ಬ್ರೇಕಿಂಗ್ ನ್ಯೂಸ್
10-01-24 07:19 pm Mangalore Correspondent ಕರಾವಳಿ
ಮಂಗಳೂರು, ಜ.10: ನವಮಂಗಳೂರು ಬಂದರಿಗೆ ಹೊಸ ವರ್ಷದ ಮೊದಲ ಕ್ರೂಸ್ ಹಡಗು ಆಗಮಿಸಿದೆ. ಎಂ.ಎಸ್. ರಿವೀರಿಯ ಹೆಸರಿನ ಕ್ರೂಸ್ ಹಡಗು ಬುಧವಾರ ಎನ್ಎಂಪಿಟಿ ಬಂದರಿಗೆ ಆಗಮಿಸಿದ್ದು, ಹಡಗಿನಲ್ಲಿ ಬಂದ ವಿದೇಶಿ ಪ್ರವಾಸಿಗರು ಮಂಗಳೂರು ಸುತ್ತಾಡಿದ್ದಾರೆ. ಈ ಸಾಲಿನ ಸೀಸನ್ನಲ್ಲಿ ಬಂದ ನಾಲ್ಕನೇ ಪ್ರವಾಸಿ ಹಡಗು ಇದಾಗಿದೆ.
ಹಡಗಿನಲ್ಲಿ ಸಿಬಂದಿ ಸೇರಿ ಒಟ್ಟು 980 ಪ್ರವಾಸಿಗರಿದ್ದರು. ದುಬೈ, ಮುಂಬೈ, ಮರ್ಮಗೋವಾ ಬಂದರಿನ ಮೂಲಕ ಮಂಗಳೂರಿಗೆ ಆಗಮಿಸಿದ್ದು, ಐಷಾರಾಮಿ ಹಡಗು 239 ಮೀಟರ್ ಉದ್ದವಾಗಿದೆ. 66,172 ಟನ್ ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಡಗಿನಲ್ಲಿ ಬಂದ ಪ್ರವಾಸಿಗರಿಗೆ ಮಂಗಳೂರಿನ ಬಂದರಿಗೆ ಕಾಲಿಡುತ್ತಿದ್ದಂತೆ ಕರಾವಳಿಯ ಸಾಂಪ್ರದಾಯಿಕ ಕಲೆ ಯಕ್ಷಗಾನ ಮೂಲಕ ಸ್ವಾಗತ ನೀಡಲಾಯಿತು. ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಏರ್ಪಡಿಸಲಾಗಿತ್ತು.





ಪ್ರವಾಸಿಗರನ್ನು ಮಂಗಳೂರು ಸುತ್ತಮುತ್ತ ಸುತ್ತಾಡಿಸಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಇಲಾಖೆಯಿಂದ ಮೆಡಿಟೇಶನ್ ಸೆಂಟರ್, ಎನ್ಎಂಪಿಟಿ ಬಂದರಿನಲ್ಲಿ ಫ್ರೀ ವೈಫೈ, ಯಕ್ಷಗಾನ ಕಲಾವಿದರ ಜೊತೆಗೆ ಫೋಟೋ ಕ್ಲಿಕ್ಕಿಸಲು ಸೆಲ್ಫಿ ಸ್ಟಾಂಡ್ ಒದಗಿಸಲಾಗಿತ್ತು. ಹಡಗಿನ ಪ್ರಮುಖ ಅಧಿಕಾರಿಗಳನ್ನು ಎನ್ಎಂಪಿಎ ಬಂದರಿನ ಡೆಪ್ಯುಟಿ ಚೇರ್ಮನ್ ಕೆ.ಜಿ. ನಾಥ್, ಸೆಕ್ರಟರಿ ಜಿಜೋ ಥಾಮಸ್ ಗೌರವಿಸಿದರು. ಆಬಳಿಕ ಪ್ರವಾಸಿಗರಿಗೆಂದೇ ಮಂಗಳೂರಿನ ಸ್ಥಳೀಯ ಕಲಾವಿದರ ತಂಡದಿಂದ ಯಕ್ಷಗಾನ ಏರ್ಪಡಿಸಲಾಗಿತ್ತು.
ಮಂಗಳೂರಿನಲ್ಲಿ ಕಾರ್ಕಳ ಗೊಮ್ಮಟೇಶ್ವರ, ಮೂಡುಬಿದ್ರೆ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯು ಫ್ಯಾಕ್ಟರಿ, ಸೈಂಟ್ ಅಲೋಸಿಯಸ್ ಚರ್ಚ್, ಹಳೆ ಶೈಲಿಯ ಮನೆಗಳಿಗೆ ಪ್ರವಾಸಿಗರು ಭೇಟಿ ನೀಡಿದ್ದು, ಸಂಜೆಯ ವೇಳೆಗೆ ಹಡಗು ಕೊಚ್ಚಿ ಬಂದರಿನತ್ತ ತೆರಳಿತು.
Mangalore Cruise Ship Riviera arrives at NMPT Mangalore Port. A Total of 980 people including staffs and passengers have arrived.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm