ಬ್ರೇಕಿಂಗ್ ನ್ಯೂಸ್
09-01-24 10:22 pm Mangalore Correspondent ಕರಾವಳಿ
ಉಳ್ಳಾಲ, ಜ.9: ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ, ಬೋಳದ ಲವ-ಕುಶ ಜೋಡುಕರೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಎರಡನೇ ವರ್ಷದ ಸರಕಾರಿ ಹೊನಲು ಬೆಳಕಿನ "ನರಿಂಗಾನ ಕಂಬಳೋತ್ಸವ 2024" ಜ.13ರಂದು ನಡೆಯಲಿದೆ.
ಮೋರ್ಲ -ಬೋಳದ ಕಂಬಳ ಕರೆಯ ಬಳಿ ನಡೆದ ಸುದ್ದಿಗೋಷ್ಟಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷರಾದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ ಜ.13ರ ಶನಿವಾರ ಬೆಳಗ್ಗೆ 10.30ಕ್ಕೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರು ಕಂಬಳವನ್ನ ಉದ್ಘಾಟಿಸಲಿದ್ದು, ವೇದಮೂರ್ತಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರು, ಬೋಳ ಸಂತ ಲಾರೆನ್ಸರ ದೇವಾಲಯದ ಧರ್ಮಗುರು ವಂದನೀಯ ರೆ. ಫಾ. ಪೆಡ್ರಿಕ್ ಕೊರೆಯಾ, ಮಂಜನಾಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಜೀಝ್ ಬಾವ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಜಾತಿ, ಧರ್ಮೀಯರೂ ಜತೆಯಾಗಿ ವೀಕ್ಷಿಸಿ ಆನಂದಿಸುವ ಕ್ರೀಡೆಯೆಂದರೆ ಅದು ಕಂಬಳ ಆಗಿದೆ. ಈ ಪ್ರದೇಶದಲ್ಲಿ ಸಾಮರಸ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಕಂಬಳ ನಡೆಸುತ್ತಿದ್ದು ಇದರಲ್ಲಿ ನನ್ನದು ಅಧ್ಯಕ್ಷತೆ ಮಾತ್ರವೇ ಹೊರತು ಕಂಬಳದ ಯಶಸ್ಸಿಗೆ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಪ್ರತೀ ಸದಸ್ಯರ ಅವಿರತ ದುಡಿಮೆಯೇ ಕಾರಣ ಎಂದರು.
ಶನಿವಾರ ಮಧ್ಯಾಹ್ನ 3.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಗೃಹಸಚಿವರಾಗಿರುವ ಡಾ. ಜಿ. ಪರಮೇಶ್ವರ್, ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾಬಿನೆಟ್ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
5 ಹಿರಿಯ ಸಾಧಕ ಕೋಣಗಳಿಗೆ ಗೌರವ, ಸನ್ಮಾನ
ಕಂಬಳ ಕರೆಯಲ್ಲಿ ಸಾಧನೆಗೈದ ಹಿರಿಯ ನಾಲ್ಕು ಕೋಣಗಳಾದ ಕೊಳಚೂರು ಕಂಡೆಟ್ಟು ಸುಕುಮಾರ್ ಶೆಟ್ಟಿ ಅವರ ಯಜಮಾನತ್ವದ "ಚೆನ್ನ", ನಂದಳಿಕೆ ಶ್ರೀಕಾಂತ್ ಭಟ್ ಅವರ " ಪಾಂಡು", ಬೋಳದಗುತ್ತು ಸತೀಶ್ ಶೆಟ್ಟಿ ಅವರ "ದೋಣಿ" ಹಾಗೂ ಇರುವೈಲು ಪಾನಿಲ ಬಾಡ ಪೂಜಾರಿ ಅವರ ಯಜಮಾನತ್ವದ "ತಾಟೆ" ಹೆಸರಿನ ಕೋಣಗಳಿಗೆ ಗೌರವದ ಸನ್ಮಾನ ನಡೆಯಲಿದ್ದು, ಕಂಬಳದಲ್ಲಿ ಭಾಗವಹಿಸುವ ಕೋಣಗಳ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗವುದೆಂದು ಖಾದರ್ ಹೇಳಿದರು.
ಕಂಬಳ ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಮಿತ್ತಕೋಡಿ ಮಾತನಾಡಿ ಕನೆ ಹಲಗೆ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಮಾತ್ರ ನೀಡಲಾಗುತ್ತಿದ್ದು, ಇನ್ನುಳಿದಂತೆ ಅಡ್ಡ ಹಲಗೆ ವಿಭಾಗ, ಹಗ್ಗದ ವಿಭಾಗದಲ್ಲಿ ಸೀನಿಯರ್ ಹಾಗೂ ಜೂನಿಯರ್, ನೇಗಿಲು ವಿಭಾಗದಲ್ಲಿ ಸೀನಿಯರ್ ಹಾಗೂ ಜೂನಿಯರ್ ಸ್ಪರ್ಧೆಯಲ್ಲಿ ಪ್ರಥಮ , ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ನೀಡಿ ಪುರಸ್ಕರಿಸಲಾಗುವುದು. ಕಂಬಳದಲ್ಲಿ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ನಟಿಯರಾದ ರಿಷಬ್ ಶೆಟ್ಟಿ, ರಚಿತಾ ರಾಮ್, ರೂಪೇಶ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಮಂಜು ಎಂ. ರೈ ಪಾಲ್ಗೊಳ್ಳಲಿದ್ದಾರೆ. ಜ.15ರಂದು ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಮಹಿಳೆಯರಿಗಾಗಿ ಹೊನಲು ಬೆಳಕಿನ ಕ್ರೀಡಾಕೂಟ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದೆ. ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ, ಸಾರಿ ವಾಕ್ ಕಂಬಳಕರೆಯಲ್ಲಿ ಮಹಿಳೆಯರಿಂದ ವೇಗದ ನಡಿಗೆ, ಸಂಗೀತ ಕುರ್ಚಿ, ಬಕೆಟ್ ಒಳಗೆ ಗುರಿ ಇಟ್ಟು ಚೆಂಡೆಸೆತ, ಕಂಬಳಕರೆಯಲ್ಲಿ ನಿಧಿಶೋಧನೆ, ಸಂಗೀತ ಕುರ್ಚಿ, 100 ಮೀ. ಓಟ, 200 ಮೀ. ಓಟದ ಸ್ಪರ್ಧೆಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಪ್ರಮುಖರಾದ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಾಧ್ಯಮ ಸಂಚಾಲಕರಾದ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಮೊದಲಾದವರು ಉಪಸ್ಥಿತರಿದ್ದರು.
Speaker U.T. Khader will preside over the second year of 'Naringana Kambalotsavam' 2024 at Lava-Kusha Jodukare in Morla, Bola in Naringana village of Ullal taluk on January 13.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm