ಬ್ರೇಕಿಂಗ್ ನ್ಯೂಸ್
06-01-24 03:40 pm Mangalore Correspondent ಕರಾವಳಿ
ಮಂಗಳೂರು, ಜ.6: ಕಾಂತಾರ ಚಿತ್ರದ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗುರುಪುರ ವಜ್ರದೇಹಿ ಮಠದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಆಗಮಿಸಿದ್ದು, ಮೈಸಂದಾಯ ಮತ್ತು ಅಣ್ಣಪ್ಪ ಪಂಜುರ್ಲಿ ದೈವದ ಕೋಲದಲ್ಲಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ 12 ವೇಳೆಗೆ ಮೈಸಂದಾಯ ದೈವದ ಕೋಲ ನಡೆದಿದ್ದು, ಆ ಸಂದರ್ಭದಲ್ಲಿ ಗುರುಪುರ ಮಠದ ವಜ್ರದೇಹಿ ಸ್ವಾಮೀಜಿ ಜೊತೆಗೆ ಕಾಂತಾರ ಎರಡನೇ ಭಾಗದ ಚಿತ್ರೀಕರಣದ ಸಲುವಾಗಿ ದೈವದ ಅನುವು ಕೇಳಿದ್ದಾರೆ. ದೈವವು ರಿಷಬ್ ಶೆಟ್ಟಿ ಕೇಳಿಕೊಂಡ ಮಾತಿಗೆ ಅನುವು ನೀಡಿದಂತೆ ಬೆನ್ನು ತಟ್ಟಿ ಆಶೀರ್ವದಿಸಿದ ವಿಡಿಯೋ ವೈರಲ್ ಆಗಿದೆ. ಹೀಗಾಗಿ ದೈವ ಕಾಂತಾರದ ಚಿತ್ರಕ್ಕಾಗಿ ಅಭಯ ನೀಡಿದೆಯೆಂದು ಹೇಳಲಾಗುತ್ತಿದೆ.


ಆನಂತರ, ನಸುಕಿನ ವೇಳೆಗೆ ಅಣ್ಣಪ್ಪ ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿಯೂ ರಿಷಬ್ ಶೆಟ್ಟಿ ಬಂದು ದೈವದಲ್ಲಿ ಕಾಂತಾರದ ಚಿತ್ರಕ್ಕಾಗಿ ಬೇಡಿಕೊಂಡಿದ್ದಾರೆ. ಕಾಂತಾರ ಚಿತ್ರದ ಎರಡನೇ ಭಾಗದ ಚಿತ್ರೀಕರಣದಲ್ಲಿ ಬಿಝಿಯಾಗಿರುವ ರಿಷಬ್ ಶೆಟ್ಟಿ ಅದರ ನಡುವಲ್ಲೇ ಕೋಲಕ್ಕೆ ಬಂದು ಬೇಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದ ಕಾರಣದಿಂದಲೇ ದೈವಾರಾಧನಗೆ ಅಪಚಾರ ಆಗಿದೆಯೆಂದು ಜಾಲತಾಣದಲ್ಲಿ ಟೀಕೆ ಬಂದಿತ್ತು. ಬೆಂಗಳೂರು, ಮಂಡ್ಯದಲ್ಲಿ ದೈವದ ಆವೇಶ, ಕೊರಗಜ್ಜನ ಕೋಲದಲ್ಲಿ ವಿಕೃತ ನಡವಳಿಕೆಯ ವಿಡಿಯೋ ವೈರಲ್ ಆಗಿದ್ದಕ್ಕೆ ದೈವಾರಾಧಕರು ಭಾರೀ ಟೀಕೆಯನ್ನೂ ಮಾಡಿದ್ದರು. ಇದೆಲ್ಲ ಕಾಂತಾರ ಚಿತ್ರದ ಬಳಿಕವೇ ಆಗಿರುವುದು ಎನ್ನುವ ಟೀಕೆ ವ್ಯಕ್ತವಾಗಿತ್ತು.
ಎರಡನೇ ಭಾಗದಲ್ಲಿ ದೈವದ ಕುರಿತಾಗಿ ಸಿನಿಮಾ ಮಾಡಬಾರದೆಂದು ರಿಷಬ್ ಶೆಟ್ಟಿ ಬಗ್ಗೆ ಟೀಕೆಯನ್ನೂ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಕೋಲದ ಸಂದರ್ಭದಲ್ಲಿ ಬಂದು ಸಿನಿಮಾ ಚಿತ್ರೀಕರಣಕ್ಕಾಗಿ ಬೇಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾವ ರೀತಿಯ ಬೇಡಿಕೆಯನ್ನು ದೈವದ ಮುಂದಿರಿಸಿದ್ದರು, ದೈವ ಯಾವ ರೀತಿಯ ಆಶೀರ್ವಾದ ನೀಡಿದೆ ಎನ್ನುವ ಬಗ್ಗೆ ತಿಳಿಯಲು ಗುರುಪುರ ಸ್ವಾಮೀಜಿ ಸಂಪರ್ಕಕ್ಕೆ ಸಿಕ್ಕಿಲ್ಲ.
Kantara actor Rishab Shetty visits Gurupura Math Rajashekharananda swamiji in Mangalore.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm