ್ದರು. 240 ವರ್ಷಗಳ ಹಿಂದೆ ಮಾಡಿದ್ದ ಉಪಕಾರಕ್ಕೆ ಪ್ರತಿಯಾಗಿ ಐದಾರು ತಲೆಮಾರಿನ ಬಳಿಕವೂ ಕ್ರೈಸ್ತರು ತಮ್ಮ ಚರ್ಚ್ ನಲ್ಲಿ ಸ್ಮರಿಸಿ, ಬಂಟ ಮನೆತನಕ್ಕೆ ಗೌರವ ಸಲ್ಲಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಬಂಟರು ತಮ್ಮ ಮನೆಗಳಲ್ಲಿ ನಡೆಯುವ ವಾರ್ಷಿಕ ದೈವಾರಾಧನೆಗೂ ಕ್ರೈಸ್ತರನ್ನು ಕರೆದು ಮನ್ನಣೆ ನೀಡುತ್ತಾರೆ. ಕೊಡು ಕೊಳ್ಳುವಿಕೆ ನೆಲೆಯಲ್ಲಿ ನಡೆಯುವ ಈ ರೀತಿಯ ಸೌಹಾರ್ದ ವಾತಾವರಣ ಕಿನ್ನಿಗೋಳಿಯಲ್ಲಿ ಪ್ರತಿ ವರ್ಷ ನಡೆದು ಬಂದಿರುವುದು ವಿಶೇಷ.
Catholics from Our Lady of Remedies Church Kirem felicitate Hindu families who protected them from Tipu attack. The members of the Bunt communities who protected the Catholic families during the invasion of Tipu's army were felicitated on the occasion. In a tradition, that is being followed from decades, , Catholics of the district of Dakshina Kannada felicitate members of three Hindu families and show their gratitude for having protected them during the attack from Tipu Sultan. This tradition is being held at Damaskatte, Kinnigoli near here every year.
11-10-24 03:02 pm
Bangalore Correspondent
Bangalore crime, Sandhya Pavitra Nagaraj, P M...
10-10-24 10:57 pm
Mandya Lottery, Kerala; ಮಂಡ್ಯದ ಗ್ಯಾರೇಜ್ ಮೆಕ್ಯ...
10-10-24 08:19 pm
Congress MLA Vinay Kulkarni, rape, Power TV:...
09-10-24 09:47 pm
MLA Munirathna honey trap case, blackmail: ಇಬ...
09-10-24 04:47 pm
11-10-24 09:59 pm
HK News Desk
ಅಖಂಡ ಭಾರತದ 51 ಶಕ್ತಿಪೀಠಗಳಲ್ಲಿ ಒಂದೆನಿಸಿರುವ ಬಾಂಗ...
11-10-24 06:23 pm
ರತನ್ ಟಾಟಾಗೆ ಇಳಿವಯಸ್ಸಿನಲ್ಲಿ ಒಂಟಿತನ ನೀಗಿಸಿದ್ದ 3...
11-10-24 04:47 pm
Noel Tata, Ratan Tata: ಟಾಟಾ ಸಾಮ್ರಾಜ್ಯಕ್ಕೆ ಹೊಸ...
11-10-24 03:35 pm
Ratan Tata Death; ನೂರಕ್ಕೂ ಹೆಚ್ಚು ದೇಶಗಳಲ್ಲಿ 30...
10-10-24 01:00 pm
11-10-24 09:54 pm
Mangalore Correspondent
Illegal migrant arrested, Mangalore: ಮಂಗಳೂರು...
11-10-24 09:43 pm
Rain Mangalore, Karnataka: ಅರಬ್ಬಿ ಸಮುದ್ರದಲ್ಲಿ...
11-10-24 08:06 pm
Pili Nalike 2024, Mangalore: ಅ.12ರಂದು ಮಿಥುನ್...
11-10-24 11:46 am
Mangalore University, Tulu: ತುಳು ಎಂಎ ಪದವಿಗೆ ಶ...
10-10-24 11:19 pm
10-10-24 03:30 pm
Mangaluru Correspondent
ಬರೋಬ್ಬರಿ ಆರು ಕೋಟಿ ಮೌಲ್ಯದ ಆರೂವರೆ ಕೇಜಿ ಎಂಡಿಎಂಎ...
07-10-24 04:25 pm
Kundapura, Bangalore crime: 27 ವರ್ಷದ ಕುಂದಾಪುರ...
06-10-24 09:43 pm
Udupi, Online Fraud, Kota Srinivas Poojary: ಸ...
06-10-24 08:40 pm
Mangalore crime, Alwyn DSouza, Catholic Sabha...
05-10-24 08:26 pm