ಬ್ರೇಕಿಂಗ್ ನ್ಯೂಸ್
13-01-24 08:52 pm Mangalore Correspondent ಕರಾವಳಿ
ಮಂಗಳೂರು, ಜ.13: ರಾಮ ನಮಗೂ ದೇವರೇ, ನಾವು ಎಲ್ಲಿಯೂ ಇಲ್ಲ ಅನ್ನಲ್ಲ. ನಮ್ಮ ರಾಮ ಮೊದಲಿನ ರಾಮ, ಲಕ್ಷ್ಮಣ, ಸೀತಾ, ಹನುಮಂತ ಸೇರಿ ಕುಟುಂಬ ಸಮೇತ ಇರೋ ರಾಮ. ನಮಗೆ ಕೋಮುವಾದಿ ರಾಮ ಬೇಕಾಗಿಲ್ಲ, ನಮಗೆ ಎಲ್ಲರನ್ನು ಹೊಂದಿಸಿಕೊಂಡು ಹೋಗುವ ರಾಮ ಬೇಕು ಎಂದು ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಸಚಿವ ಬಿ.ನಾಗೇಂದ್ರ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಚಿಕ್ಕಂದಿನಿಂದಲೇ ರಾಮ ಭಜನೆ ಮಾಡಿ ನಾವು ಬೆಳೆದವರು. ನಾವು ಅಯೋಧ್ಯೆಗೆ ಖಂಡಿತ ಹೋಗೇ ಹೋಗ್ತೀವಿ. ರಾಮಮಂದಿರದಲ್ಲಿ ನಮ್ಮ ಭಾಗವೂ ಇದೆ, ನೆಹರೂ ಅವರು ಪ್ರಣಾಳಿಕೆಯಲ್ಲೇ ರಾಮ ಮಂದಿರ ಮಾಡ್ತೀವಿ ಅಂದಿದ್ರು. ದೇವರ ರೀತಿ ನೋಡೋ ರಾಮ ಬೇರೆ, ರಾಜಕೀಯ ಪಕ್ಷದ ಕೋಮುವಾದಿ ರಾಮ ಬೇರೆ. ರಾಮ ನಮ್ಮ ದೇಶದ ಮತ್ತು ನಾಡಿನ ಆಸ್ತಿ. ಅದಕ್ಕೆ ಯಾರೂ ಕರೀಬೇಕಾಗಿಲ್ಲ, ನಾವು ಹೋಗ್ತೇವೆ. ಯಾರೂ ಹೋಗಬೇಡಿ ಅಂದಿಲ್ಲ, ಕುಟುಂಬ ಸಮೇತ ರಾಮನಲ್ಲಿಗೆ ಹೋಗ್ತೇವೆ. ನಾನು ವಾಲ್ಮೀಕಿ ಸಮಾಜದ ವ್ಯಕ್ತಿ, ನಮಗೆ ಕೋಮುವಾದಿ ರಾಮನಂತೂ ಬೇಡ ಎಂದು ಲೇವಡಿ ಮಾಡಿದ್ದಾರೆ.
ಅನಂತ್ ಕುಮಾರ್ ಹೆಗಡೆ ಮಾಧ್ಯಮದಲ್ಲಿ ಫೇಮಸ್ ಆಗಲು ನೋಡ್ತಾರೆ. ಅವರ ಹೇಳಿಕೆ ಮಾಧ್ಯಮಗಳ ಮೂಲಕವೇ ನನಗೆ ಗೊತ್ತಾಯ್ತು. ಅವರು ಜಾತಿ ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು. ಶಾಂತಿ ಕದಡಿ ರಾಜಕೀಯ ಲಾಭ ಪಡೆಯೋ ವ್ಯಕ್ತಿ ಅವರು. ಅವರು ಹೇಳಿದ್ದು ಯಾವುದೇ ಪುಸ್ತಕದಲ್ಲಾಗಲೀ, ಎಲ್ಲಿಯೂ ಉಲ್ಲೇಖ ಇಲ್ಲ, ನಾವೆಲ್ಲ ಅಣ್ಣ ತಮ್ಮಂದಿರಂತೆ ಇದೀವಿ.

ಯಾವುದೇ ಪುಸ್ತಕಗಳಲ್ಲಿ ಮಸೀದಿಗಳು ದೇವಸ್ಥಾನ ಆಗಿತ್ತು ಅಂತ ಉಲ್ಲೇಖ ಇಲ್ಲ. ಅವರಿಗೆ ತಲೆಯಲ್ಲಿ ಬಂದಿದ್ದನ್ನ ಹೇಳಿಕೊಂಡು ಹೋಗ್ತಾರೆ. ಎಲ್ಲಿಯೂ ಉಲ್ಲೇಖ ಇಲ್ಲದ ವಿಚಾರಗಳನ್ನು ಅವರು ತರ್ತಾ ಇದಾರೆ. ಎರಡು ಮೂರು ವರ್ಷ ಅವರು ಎಲ್ಲೂ ಕಾಣಲಿಲ್ಲ. ಈಗ ಚುನಾವಣೆ ಹೊತ್ತಲ್ಲಿ ರಾಜಕೀಯ ಮಾಡೋದು ಸಹಜ. ನಮ್ಮ ರಾಜ್ಯ ಶಾಂತಿಯುತವಾಗಿದೆ, ಶಾಂತಿ ಕದಡಿದ್ರೆ ಎದುರಿಸಲು ಸರ್ಕಾರ ಸಮರ್ಥವಾಗಿದೆ.
ರಾಜೀವ ಗಾಂಧಿ ಸತ್ತಿದ್ದಕ್ಕೆ ಗೋಪಾಷ್ಠಮಿ ಶಾಪ ಅನ್ನೋದು ಸರಿಯಲ್ಲ, ಅದು ಆ ದಿನ ಕಾಕತಾಳೀಯ ಇರಬಹುದು. ಕಾಗೆ ಕೂರೋಕು ಕೊಂಬೆ ಮುರಿಯೋಕು ಅನ್ನೋ ಗಾದೆ ಥರ ಇದು. ಹಾಗಾಗಿ ಇವರ ಮಾತಿಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡಲ್ಲ ಎಂದು ನಾಗೇಂದ್ರ ಹೇಳಿದರು. ಸಿದ್ದರಾಮಯ್ಯನವರ ಬಗ್ಗೆ ಏಕವಚನ ಪ್ರಯೋಗ ಅವರ ಸಂಸ್ಕಾರ ತೋರಿಸುತ್ತದೆ. ವಯಸ್ಸಿನಲ್ಲಿ ಅವರು ತಂದೆ ಸಮಾನರಾಗಿದ್ದಾರೆ. ಅಂಥವರನ್ನ ಏಕವಚನದಲ್ಲಿ ಮಾತನಾಡೋದು ಬೇಳೆ ಬೇಯಿಸಿದಂತೆ. ಅನಂತ್ ಕುಮಾರ್ ಮಾತ್ರ ಅಲ್ಲ, ಇಡೀ ಬಿಜೆಪಿಯೇ ಹಾಗೆ. ಅವರ ಸಂಸ್ಕಾರ, ಸಂಸ್ಕೃತಿ ಏನು ಅನ್ನೋದು ಗೊತ್ತಾಗ್ತಿದೆ ಎಂದರು.
It is not that Rama is god to us and we are nowhere to be found. Our Rama is the first Rama, Lakshmana, Sita, Hanuman and the other with the family. "We don't want a communal Ram, we want a Ram that is inclusive of all," Nagendra said.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm