ಬ್ರೇಕಿಂಗ್ ನ್ಯೂಸ್
06-08-26 02:19 pm HK News Staffer ಕರ್ನಾಟಕ
ಕಲಬುರಗಿ, ಆ. 6: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯಲ್ಲಿ ಸುಮಾರು 5.36 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದ್ದು, ಮುಂದಿನ ಚುನಾವಣೆಗಳ ಮೇಲೆ ಇದರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 2026ರ ಜೂನ್ 16ರ ವೇಳೆಗೆ ಒಟ್ಟು 23,71,542 ನೋಂದಾಯಿತ ಮತದಾರರು ಇದ್ದರು. ಇದೀಗ ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ನಡೆದ ಡಿಜಿಟೈಸೇಷನ್‌ನಲ್ಲಿ 'ಯೂನಿಫೈಡ್ ಎಲೆಕ್ಟೋರಲ್ ರೋಲ್ ಫಾರ್ಮ್ಯಾಟ್' ಅಡಿಯಲ್ಲಿ ಗುರುತಿಸಲಾದ 5,36,179 ಮತದಾರರನ್ನು ‘ಮಿಸ್ಸಿಂಗ್’ ವರ್ಗದಲ್ಲಿ ಸೇರಿಸಲಾಗಿದೆ.
ಈ ಸಂಖ್ಯೆ ಒಟ್ಟು ಮತದಾರರ ಪೈಕಿ ಸುಮಾರು ಶೇ.22ರಷ್ಟಾಗಿದೆ. ಅಂದರೆ ಜಿಲ್ಲೆಯ ಪ್ರತಿ ನಾಲ್ಕರಿಂದ ಐದು ಮತದಾರರಲ್ಲಿ ಒಬ್ಬರ ಹೆಸರು ಅಂತಿಮ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
18.35 ಲಕ್ಷ ಮತದಾರರ ಮಾಹಿತಿ ಡಿಜಿಟಲೀಕರಣ;
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇದುವರೆಗೆ 18,35,363 ಮತದಾರರಿಂದ ಎನ್ಯುಮರೇಷನ್ ಫಾರಂ ಪಡೆದು ಡಿಜಿಟೈಸೇಷನ್ ಪೂರ್ಣಗೊಳಿಸಲಾಗಿದೆ. ಆದರೆ 5.36 ಲಕ್ಷ ಮತದಾರರ ಮಾಹಿತಿ ಪತ್ತೆಯಾಗದಿರುವುದು ಅಧಿಕಾರಿಗಳಿಗೆ ಸವಾಲಾಗಿದೆ.
ಜಿಲ್ಲೆಯ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರು ಕೈಬಿಡುವ ಪ್ರಮಾಣ ಹೆಚ್ಚಾಗಿದೆ.
ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ:
ಒಟ್ಟು ಮತದಾರರು: 2,97,785 | ಮಿಸ್ಸಿಂಗ್: 1,07,718 | ಪ್ರಮಾಣ: ಶೇ.36.17
ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ:
ಒಟ್ಟು ಮತದಾರರು: 3,35,254 | ಮಿಸ್ಸಿಂಗ್ ಮತದಾರರು: 1,10,349 | ಪ್ರಮಾಣ: ಶೇ.32.92
ಈ ಎರಡೂ ಕ್ಷೇತ್ರಗಳಲ್ಲೇ ಜಿಲ್ಲೆಯ ಒಟ್ಟು ‘ಮಿಸ್ಸಿಂಗ್’ ಮತದಾರರ ಪೈಕಿ ಸುಮಾರು ಶೇ.40ರಷ್ಟು ಪ್ರಮಾಣ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕೆಲ ಅಧಿಕಾರಿಗಳ ಪ್ರಕಾರ, ಗ್ರಾಮೀಣ ಪ್ರದೇಶದ ಹಲವು ಜನರು ತಮ್ಮ ಮೂಲ ಗ್ರಾಮಗಳಲ್ಲೇ ಮತದಾರರಾಗಿ ಉಳಿಸಿಕೊಂಡಿರುವುದು ಹಾಗೂ ಬೇರೆಡೆ ವಾಸವಾಗಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಹೆಸರು ಪರಿಶೀಲಿಸುವಂತೆ ಅಧಿಕಾರಿಗಳ ಮನವಿ;
ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಪ್ರತಿಯೊಬ್ಬ ನಿವಾಸಿಯೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ನೀಡಲಾಗಿರುವ ಎನ್ಯುಮರೇಷನ್ ಫಾರಂ ಅನ್ನು ಭರ್ತಿ ಮಾಡಿ ಎರಡು ದಿನಗಳೊಳಗೆ ಸಮೀಪದ ಬಿಎಲ್‌ಒ ಅವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಮತದಾರರ ಪಟ್ಟಿಯ ಅಂತಿಮ ಪರಿಷ್ಕರಣೆಗೂ ಮುನ್ನ 5.36 ಲಕ್ಷ ಮತದಾರರ ಹೆಸರುಗಳ ವಿಚಾರ ಇದೀಗ ಜಿಲ್ಲೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.
06-10-26 06:17 pm
HK News Staffer
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
06-10-26 09:21 pm
HK News Staffer
Sudhir Kumar Murolli: ಎಸ್‌ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್‌ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm